ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ಸಮೀಕ್ಷೆ


ಗಂಗಾಧರ ಎಸ್, ಸಮಾಜಕಾರ್ಯ ಪ್ರಶಿಕ್ಷಣಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ.

ಅಧ್ಯಾಯ-1 ಪ್ರಸ್ತಾವನೆ
ಪೀಠಿಕೆ:
ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ. ಜಗತ್ತಿನಲ್ಲಿ ಭೂ ಪ್ರದೇಶದಲ್ಲಿ ಶೇಕಡಾ 2.4% ರಷ್ಟು ಪಾಲನ್ನು ಹೊಂದಿರುತ್ತದೆ ಹಾಗೂ 2011ರ ಜನಗಣತಿಯ ಪ್ರಕಾರ 1.21ಕೋಟಿಯಷ್ಟಿದೆ. ಈ ಒಟ್ಟು ಜನಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 72.2%ರಷ್ಟು ಹಾಗೂ ನಗರ ಪ್ರದೇಶದಲ್ಲಿ 27.8% ಜನ ವಾಸಿಸುತ್ತಿದ್ದಾರೆ. ಈ ನಿರುದ್ಯೋಗ ನಿವಾರಣೆಗೆ ಹಾಗೂ ಬಡತನ ನಿರ್ಮೂಲನೆಗಾಗಿ ವಿವಿಧ ಪಂಚವಾರ್ಷಿಕ ಯೋಜನೆಗಳ ಮೂಲಕ ಅನೇಕ ಉದ್ಯೋಗ ನೀಡಿಕೆ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ;
ಸಣ್ಣ ರೈತರ ಅಭಿವೃದ್ಧಿ ಸಂಸ್ಥೆ
ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ ಸಂಸ್ಥೆ
ಬರಗಾಲ ಕಾರ್ಯಕ್ರಮ
ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ
ಗ್ರಾಮೀಣ ಯುವಕರಿಗೆ ಸ್ವ ಉದ್ಯೋಗ ತರಬೇತಿ ಯೋಜನೆ
ಗ್ರಾಮೀಣ ಭೂ ರಹಿತ ಉದ್ಯೋಗ ಭರವಸೆ ಯೋಜನೆ
ಜವಹಾರ್ ರೋಜ್ಗಾರ್ ಯೋಜನೆ ಈ ರೀತಿ ಪ್ರಾರಂಭಿಸಿದ ಹತ್ತು ಹಲವು ಉದ್ಯೋಗ ನಿರ್ಮಾಣ ಯೋಜನೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಬಂದು ಈ ಯೋಜನೆಯನ್ನು 1981ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಮಾನವ ಶಕ್ತಿ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಕೂಲಿಗಾರರಿಗೆ 365 ದಿನಗಳಲ್ಲಿ 100 ದಿನಗಳ ಕೆಲಸ ಒದಗಿಸುವ ಸಲುವಾಗಿ ಪ್ರಾರಂಭಿಸಲಾಯಿತು. ನಂತರ 1980 ಮತ್ತು 1989ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. 1989-90 ರಿಂದ 1993-94ರಲ್ಲಿ ಜವಹಾರ್ ರೋಜಗಾರ್ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಹಿಂದೆ ಜಾರಿಯಲ್ಲಿದ್ದ ಕೆಲವನ್ನು ಕ್ರೂಢೀಕರಿಸಿ ಜವಹಾರ್ ರೋಜ್ಗಾರ್ ಯೋಜನೆಯನ್ನು ಜಾರಿಗೊಳಿಸಲಾಯಿತು. ನಂತರ 1993-94ರಲ್ಲಿ ಉದ್ಯೋಗ ಭರವಸೆ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದರ ಉದ್ದೇಶ ಕೃಷಿ ಕೂಲಿ ಲಭ್ಯವಾಗದ ಅವಧಿಯಲ್ಲಿ 100 ದಿನ ಕೆಲಸ ಒದಗಿಸುವುದಾಗಿತ್ತು.
2004ರ ವರೆಗಿನ ಎಲ್ಲಾ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ-2005ನ್ನು 07-09-2005ರಂದು ಭಾರತ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಮೂಲಕ ಆರಂಭದಲ್ಲಿ 2005-07ನೇ ಸಾಲಿನಲ್ಲಿ ದೇಶದ 200 ಜಿಲ್ಲೆಗಳಿಗೆ ಜಾರಿಗೊಳಿಸಲಾಯಿತು. ಕಾಲಾನಂತರ ಈ ಯೋಜನೆಯನ್ನು ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲಾಯಿತು. ಇತ್ತೀಚೆಗೆ ಈ ಯೋಜನೆಯನ್ನು ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ.

ಸಮಸ್ಯೆಯ ನಿರೂಪಣೆ:
ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನ ಕೂಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯಡಿಯಲ್ಲಿನ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಒಂದು ಸಮೀಕ್ಷೆ.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಸಫಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು.
ಫಲಾನುಭವಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡುವುದು.
ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಅದರ ಪರಿಣಾಮವನ್ನು ತಿಳಿಯುವುದು.
ಫಲಾನುಭವಿಗಳ ಜೀವನ ಮಟ್ಟವನ್ನು ಅಧ್ಯಯನ ಮಾಡುವುದು.

ಅಧ್ಯಯನದ ಅವಶ್ಯಕತೆ ಮತ್ತು ಮಹತ್ವ:
ಭಾರತವು ಹಳ್ಳಿಗಳ ದೇಶ. ಹಿಂದೆ ಹಳ್ಳಿಗಳು ಅಭಿವೃದ್ಧಿ ಹೊಂದಿದ್ದ ಸರಳ ಹಾಗೂ ಸ್ವಯಂ ಪರಿಪೂರ್ಣವಾಗಿದ್ದವು. ನಮ್ಮ ಹಳ್ಳಿಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತವೆ. ಭಾರತದ ಬಗ್ಗೆ ಸರ್ಕಾರವು ಅದಕ್ಕಾಗಿ ಸಾಕಷ್ಟು ಖರ್ಚು ವೆಚ್ಚ ಮಾಡಿದೆ. ಇಂತಹ ಕಾರ್ಯಕ್ರಮಗಳನ್ನು ಒಂದಾದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಸಮೀಕ್ಷಿಸಿ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಈ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ 07-09-2005 ರಂದು ಭಾರತದ ರಾಷ್ಟ್ರ ಪತ್ರದಲ್ಲಿ ಪ್ರಕಟಿಸಲಾಗಿದ್ದು, ದೇಶದ 200 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಇಷ್ಟೊಂದು ಸಂಕೀರ್ಣವಾದ ಹಾಗೂ ಬೃಹತ್ ವೈಖರಿ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿಲ್ಲದಿರುವುದು ವಿಷಾದನೀಯವಾಗಿದೆ. ಕೆಲವೇ ಕೆಲವರು ಈ ಬಗ್ಗೆ ಅಧ್ಯಯನ ಕೈಗೊಂಡಿದ್ದರೂ, ಅವುಗಳ ವರದಿ ಓದುಗರಿಗೆ ಲಭ್ಯವಾಗಿಲ್ಲದಿರುವುದು ಗಮನಿಸಬೇಕಾದ ವಿಷಯವಾಗಿದೆ.
ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕೋಲಾರ ಜಿಲ್ಲೆಯ ಕೋಂಡರಾಜನ ಹಳ್ಳಿಯಡಿಯಲ್ಲಿ 10 ಗ್ರಾಮಗಳಲ್ಲಿ ಈ ಯೋಜನೆಯ ಕಾರ್ಯ ವೈಖರಿಯನ್ನು ಘಟಕ ಅಧ್ಯಯನ ಉಪಕ್ರಮದಿಂದ ಪರಿಶೀಲಿಸುವ ಉದ್ದೇಶದಿಂದ ಪ್ರಸ್ತುತ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಗಿದೆ.
ಏನಾದರೂ ತಿಳಿಯುವುದಾದರೆ ಮೊದಲು ಅದರ ಗ್ರಾಮಗಳನ್ನು ತಿಳಿಯಬೇಕೆಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ನಮ್ಮ ಹಳ್ಳಿಗಳು ಮುಸ್ಲಿಂ ಮತ್ತು ಬ್ರಿಟೀಷರ ದಬ್ಬಾಳಿಕೆಯಿಂದ ಶೋಷಿಸಲ್ಪಟ್ಟು ಹಿಂದುಳಿದವು. ನಮ್ಮ ಸಾಂಪ್ರದಾಯಿಕ ಕಸುಬುಗಳು ಕರಕುಶಲತೆ, ಗುಡಿ ಮತ್ತು ಗೃಹ ಕೈಗಾರಿಕೆಗಳು ನಶಿಸಿ ಹೋದವು. ಬಡತನ, ನಿರುದ್ಯೋಗ, ಅನಕ್ಷರತೆ, ದಾರಿದ್ರ್ಯ ಮೊದಲಾದ ಸಮಸ್ಯೆಗಳು ನಮ್ಮ ಹಳ್ಳಿಗಳನ್ನು ಆವರಿಸಿದೆ. ಹಳ್ಳಿ ಜನರ ಜೀವನ ಮಟ್ಟ ತುಂಬಾ ಕೆಳಮಟ್ಟದಾಗಿದೆ. ಅದಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಕ್ಷೇತ್ರ ಅಭಿವೃದ್ಧಿ ಯೋಜನೆಗಳು ಹಮ್ಮಿಕೊಳ್ಳಲಾಗಿತ್ತು.
ಸ್ವಾತಂತ್ರ್ಯ ನಂತರೂ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಗವತಿ ಸಮಿತಿಯ ಅಂದಾಜಿನ ಮೇರೆಗೆ 1971 ರಲ್ಲಿ ಭಾರತದಲ್ಲಿ 18.7 ದಶಲಕ್ಷ ನಿರುದ್ಯೋಗಿಗಳು ಅದರಲ್ಲಿ ಗ್ರಾಮೀಣ ಭಾಗದಲ್ಲಿ 16.1 ದಶಲಕ್ಷ ಜನರಿದ್ದರು. 1997-98ರ ಆರ್ಥಿಕ ಸಮೀಕ್ಷೆ ಪ್ರಕಾರ 1997 ರಲ್ಲಿ 75 ದಶಲಕ್ಷ ನಿರುದ್ಯೋಗಿಗಳಿದ್ದರು. ಒಟ್ಟಾರೆ ಪ್ರಸ್ತುತ 27 ದಶಲಕ್ಷ ನಿರುದ್ಯೋಗಿಗಳಿದ್ದರು. ಅದರಲ್ಲಿ ಗ್ರಾಮೀಣ ಭಾಗದಲ್ಲಿ 19.50 ದಶಲಕ್ಷ ನಗರದಲ್ಲಿ 7.11 ದಶಲಕ್ಷ ಜನರಿದ್ದಾರೆ. ಆದುದರಿಂದ ನಿರುದ್ಯೋಗ ನಿವಾರಣೆಗೆ IRDP, NREP, TRYSEM, RLEGP, JRY, NRY ನಂತರದ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ.

ಉದ್ಯೋಗದ ಅರ್ಥ ಮತ್ತು ಪ್ರಾಮುಖ್ಯತೆ:
ಭಾರತವು ಮಾನವ ಸಂಪನ್ಮೂಲಗಳನ್ನು ಹೊಂದಿದೆ. ಭಾರತವು ಅರ್ಧದಷ್ಟು ಯುವ ಜನರನ್ನು ಹೊಂದಿರುವುದರಿಂದ ಯುವ ಜನ ರಾಷ್ಟ್ರ ಎಂಬ ಹೆಸರಿಗೆ ಪಾತ್ರವಾಗಿದೆ. ಮಾನವ ಸಂಪನ್ಮೂಲ ಎಂಬ ಪರಿಕಲ್ಪನೆಯು ದೇಶವೊಂದರ ಮಾನವ ಬಂಡವಾಳವನ್ನು ಪ್ರತಿನಿಧಿಸುತ್ತದೆ. ಮಾನವ ಬಂಡವಾಳ ಎಂದರೆ ದೇಶದ ಜನಸಂಖ್ಯೆಯ ಅಳವು, ನೈಪಣ್ಯತೆ ಮತ್ತು ತಾಂತ್ರಿಕ ಜ್ಞಾನದ ತಿಳುವಳಿಕೆಯಾಗಿದೆ. ಇಂತಹ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಂತಹವರಿಗೆ ಉದ್ಯೋಗ ನೀಡಬೇಕು. ಕೆಲಸ ಮಾಡುವ ಅಳವು ಮತ್ತು ಮನಸ್ಸಿರುವವರಿಗೆ ಕೆಲಸವನ್ನು ನಿರ್ವಹಿಸುವುದೇ ಉದ್ಯೋಗವಾಗಿದೆ. ಉದ್ಯೋಗ ಮಾಡುವವರಿಗೆ ಸರಿಯಾದ ಉದ್ಯೋಗ ನೀಡಿದರೆ ಜನರ ಜೀವನ ಮಟ್ಟದೊಂದಿಗೆ ದೇಶವೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ.

ಗ್ರಾಮೀಣ ಉದ್ಯೋಗ ಭರವಸಾ ಕಾರ್ಯಕ್ರಮ:
ಸ್ವಾತಂತ್ರ್ಯಾ ನಂತರ ನಮ್ಮ ದೇಶದಲ್ಲಿ ಬಡತನ ನಿವಾರಣೆ ಹಾಗೂ ಉದ್ಯೋಗ ಸೃಷ್ಟಿ ಮಾಡಲು ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಈ ಯೋಜನೆಗಳ ಮೂಲಕ ಗ್ರಾಮೀಣ ನಿರುದ್ಯೋಗ ಹೋಗಲಾಡಿಸಲು ಅನೇಕ ಉದ್ಯೋಗ ಸೃಷ್ಟಿ ಯೋಜನೆಯನ್ನು ರೂಪಿಸಲಾಯಿತು.

ಹಿನ್ನೆಲೆ:
1961 ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಮಾನವ ಶಕ್ತಿ ಕಾರ್ಯಕ್ರಮ ನಿರ್ದಿಷ್ಟ ಪ್ರದೇಶದಲ್ಲಿ ಗ್ರಾಮೀಣ ಯುವಕ-ಯುವತಿಯರಿಗೆ ಕೆಲಸವನ್ನು ಮಾಡುವ ಮನಸ್ಸಿರುವವರಿಗೆ ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವುದಾಗಿತ್ತು. 1980 ಮತ್ತು 1989ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮದ [NREP] ಉದ್ದೇಶ ಆಹಾರ ಧಾನ್ಯ ಬಳಸಿ ಗ್ರಾಮೀಣ ಮೂಲಭೂತ ಸೌಕರ್ಯ ಒದಗಿಸುವುದು.
1983 ಮತ್ತು 1989 ರಲ್ಲಿ ಗ್ರಾಮೀಣ ಭೂ ರಹಿತ ಉದ್ಯೋಗ ಖಾತರಿ ಕಾರ್ಯಕ್ರಮ ಜಾರಿಗೆ ತರಲಾಯಿತು. ಇದರ ಉದ್ದೇಶ ಭೂ ರಹಿತ ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರಕಿಸುವುದಾಗಿದೆ. 1989-1991 ರಿಂದ 1993-94 ರಲ್ಲಿ ಜವಹಾರ್ ರೋಜ್ಗಾರ್ ಯೋಜನೆ ಜಾರಿಗೆ ತರಲಾಯಿತು. ಈ ಹಿಂದೆ ಜಾರಿಯಲ್ಲಿದ್ದ NREP ಮತ್ತು RLEGP ಕಾರ್ಯಕ್ರಮಗಳನ್ನು ಕ್ರೋಢಿಕರಿಸಿ ಜವಾಹರ್ ರೋಜ್ಗಾರ್ ಯೋಜನೆಯನ್ನು ಜಾರಿಗೊಳಿಸಲಾಯಿತು. ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳಿಗೆ ನೇರ ಅನುದಾನ ಮತ್ತು ಅನುಷ್ಠಾನದ ಜವಾಬ್ದಾರಿ ನೀಡಲಾಯಿತು. ನಂತರ 1993-94ರಲ್ಲಿ ಉದ್ಯೋಗ ಭರವಸೆ ಯೋಜನೆ ಜಾರಿಗೆ ತರಲಾಯಿತು. ಇದರ ಉದ್ದೇಶ ಕೃಷಿ ಕೂಲಿ ಲಭ್ಯವಾಗುವ ಅವಧಿಯಲ್ಲಿ 100 ದಿನಗಳ ಕೆಲಸ ಒದಗಿಸುವುದಾಗಿತ್ತು.
1992-2002 ರಲ್ಲಿ ಜವಾಹರ್ ಗ್ರಾಮ ಸಮೃದ್ದಿ ಯೋಜನೆ [JGSY] ಜಾರಿಗೆ ಬಂದಿತ್ತು. ಇದರಲ್ಲಿ ಸ್ವ-ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಲಾಯಿತು. 2001 ರಲ್ಲಿ ಸಂಪೂರ್ಣ ಗ್ರಾಮೀಣ ರೋಜ್ಗಾರ್ ಯೋಜನೆಯನ್ನು EAS ಹಾಗೂ JGSY ಕಾರ್ಯಕ್ರಮಗಳನ್ನು ಕ್ರೂಢೀಕರಿಸಿ ಜಾರಿಗೆ ತರಲಾಯಿತು. ಸಂಪೂರ್ಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡುವ ಅವಕಾಶವಿತ್ತು. 2004 ರಲ್ಲಿ ಕೇಂದ್ರ ಸರ್ಕಾರದಿಂದ ಕೂಲಿಗಾಗಿ ಕಾಳು ಯೋಜನೆ ಜಾರಿಗೆ ತರಲಾಯಿತು. 2004 ರ ವರೆಗಿನ ಎಲ್ಲಾ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳ ಸಾಧಕ-ಬಾದಕಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಗ್ರಾಮೀಣ ಖಾತರಿ ಕಾಯಿದೆ 2005 ನ್ನು ಪತ್ರದಲ್ಲಿ ಪ್ರಕಟಿಸಿರುವ ಮೂಲಕ ಆರಂಭಿಸಲಾಯಿತು. 2006-07ನೇ ಸಾಲಿನಲ್ಲಿ ದೇಶದ 200 ಜಿಲ್ಲೆಗಳಲ್ಲಿ ಜಾರಿಗೆ ಬಂದಿತು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ-2005:
ಸ್ವತಂತ್ರ್ಯ ನಂತರ ದೇಶದಲ್ಲಿ ಈವರೆಗೆ ಜಾರಿಗೊಂಡ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮದ ಸಾಧಕ-ಬಾದಕಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ (2005) 07-09-2005 ರಂದು ಭಾರತ ರಾಷ್ಟ್ರ ಪತ್ರದಲ್ಲಿ ಪ್ರಕಟಿಸಲಾಗಿದೆ. ಆರಂಭದಲ್ಲಿ ದೇಶದ 200 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ:
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಅನುಷ್ಠಾನಗೊಳಿಸುತ್ತಿದ್ದು ಪ್ರಾದೇಶಿಕ ಭಿನ್ನತೆ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅಧಿನಿಯಮಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಅಂದಿನಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ ಜಾರಿಗೊಂಡಿದೆ. ಮೊದಲ ಹಂತದಲ್ಲಿ ರಾಜ್ಯದ 5 ಜಿಲ್ಲೆಗಳ 32 ತಾಲ್ಲೂಕುಗಳನ್ನು ಡಾ|| ನಂಜುಂಡಪ್ಪ ವರದಿಯ ಸೂಚ್ಯಾಂಕದ ಆಧಾರದಂತೆ ಆಯ್ಕೆ ಮಾಡಲಾಗಿದೆ. ಬೀದರ್, ಗುಲ್ಬರ್ಗಾ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ 2006-07 ರಲ್ಲಿ ಅನುಷ್ಠಾನಗೊಳಿಸಲಾಗಿದೆ. 2007-08 ರಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳನ್ನು ಎರಡನೇ ಹಂತದಲ್ಲಿ ಆಯ್ಕೆ ಮಾಡಲಾಯಿತು. ಒಟ್ಟಾರೆ ರಾಜ್ಯದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಈಗ ಉಳಿದೆಲ್ಲಾ 18 ಜಿಲ್ಲೆಗಳಲ್ಲೂ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಇತ್ತೀಚೆಗೆ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ.

ಉದ್ದೇಶಗಳು:
ಸ್ವ-ಇಚ್ಛೆಯಿಂದ ಅರ್ಜಿ ಸಲ್ಲಿಸಿರುವ ಕುಶಲ-ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ವಯಸ್ಕರ ಸದಸ್ಯರ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸಿ ಅದರ ಜೀವನಕ್ಕೆ ಭದ್ರತೆ ಒದಗಿಸುವುದು.
ದೀರ್ಘಕಾಲ ಬಾಳಿಕೆ ಆಸ್ತಿಗಳನ್ನು ಸೃಷ್ಟಿಸುವುದು.
ಗ್ರಾಮೀಣ ಜನರಿಗೆ ದೀರ್ಘಕಾಲದ ಜೀವನೋಪಾಯದ ಮಾರ್ಗಗಳನ್ನು ಬಲಪಡಿಸುವುದು.
ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ವಲಸೆ ಹೋಗುವುದನ್ನು ತಪ್ಪಿಸುವುದು.

ಹಕ್ಕುಗಳು ಮತ್ತು ಅಧಿಕಾರಿಗಳು:
ಕುಟುಂಬ ಉದ್ಯೋಗ ಭೇಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.
ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬ 100 ಮಾನವ ದಿನಗಳ ಅಕುಶಲ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.
ಅಕುಶಲ ಉದ್ಯೋಗ ಕೋರಿದ 15 ದಿನಗಳೊಳಗಾಗಿ ಉದ್ಯೋಗ ಒದಗಿಸಿದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ದಿನಗಳಿಗೆ ಕನಿಷ್ಟ ಕೂಲಿಯ ಶೇಕಡಾ 25% ರಷ್ಟನ್ನು ಮತ್ತು ಉಳಿದ ಅವಧಿಗೆ ಕನಿಷ್ಠ ಕೂಲಿಯ ಶೇಕಡ 30% ರಷ್ಟನ್ನು ನಿರುದ್ಯೋಗ ಭತ್ಯೆಯಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
ಸಾಧ್ಯವಾದಷ್ಟು ಮಟ್ಟಿಗೆ ಕೆಲಸವನ್ನು ಆ ಗ್ರಾಮದ ವ್ಯಾಪ್ತಿಯಲ್ಲಿಯೇ ಒದಗಿಸಬೇಕು. ಗ್ರಾಮದಿಂದ 5 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದೆ ಆದರೆ ಕನಿಷ್ಟ ಕೂಲಿಯ ಶೇಕಡ 10% ರನ್ನು ಹೆಚ್ಚುವರಿಯಾಗಿ ಸಾರಿಗೆ ಮತ್ತು ಜೀವನ ವೆಚ್ಚಕ್ಕಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
ಕೆಲಸ ಕೋರುವ ನೋಂದಾಯಿತ ಅರ್ಜಿದಾರರ ಪೈಕಿ ಕನಿಷ್ಟ 1/3 ರಷ್ಟರಂತೆ ಮಹಿಳೆಯರಿಗೆ ಆದ್ಯತೆಯ ಮೇರೆಗೆ ಉದ್ಯೋಗ ಒದಗಿಸಬೇಕು.
ಪಾವತಿಗೆ ಬಾಕಿಯಾದ 15 ದಿನಗಳೊಳಗಾಗಿ ಕೂಲಿಯನ್ನು ಪಾವತಿಸದಿದ್ದಲ್ಲಿ ಅವರು ಕೂಲಿ ಪಾವತಿ ಅಧಿನಿಯಮ 1936 (4/1936)ರ ಅನ್ವಯ ಪರಿಹಾರ ಪಡೆಯಲು ಹಕ್ಕುಳವರಾಗಿರುತ್ತಾರೆ.
ಸಮಾನ ವೇತನ ಅಧಿನಿಯಮ 1976 (25/1976) ಅನ್ವಯ ಲಿಂಗಾಧಾರಿತ ತಾರತಮ್ಯ ಮಾಡತಕ್ಕದಲ್ಲ.
ಕಾಮಗಾರಿಯ ಸಮೀಪ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
ಕಾಮಗಾರಿಯ ಸ್ಥಳದಲ್ಲಿ 6 ವರ್ಷಕ್ಕೂ ಕಡಿಮೆ ವಯಸ್ಸಿನ 5ಕ್ಕಿಂತ ಹೆಚ್ಚಿನ ಮಕ್ಕಳು ಕಾರ್ಮಿಕರೊಂದಿಗೆ ಬಂದಲ್ಲಿ ಜನರನ್ನು ನೋಡಿಕೊಳ್ಳಲು ಕಾರ್ಮಿಕರ ಪೈಕಿ ಒಬ್ಬ ಮಹಿಳೆಯನ್ನು ನೇಮಿಸಬೇಕು ಮತ್ತು ಆ ಮಹಿಳೆಗೆ ಕೂಲಿಯನ್ನು ಪಾವತಿಸಬೇಕು.
ಕಾಮಗಾರಿಯ ಸ್ಥಳದಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ಗಾಯಗಳಾದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು.
ಕಾಮಗಾರಿ ಸಂಬಂಧ ಯಾವುದೇ ಕಾರ್ಮಿಕರಿಗೆ ಗಾಯಗಳಾದಾಗ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಕಂಡು ಬಂದಲ್ಲಿ ಅವರು ಔಷಧಿ ವೈದ್ಯಕೀಯ ಚಿಕಿತ್ಸೆ ವಸತಿ ಇತ್ಯಾದಿ ಉಚಿತ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಹಕ್ಕುಗಳುಳ್ಳವರಾಗಿರುತ್ತಾರೆ.
ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಧಿಗೆ ಪ್ರತಿದಿನಕ್ಕೆ ಆ ದಿನದ ಕೂಲಿಯ ಶೇಕಡ 50% ರಷ್ಟು ಕೂಲಿಯನ್ನು ದಿನ ಭತ್ಯೆಯಾಗಿ ಹಕ್ಕುಳ್ಳವರಾಗಿರುತ್ತಾರೆ.
ಕಾಮಗಾರಿಯ ಕಾರಣದಿಂದಾಗಿ ಕಾರ್ಮಿಕರು ಶಾಶ್ವತವಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಸಂದರ್ಭಕ್ಕೆ ತಕ್ಕಂತೆ ಅವರು ಅಥವಾ ಅವರ ವಾರಸುದಾರರು 25,000/- ಅಥವಾ ಕೇಂದ್ರ ಸರ್ಕಾರ ನಿಗಧಿಪಡಿಸಬಹುದಾದ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
ಕಾಮಗಾರಿಯ ಸ್ಥಳದಲ್ಲಿ ಇರುವ ಮಕ್ಕಳಿಗೆ ಗಾಯಗಳಾದಾಗಾ ಶಾಶ್ವತ ಅಂಗವಿಕಲತೆ ಉಂಟಾದಾಗ ಮೃತಪಟ್ಟಲ್ಲಿ ಅವರೂ ಸಹ ಮೇಲಿನಂತೆ ಚಿಕಿತ್ಸೆ ಮತ್ತು ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.

ನೋಂದಣಿ:
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಕುಟುಂಬದ ವಯಸ್ಕ ಸದಸ್ಯರ ಪೈಕಿ ಯಾರಾದರೂ ತಮ್ಮ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರಿಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯು ದಿನಾಂಕ ಸೂಚಿಸುವ ಸ್ವೀಕೃತಿ ನೀಡಿ ವಿವರಗಳನ್ನು ಅರ್ಜಿಗಳ ನೋಂದಣಿ ವಹಿ (ನಮೂನೆ-2) ಮತ್ತು ಉದ್ಯೋಗಾಕಾಂಕ್ಷಿಗಳ ಹಾಗೂ ಉದ್ಯೋಗ ಬೇಕೆನ್ನುವ ನೋಂದಣಿ ಪ್ರಕ್ರಿಯೆ ಕನಿಷ್ಠ 5 ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ. ಗ್ರಾಮ ಪಂಚಾಯಿತಿಗೆ ಅವಶ್ಯಕತೆವೆನಿಸಿದಲ್ಲಿ ಉದ್ಯೋಗ ಚೀಟಿಯನ್ನು ನವೀಕರಿಸಬಹುದಾಗಿದೆ.

ಉದ್ಯೋಗ ಚೀಟಿ ವಿತರಣೆ:
ಅಗತ್ಯ ವಿಚಾರ ಮಾಡಿ ನೊಂದಾಯಿತ ಪ್ರತಿ ಕುಟುಂಬಕ್ಕೆ ಪ್ರತ್ಯೇಕ ಸಂಖ್ಯೆಯಿರುವ ಕುಟುಂಬದ ಚೀಟಿಯನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರು ವಿತರಿಸಬೇಕು. ವಿವರಗಳನ್ನು ಕುಟುಂಬ ಉದ್ಯೋಗ ಚೀಟಿ ವಿತರಣಾ ವಹಿ ದಾಖಲಿಸಬೇಕು.
ಉದ್ಯೋಗ ಚೀಟಿ ನೀಡಿ ಒಂದು ತಿಂಗಳೊಳಗಾಗಿ ಕುಟುಂಬದ ನೋಂದಾಯಿತ ಪ್ರತಿ ಸದಸ್ಯರ ಸ್ಟ್ಯಾಂಪ್ ಅಳತೆಯ ಭಾವಚಿತ್ರವನ್ನು ಉದ್ಯೋಗ ಚೀಟಿಗೆ ಅಂಟಿಸಬೇಕು ಮತ್ತು ನೀಡಿದ ಕೂಲಿಯ ದಿನಗಳ ಹಾಗೂ ಪಾವತಿಸಿದ ಕೂಲಿಯ ವಿವರಗಳನ್ನು ಕುಟುಂಬ ಉದ್ಯೋಗ ಚೀಟಿ ನಮೂನೆ-ಎ ಹಾಗೂ ಉದ್ಯೋಗಾಕಾಂಕ್ಷಿಗಳ ಮತ್ತು ಉದ್ಯೋಗದ ವಹಿ ನಮೂನೆ-3 ರಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಗಿಂದಾಗ್ಗೆ ದಾಖಲಿಸಬೇಕು. ಕಾರಣಾಂತರಗಳಿಂದಾಗಿ ಉದ್ಯೋಗ ಚೀಟಿ ಕಳೆದುಹೋದಲ್ಲಿ ಅಥವಾ ಹರಿದು ಹೋದಲ್ಲಿ ನಕಲು ಉದ್ಯೋಗ ಚೀಟಿಗಾಗಿ ಗ್ರಾಮ ಪಂಚಾಯಿತಿಗೆ ನಿಗಧಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 07 ದಿನಗಳೊಳಗಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅರ್ಜಿಯನ್ನು ಪರಿಶೀಲಿಸಿ ನಕಲು ಪ್ರತಿಯನ್ನು ಅರ್ಜಿದಾರರಿಗೆ ವಿತರಿಸಬೇಕು.

ಕೆಲಸಕ್ಕಾಗಿ ಅರ್ಜಿ ಹಾಗೂ ಉದ್ಯೋಗ ನೀಡಿಕೆ:
ಉದ್ಯೋಗ ಚೀಟಿ ಹೊಂದಿರುವವರು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ಉದ್ಯೋಗ ಬೇಡಿಕೆಯ ವಿವರಗಳನ್ನು ನಮೂನೆ-06 ರಲ್ಲಿ ದ್ವಿ ಪ್ರತಿಯಲ್ಲಿ ದಾಖಲಿಸಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬೇಕು ಅಥವಾ ಉದ್ಯೋಗವನ್ನು ಕೋರಿ ಮುಂಗಡ ಅರ್ಜಿಯನ್ನು ಸಲ್ಲಿಸಬಹುದು. ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಒಮ್ಮೆಗೆ ಸಲ್ಲಿಸಬಹುದು ಆದರೆ ಇವುಗಳಲ್ಲಿ ಉದ್ಯೋಗ ಬೇಡಿಕೆಯ ಅವಧಿಯ ಪ್ರತ್ಯೇಕವಾಗಿರಬೇಕು.
ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸ್ವೀಕರಿಸಿ ಅರ್ಜಿದಾರರಿಗೆ ಸ್ವೀಕೃತಿ ನೀಡಬೇಕು. ಸತತ 14 ದಿನಗಳವರೆಗೆ ಅರ್ಜಿದಾರರು ಕೆಲಸ ಕೇಳಬೇಕು. ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಉದ್ಯೋಗ ಬೇಡಿಕೆವಹಿಯಲ್ಲಿ ದಾಖಲಿಸಬೇಕು. ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ ದಿನಾಂಕದಿಂದ 15 ದಿನಗಳೊಳಗೆ ಕೆಲಸ ನೀಡಬೇಕು. ಚಾಲ್ತಿಯಲ್ಲಿರುವ ಅಥವಾ ಹೊಸದಾಗಿ ಪ್ರಾರಂಭಿಸುವ ಕಾಮಗಾರಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಗ್ರಾಮ ಪಂಚಾಯಿತಿ ಉದ್ಯೋಗ ನಮೂನೆ-08 ರಲ್ಲಿ ನೋಟಿಸ್ಸನ್ನು ಜಾರಿ ಮಾಡಬೇಕು. ಉದ್ಯೋಗ ನೀಡಿದ ವಿವರವನ್ನು ನಮೂನೆ-09 ರಲ್ಲಿ ಸಾರ್ವಜನಿಕರ ತಿಳುವಳಿಕೆಯಾಗಿ ಪ್ರಚಾರ ಮಾಡಬೇಕು. ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೆಲಸವನ್ನು ಕೊಡಲು ಸಾಧ್ಯವಾಗದಿದ್ದಲ್ಲಿ ಅವರ ಅರ್ಜಿಗಳನ್ನು ಕಾರ್ಯಕ್ರಮ ಅಧಿಕಾರಿಯು ಪರಿಶೀಲಿಸಿ ಆತ ಆ ತಾಲ್ಲೂಕಿನಲ್ಲಿರುವ ಇತರೇ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರಬಹುದಾದ ಕೆಲಸದಲ್ಲಿ ತೊಡಗಲು ಸಹಾಯಕವಾಗುವಂತೆ ಅದನ್ನು ಸಂಬಂಧಿಸಿದ ಎರಡು ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳಿಗೆ ಕಳುಹಿಸಬೇಕು.

ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು:
ಒಂದು ಆರ್ಥಿಕ ವರ್ಷದಲ್ಲಿ ಉದ್ಯೋಗ ಬಯಸುವ ಪ್ರತಿ ನೋಂದಾಯಿತ ಕುಟುಂಬಕ್ಕೆ 100 ದಿನಗಳಿಗೆ ಕಡಿಮೆ ಇಲ್ಲದಂತೆ ಅಕುಶಲ ಕೆಲಸವನ್ನು ಒದಗಿಸುವುದು.
ವಾರದ ಕೂಲಿಯನ್ನು 15 ದಿನದೊಳಗಾಗಿ ಪಾವತಿಸತಕ್ಕದ್ದು.
ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ಒದಗಿಸುವುದು.
ಜನರು ಮಾಡಬಹುದಾದ ಕೆಲಸಗಳಿಗೆ ಯಂತ್ರಗಳನ್ನು ಬಳಸತಕ್ಕದ್ದಲ್ಲ
ಈ ಯೋಜನೆಯಡಿ ಗುತ್ತಿಗೆದಾರರ ಸಂಪೂರ್ಣ ನಿಷೇಧವಾಗಿದ್ದು, ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ಗ್ರಾಮ ಸಭೆಯಲ್ಲಿಯೇ ಗುರ್ತಿಸುವುದು.
ಗ್ರಾಮ ಪಂಚಾಯಿತಿ ಅನುಮೋದಿಸಿದ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಪಂಚಾಯಿತಿ ಅನುಮೋದಿಸಿದ ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳತಕ್ಕದ್ದು.

ಕಾಯ್ದೆಯ ವಿರುದ್ಧ ಧೋರಣೆಗೆ ದಂಡ: ಈ ಕಾಯ್ದೆಯಡಿಯಲ್ಲಿ ಯೋಜನೆಯ ಅನುಷ್ಠಾನದ ವಿರುದ್ಧ ಧೋರಣೆ ತಳೆದರೆ ರೂ.1,000/- ವರೆಗೆ ದಂಡ ವಿಧಿಸಲಾಗುತ್ತದೆ.
ಕಾಮಗಾರಿ ಪ್ರಾರಂಭ ಪತ್ರ: ಕಾಮಗಾರಿಗಳ ಒಟ್ಟು ಮೊತ್ತದ ಕನಿಷ್ಠ ಶೇಕಡ 30% ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗಳು ನಿರ್ವಹಿಸಬೇಕು. ಉದ್ಯೋಗ ಬೇಡಿಕೆಗೆ ಅನುಸಾರವಾಗಿ ಕಾಮಗಾರಿಗಳನ್ನು ಆರಂಭಿಸಲು ಕಾಮಗಾರಿ ಪ್ರಾರಂಭ ಪತ್ರ ನೀಡುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಾರ್ಯಕ್ರಮ ಅಧಿಕಾರಿಗೆ ಕೋರಿಕೆ ಸಲ್ಲಿಸಬೇಕು. ಜಿಲ್ಲಾ ಕಾರ್ಯಕ್ರಮ ಅಧಿಕಾರಿಯು ಆಡಳಿತಾತ್ಮಕ ಅನುಮೋದನೆ ನೀಡಿದ ಪಟ್ಟಿಯಲ್ಲಿರುವ ಅನುಕ್ರಮದಂತೆ ಕಾಮಗಾರಿಗಳನ್ನು ಆರಂಭಿಸಲು ಕಾರ್ಯಕ್ರಮ ಅಧಿಕಾರಿ ಗ್ರಾಮ ಪಂಚಾಯಿತಿಗಳಿಗೆ ಕಾಮಗಾರಿ ಪ್ರಾರಂಭ ಪತ್ರ ನೀಡಬೇಕು. ಕಾಮಗಾರಿ ಪತ್ರವನ್ನು ಪಡೆದು ಕೂಡಲೇ ನಿರ್ವಹಣಾ ಏಜೆನ್ಸಿಗಳು ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಮುಕ್ತಾಯದ ವರದಿಯೊಂದಿಗೆ ಕಾಮಗಾರಿಯನ್ನು ಅಂತಿಮಗೊಳಿಸಬೇಕು.

ಕೂಲಿ ಪಾವತಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ದಿನಕೂಲಿ ರೂ.74% ರೂಪಾಯಿ ಕಾಮಗಾರಿ ಸ್ಥಳ ಕೂಲಿ ಕಾರ್ಮಿಕರ ವಾಸಸ್ಥಳದಿಂದ 5 ಕಿ.ಮೀ.ಗಿಂತ ದೂರವಿದ್ದಲ್ಲಿ ಹೆಚ್ಚುವರಿ ಶೇಕಡ 10 ರಂತೆ ದಿನಕೂಲಿಯನ್ನು ಪಾವತಿಸಬೇಕು ಅಂದರೆ ರೂ. 7-40ನ್ನು ಸೇರಿಸಿ ಒಟ್ಟು ರೂ. 81-46 ರೂ ಪಾವತಿಸಬೇಕು. ಪ್ರತಿ ವಾರಾಂತ್ಯ ಕೂಲಿ ಪಾವತಿ ಅನಿವಾರ್ಯವಾದ್ದಲ್ಲಿ 15 ದಿನಗಳಿಗೆ ಮೀರಿದಂತೆ ಕೂಲಿ ಪಾವತಿ ಮಾಡಬೇಕು. ಕುಟುಂಬದ ಸದಸ್ಯರು ಗಳಿಸಿದ ಮಜೂರಿ ಹಣವನ್ನು ಕುಟುಂಬದ ಸದಸ್ಯರು ಗಳಿಸಿದ ಮಜೂರಿ ಹಣವನ್ನು ಗ್ರಾಮ ಪಂಚಾಯಿತಿಯ ಮೂಲಕ ಕುಟುಂಬದ ಜಂಟಿ ಉಳಿತಾಯ ಖಾತೆಗೆ ಜಮೆ ಮಾಡಬೇಕು.
ನಿರುದ್ಯೋಗ ಭತ್ಯೆ: ಅಕುಶಲ ಕಾರ್ಮಿಕ ಉದ್ಯೋಗ ಕೂಲಿ ಅರ್ಜಿ ಸಲ್ಲಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ಪಾವತಿಗಾಗಿ ಅರ್ಜಿದಾರರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಬೇಕು. ಈತ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಲ್ಲದವರ ಅರ್ಜಿ ತಿರಸ್ಕರಿಸಿ ಹಿಂಬರಹ ನೀಡಬೇಕು. ಅರ್ಹರಿದ್ದಲ್ಲಿ ನಿರುದ್ಯೋಗ ಭತ್ಯೆ ಮಂಜೂರು ಮಾಡಬೇಕು. ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ದಿನಗಳಿಗೆ ಕನಿಷ್ಠ ಕೂಲಿಯ 25% ಮತ್ತು ಉಳಿದ ಅವಧಿಗೆ ಶೇಕಡ 50% ರಷ್ಟನ್ನು ನಿರುದ್ಯೋಗ ಭತ್ಯೆಯಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
ಅರ್ಜಿದಾರರು ಕೋರಿದ ಅವಧಿಯು ಮುಕ್ತಾಯಗೊಂಡಿದ್ದು, ಆ ಕುಟುಂಬದ ಸದಸ್ಯರು ಕೆಲಸಕ್ಕೆ ಹಾಜರಾಗದೇ ಇದ್ದರೆ ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗಿರುವುದಿಲ್ಲ. ನೋಂದಾಯಿತ ಕುಟುಂಬ ನಿರುದ್ಯೋಗ ಭತ್ಯೆಯನ್ನು ಒಳಗೊಂಡಂತೆ ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳಿಗೆ ಲಬ್ಯವಾಗುವಷ್ಟು ಕೂಲಿಯನ್ನು ಪಡೆದಿದ್ದರೆ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ಅನುಷ್ಟಾನ ಪ್ರಕ್ರಿಯೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮತ್ತು ಜವಾಬ್ದಾರಿ:
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಟಾನಗೊಳಿಸುವ ಕಾರ್ಯದಲ್ಲಿ ಅನೇಕ ಸಂಘ ಸಂಸ್ಥೆಗಳು ತಮ್ಮದೇ ಆದ ಪಾತ್ರ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುತ್ತವೆ. ಅವುಗಳನ್ನು ಈ ಕೆಳಕಂಡಂತೆ ವಿವರಿಸಬಹುದು.
ಗ್ರಾಮ ಮಟ್ಟದಲ್ಲಿ:
ಗ್ರಾಮ ಪಂಚಾಯಿತಿಯ ಯೋಜನೆಯ ಅನುಷ್ಠಾನದ ಪ್ರಾಧಿಕಾರವಾಗಿರುತ್ತದೆ. ನೋಂದಣೆಗಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಉದ್ಯೋಗ ಚೀಟಿಯನ್ನು ನವೀಕರಿಸುವ ಹಾಗೂ ವಿತರಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದಾಗಿರುತ್ತದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಹಾಗೂ ಕಾರ್ಯನಿರ್ವಹಣಾ ಏಜೆನ್ಸಿಯ ತಾಂತ್ರಿಕ ಸಿಬ್ಬಂದಿಗೆ ನೆರವಾಗಲು ಒಬ್ಬ ಗ್ರಾಮ ಅಭಿವೃದ್ಧಿ ಸಹಾಯಕರು ಇರುತ್ತಾರೆ.
ತಾಲ್ಲೂಕು ಮಟ್ಟದಲ್ಲಿ:
ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿಯು ಗ್ರಾಮ ಪಂಚಾಯಿತಿಗಳಿಂದ ಬಂದ ಯೋಜನೆಗಳನ್ನು ಕ್ರೂಢೀಕರಿಸಿ ಪರಿಶೀಲಿಸಿ ಅನುಮೋದಿಸಿ ಅಂತಿಮ ಮಂಜೂರಾತಿಯಾಗಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿ ಕೊಡುವುದು. ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ಈ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿದ್ದು, ಈತ ತಾಲ್ಲೂಕು ಹಂತದಲ್ಲಿ ವಿವಿಧ ಪ್ರಕ್ರಿಯೆಗಳ ಬಗ್ಗೆ ಸಮನ್ವಯ ಮಾಡುವ ಅತಿ ಮುಖ್ಯ ಜವಾಬ್ದಾರಿ ಹೊಂದಿರುತ್ತಾನೆ. ಕಾರ್ಯಕ್ರಮ ಅಧಿಕಾರಿಯು ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಯು ನಿರ್ದೇಶನ ನಿಯಂತ್ರಣ ಮತ್ತು ಮೇಲ್ವಿಚಾರಣೆಗೊಳಪಟ್ಟಿರುವ ಕಾರ್ಯಕ್ರಮ ಅಧಿಕಾರಿಗೆ ಸಹಾಯ ಮಾಡಲು ಪ್ರತಿ ತಾಲ್ಲೂಕು ಪಂಚಾಯಿತಿಯಲ್ಲಿ ಒಬ್ಬ ಸಹಾಯಕ ಕಾರ್ಯಕ್ರಮ ಅಧಿಕಾರಿಯನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ.
ಜಿಲ್ಲಾ ಮಟ್ಟದಲ್ಲಿ:
ಜಿಲ್ಲಾ ಪಂಚಾಯಿತಿಯಲ್ಲಿ ಒಳಗೊಂಡಂತೆ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಈ ಯೋಜನೆಯಡಿ ಸಿದ್ಧಪಡಿಸಿ ಸಲ್ಲಿಸುವ ಯೋಜನೆಗಳ ಪ್ರಸ್ತಾವನೆಗಳನ್ನು ಅನುಮೋದಿಸುವುದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಯೋಜನೆಯ ಅನುಷ್ಟಾನದ ಪರಿಶಿಲನೆ ಮತ್ತು ಮೇಲ್ವಿಚಾರಣೆಯನ್ನು ಜಿಲ್ಲಾ ಪಂಚಾಯಿತಿ ಮಾಡಬೇಕು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯು ಈ ಯೋಜನೆಯ ಎಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಗಳಾಗಿರುತ್ತಾರೆ.
ರಾಜ್ಯ ಮಟ್ಟದಲ್ಲಿ:
ರಾಜ್ಯ ಮಟ್ಟದಲ್ಲಿ ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ರಾಜ್ಯ ಸಮನ್ವಯ ಅಧಿಕಾರಿಗಳಾಗಿರುತ್ತಾರೆ. ರಾಜ್ಯ ಉದ್ಯೋಗ ಪರಿಷತ್ತನ್ನು ರಚಿಸುವುದು. ಉದ್ಯೋಗ ಖಾತರಿ ನಿಧಿಯನ್ನು ಸ್ಥಾಪಿಸುವುದು. ರಾಜ್ಯ ಪಾಲನ್ನು ಬಿಡುಗಡೆ ಮಾಡಲು ಅಗತ್ಯವಿರುವ ಅನುದಾನವನ್ನು ಆಯವ್ಯಯದಲ್ಲಿ ಒದಗಿಸುವುದು. ನಿಗಧಿತ ಗ್ರಾಮೀಣ ದರಗಳ ಅನುಸೂಚಿ ಪ್ರಕಟಿಸುವುದು ಈ ಯೋಜನೆಯ ಪರಿಣಾಮ ತಿಳಿಯಲು ಮೌಲ್ಯಮಾಪನ ಮಾಡಿಸುವುದು ರಾಜ್ಯ ಮಟ್ಟದ ಜವಾಬ್ದಾರಿಯಾಗಿರುತ್ತದೆ.

ಸರ್ಕಾರೇತರ ಸಂಸ್ಥೆಗಳ ಪಾತ್ರ:
ಈ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಅಳವಿನ ಅಭಿವೃದ್ಧಿ ಸಾಮಾಜಿಕ ಲೆಕ್ಕ ಪರಿಶೋಧನೆ ಇತ್ಯಾದಿ ಪ್ರಕ್ರಿಯೆಗಳ ಮೇಲ್ವಿಚಾರಣೆಗೆ ಅನುಕೂಲವಾಗುವಂತೆ ಪಾಲುದಾರರಾಗಿ ಸರ್ಕಾರೇತರ ಸಂಸ್ಥೆಗಳು ಭಾಗವಹಿಸಬಹುದಾಗಿದೆ.

ಕಾಮಗಾರಿಗಳ ಮುಕ್ತಾಯ ಹಾಗೂ ನಿರ್ವಹಣೆ:
ಪ್ರತಿ ಗ್ರಾಮ ಪಂಚಾಯಿತಿ ಮತ್ತು ಪ್ರತಿ ಕಾರ್ಯ ನಿರ್ವಹಣಾ ಏಜೆನ್ಸಿಗಳು ಮಂಜೂರಾದ ಅನುಷ್ಠಾನಗೊಳಿಸಿದ ಮತ್ತು ಮುಕ್ತಾಯಗೊಂಡ ಕಾಮಗಾರಿಗಳ ವಿವರಗಳನ್ನು ವಹಿಯಲ್ಲಿ ದಾಖಲಿಸಬೇಕು. ಮುಕ್ತಾಯವಾದ ವರದಿಯೊಂದಿಗೆ ಕಾರ್ಯ ನಿರ್ವಹಣಾ ಏಜೆನ್ಸಿ ಕಾಮಗಾರಿಗಳನ್ನು ಅಂತಿಮಗೊಳಿಸಬೇಕು.

ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ:
ಶೇ.100% ರಷ್ಟು ಗ್ರಾಮ ಪಂಚಾಯಿತಿ ನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಕನಿಷ್ಟ ಶೇ.10% ರಷ್ಟು ಕಾಮಗಾರಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಕನಿಷ್ಟ ಶೇ.2% ಕಾಮಗಾರಿಗಳನ್ನು ರಾಜ್ಯ ಮಟ್ಟದ ಅಧಿಕಾರಿಗಳು ತಪಾಸಣೆ ಮಾಡಬೇಕು. ಉಸ್ತುವಾಗಿ ಮಾಹಿತಿ ವ್ಯವಸ್ಥೆಯ ನಮೂನೆಯನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭರ್ತಿ ಮಾಡಿ ಕಾರ್ಯಕ್ರಮ ಅಧಿಕಾರಿಗೆ ಕಳುಹಿಸಬೇಕು. ಗ್ರಾಮ ಪಂಚಾಯಿತಿಯಿಂದ ಬಂದ ಮಾಹಿತಿಗಳನ್ನು ಕಾರ್ಯಕ್ರಮ ಅಧಿಕಾರಿ ಕ್ರೂಢೀಕರಿಸಿ ವಿಶ್ಲೇಷಣೆ ಮಾಡಿ ಸೂಕ್ತ ಪರಿಹಾರಗಳನ್ನು ತೆಗೆದುಕೊಂಡು ತನ್ನ ಷರಾ ದೊಂದಿಗೆ ವರದಿಗಳನ್ನು ಜಿಲ್ಲ ಕಾರ್ಯಕ್ರಮ ಸಮನ್ವಯ ಅಧಿಕಾರಿಗೆ ಸಲ್ಲಿಸಬೇಕು. ಆತ ಅದನ್ನು ಕ್ರೂಢೀಕರಿಸಿ ರಾಜ್ಯ ಸಮನ್ವಯ ಅಧಿಕಾರಿಗೆ ಸಲ್ಲಿಸಬೇಕು.

ಕಾಮಗಾರಿಗಳ ಆಯ್ಕೆ:
ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ನು ರಾಷ್ಟ್ರದಲ್ಲಿ ಅನುಷ್ಟಾನಕ್ಕೆ ತರಲಾಗದೆ ಈ ಯೋಜನೆಯಡಿಯಲ್ಲಿ ಅನುಷ್ಟಾನಗೊಳಿಸುವ ಕಾಮಗಾರಿಗಳು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದ್ದು ಒಟ್ಟು 9 ಆದ್ಯತೆಗಳನ್ನು ಉದ್ಯೋಗ ಸೃಷ್ಟಿಗಾಗಿ ಗುರುತಿಸಲಾಗಿದೆ. ಅವುಗಳು ಯಾವುವೆಂದರೆ;
ಹಣಕಾಸು ನಿರ್ವಹಣೆ:
ಯಾವುದೇ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾದಲ್ಲಿ ಆ ಯೋಜನೆಯಲ್ಲಿ ತೊಡಗಿಸಲಾದ ಹಣಕಾಸಿನ ಸಮರ್ಪಕ ನಿರ್ವಹಣೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರವು ಜಾರಿಗೊಳಿಸುವ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಅನುಸರಿಸಬೇಕಾದ ನಿಯಮಾವಳಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ.
ಅನುದಾನ:
ಯೋಜನೆಯ ಅನುಷ್ಟಾನಕ್ಕೆ ಬೇಕಾಗುವ ಅನುದಾನ ಶೇ.90 ರಷ್ಟನ್ನು ಕೇಂದ್ರ ಸರ್ಕಾರವು ಹಾಗೂ ಉಳಿದ ಶೇ.10 ರಷ್ಟನ್ನು ರಾಜ್ಯ ಸರ್ಕಾರವು ಒದಗಿಸುತ್ತದೆ.
ಕೇಂದ್ರ ಸರ್ಕಾರದ ಅನುದಾನದಿಂದ ಭರಿಸಲಾಗುವ ವೆಚ್ಚಗಳು:
ಅಕುಶಲ ಕೂಲಿ ವೆಚ್ಚ
ಸಾಮಾಗ್ರಿ ವೆಚ್ಚ
ಆಡಳಿತಾತ್ಮಕ ವೆಚ್ಚ
ಅಳವು ಅಭಿವೃದ್ಧಿ ವೆಚ್ಚ
ಯೋಜನಾ ತಯಾರಿಕಾ ವೆಚ್ಚ
ಸಾಮಾಜಿಕ ಲೆಕ್ಕ ಪರಿಶೋಧನಾ ವೆಚ್ಚ
ಕುಂದು-ಕೊರತೆ ನಿವಾರಣಾ ವೆಚ್ಚ

ರಾಜ್ಯ ಸರ್ಕಾರದ ಅನುದಾನದಿಂದ ಭರಿಸಲಾಗುವ ವೆಚ್ಚಗಳು:
ಸಾಮಗ್ರಿಗಳ ವೆಚ್ಚ
ಯೋಜನಾ ಅನುಷ್ಟಾನಕ್ಕೆ ಬೇಕಾದ ಸಾಮಗ್ರಿ ವೆಚ್ಚ
ಕುಶಲ ಮತ್ತು ಅತಿಕುಶಲ ಕಾರ್ಮಿಕರ ಕೂಲಿ ವೆಚ್ಚ
ಯಂತ್ರೋಪಕರಣಗಳ ವೆಚ್ಚ
ನಿರುದ್ಯೋಗ ಭತ್ಯೆ
ರಾಜ್ಯ ಉದ್ಯೋಗ ಖಾತರಿ ಪರಿಷತ್ತಿನ ಆಡಳಿತಾತ್ಮಕ ವೆಚ್ಚ

ಅಧ್ಯಾಯ-2. ಸಾಹಿತ್ಯ ವಿಮರ್ಶೆ
NREGA ಯೋಜನೆಯ ಅಧ್ಯಯನದ ಸಂಶೋಧನೆ ನೋಡುವ ಮೊದಲು ಈ ಕ್ಷೇತ್ರದಲ್ಲಿ ಪ್ರಮುಖ ತಜ್ಞರ ವರದಿಗಳು ಮತ್ತು ಶಿಫಾರಸ್ಸುಗಳನ್ನು ಕಾಣಬಹುದು. NREGA ಎಂಬ ಯೋಜನೆ ಅಭಿವೃದ್ಧಿ ವಲಯದೊಂದಿಗೆ ಹಲವಾರು ಲೇಖಕರು ಕಲ್ಪನೆಯನ್ನು ಹೊಂದಿದ್ದರು. ಈ ಯೋಜನೆಯಿಂದ ಅನುಷ್ಠಾನದಲ್ಲಿ ಸಮಸ್ಯೆಗಳನ್ನು ಹೊರ ತರಲಾಯಿತು ಮತ್ತು ಈ ಯೋಜನೆಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ಒಟ್ಟಾಗಿಯಾಗಿ NREGA ಯೋಜನೆಯ ಭಾರತ ಸರ್ಕಾರವು ಅಂತಿಮವಾಗಿ ಯೋಜನೆಯನ್ನು ವಿಫಲತೆಗಳಿಂದ ತಪ್ಪಿಸಲು ಹಲವಾರು ಲೇಖಕರು ಈ ಯೋಜನೆಯ ಬಗ್ಗೆ ಸಾಹಿತ್ಯ ವಿಮರ್ಶೆ ಮಾಡಿದ್ದಾರೆ.
Dreze (2007):- ಇವರ ಅಧ್ಯಯನದ ಪ್ರಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಭ್ಯವಿರುವ ಸಾಮಾನ್ಯ ಕಾರ್ಮಿಕರ ನಿಕಟ ವೇತನ ದಿನಕ್ಕೆ ರೂ.70 ದೊರೆಯುತ್ತಿತ್ತು. ಅದರ ವೇತನವನ್ನು 15 ದಿನಗಳ ಒಳಗೆ ನೀಡಲಾಗುತ್ತಿತ್ತು. ಈ ಯೋಜನೆಯಲ್ಲಿ ಗ್ರಾಮೀಣ ಬಡವರಿಗೆ ಅವಕಾಶವನ್ನು ಕಲ್ಪಿಸಲಾಯಿತು. ಈ ಯೋಜನೆಯಲ್ಲಿ ಕಾರ್ಮಿಕರಿಗೆ ಭರವಸೆಯಾಗಿರುವ ಮತ್ತಷ್ಟು ನೀರಿನ ಸಂರಕ್ಷಣೆ ಗ್ರಾಮೀಣ ಸಂಪರ್ಕ, ಅರಣ್ಯ ಭೂಮಿ, ಖಾಸಗಿ ಕೃಷಿ ಭೂಮಿಯನ್ನು ಈ ಯೋಜನೆಯಲ್ಲಿ ಅಳವಡಿಸಿಕೊಂಡು NREGA ಯೋಜನೆಯ ಕೆಲಸವನ್ನು ಗ್ರಾಮೀಣ ಬಡವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು.

ಶಂಕರ್ ಮತ್ತು ಷಾ (2008):- ಇವರ ಅಧ್ಯಯನದ ಪ್ರಕಾರ NREGA ಯೋಜನೆ ವಿಶೇಷವಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ತರಬೇತಿಯನ್ನು ನೀಡುವುದರಲ್ಲಿ ರಾಷ್ಟ್ರವ್ಯಾಪ್ತಿ ಆಂದೋಲನದ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಿರಂತರ ಸಂಪನ್ಮೂಲಗಳನ್ನು ಕೊಡುವುದರ ಜೊತೆಗೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಗುಣಮಟ್ಟವನ್ನು ಖಚಿತ ಪಡಿಸಿಕೊಳ್ಳಲು ಮಾಹಿತಿ ತಂತ್ರಜ್ಞಾನ ಕೃತಿಗಳ ಸಮ್ಮತಿ ಹೆಚ್ಚಿನ ಪಾರದರ್ಶಕತೆ ಹಾಗೂ ಎಲ್ಲಾ ಹಂತಗಳಲ್ಲಿ ಹೊಣೆಗಾರಿಕೆ ಮತ್ತು ವೇತನ ಪಾವತಿ ತುಂಬಿಸಿ ಎಂದು ಶಿಫಾರಸ್ಸು ಮಾಡಲಾಯಿತು.

ಮೆಹೆತ್ರಾ (2008):- ಇವರ ಅಧ್ಯಯನದ ಪ್ರಕಾರ ಅನುಷ್ಠಾನದಲ್ಲಿ ಇರುವ ಒಬ್ಬ ನಾಗರಿಕ ಸೇವೆಯ ಆಡಳಿತ ವೆಚ್ಚ ಮತ್ತು ವೃತ್ತಿಪರ ಬೆಂಬಲ ಅಗತ್ಯವಿದ್ದು ನುರಿತ ಕೆಲಸಗಾರರ ಬೆಂಬಲವನ್ನು ಗುರುತಿಸುವುದು. ಸೂಕ್ತ ಕೃಷಿ ಉತ್ಪಾದನೆಯನ್ನು ಶೇ.60% ರಷ್ಟು ಬೆಂಬಲಿಸಲಾಯಿತು. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಲಾಯನನ ಅಭಿವೃದ್ಧಿ ಕಾರ್ಯಕ್ರಮವು ಸಾಕ್ಷಿಯಾಯಿತು. ಅನೇಕ ಬಾರಿ ತತ್ಪರಿತ ಬಂಡವಾಳವನ್ನು ಸಹ ಮರುಪಾವತಿ ಮಾಡಲಾಯಿತು.

ಖೇರಾ (2008):- ಇವರ ಅಧ್ಯಯನದ ಪ್ರಕಾರ ಒರಿಸ್ಸಾ ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಿ ಹೆಚ್ಚಿನ ಜನರಿಗೆ ಸ್ಥಳೀಯ ಉದ್ಯೋಗವನ್ನು ನೀಡಲಾಯಿತು. ಗ್ರಾಮೀಣ ಬಡವರಿಗೆ ಸಾಮಾಜಿಕ ಭದ್ರತೆಯನ್ನು ನೀಡುವುದರ ಜೊತೆಗೆ ಸ್ಥಳೀಯ ಉದ್ಯೋಗವನ್ನು ನೀಡಲಾಯಿತು. ಇದರಲ್ಲಿ ಗ್ರಾಮ ಸಭೆಗಳು ಸಹ ಸಕ್ರೀಯವಾಗಿಸಿ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲಾಯಿತು. ಗ್ರಾಮ ಸಮಾಜದಲ್ಲಿನ ಅಧಿಕಾರದ ಸಮತೋಲನವನ್ನು ಕಾಪಾಡಲಾಯಿತು. 558 ಗ್ರಾಮ ಪಂಚಾಯತ್ ಮತ್ತು 200 ಜಿಲ್ಲೆಗಳು 141 ಖಂಡದಲ್ಲಿ ಅನುಷ್ಠಾನಗೊಳಿಸಿ ಮೌಲ್ಯಮಾಪನ ಮಾಡಲಾಯಿತು. 68 ಜಿಲ್ಲೆಗಳಲ್ಲಿ 26 ರಾಜ್ಯಗಳಲ್ಲಿ ಸಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ಪರಿಸ್ಥಿತಿಗಳಲ್ಲಿನ ವ್ಯತ್ಯಾಸಗಳಿಗೆ ಲೆಕ್ಕ ಪರಿಶೋಧನೆಯನ್ನು ಮಾಡಲಾಯಿತು. 39 ಜಿಲ್ಲೆಗಳಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಿನ್ನಲೆಗಳ 283 ಗ್ರಾಮ ಪಂಚಾಯಿತಿ ಮತ್ತು 600 ಹಳ್ಳಿಗಳ ಮಾಹಿತಿಯನ್ನು ಸಂಗ್ರಹಿಸಲಾಯಿತು.

ಅಮೂರ್ತ (2005):- ಇವರ ಅಧ್ಯಯನದ ಪ್ರಕಾರ NREGA ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಭಾರತದಲ್ಲಿ 200 ಜಿಲ್ಲೆಗಳಲ್ಲಿ ಕಾರ್ಯಗತಗೊಳಿಸಲಾಯಿತು. ಇದು ಸಾಮಾಜಿಕ ಸಮಾನತೆ ಒಂದು ಅಧಿಕೃತ ಯೋಜನೆ ಮತ್ತು ನಿರ್ಣಾಯಕ ಸಾರ್ವಜನಿಕ ಬಂಡವಾಳ ವಿಧಾನ ರಚಿಸಲು ಒಂದು ಗ್ರಾಮೀಣ ಯೋಜನೆ ಸೇರಿಕೊಂಡು ಉದ್ಯೋಗ ಕಾರ್ಯಕ್ರಮವನ್ನು ರಾಜ್ಯ ಯೋಜನೆಯಲ್ಲಿ ಕಾನೂನುಬದ್ಧವಾಗಿ ತಯಾರಿಸಲಾಯಿತು. ಈ ಆಧಾರದ ಮೇಲೆ ಅಧಿಕೃತ ಮಹಿಳೆಯರ ಬಗ್ಗೆ ಜನರ ಜಾಗೃತಿ ಮಟ್ಟವನ್ನು ಪರಿಶೀಲಿಸಲಾಯಿತು. ಈ ವಿವರಣಾತ್ಮಕ ಪರಿಶೋಧನಾತ್ಮಕ ಮತ್ತು ದಶಮಾಂಶ ರಚನಾತ್ಮಕ ಪ್ರಶ್ನಾವಳಿ ಮೂಲಕ ಸಂಗ್ರಹಿಸಲಾಯಿತು. ಈ ಅಧ್ಯಯನವು ಮಹಿಳೆಯರಿಗೆ ಅಧಿಕಾರದ ಮೇಲೆ ಧನಾತ್ಮಕ ಪರಿಣಾಮಕ್ಕೆ ಕಾರಣವಾಯಿತು.

ಆಕ್ಟ್ (2005):- ಇವರ ಅಧ್ಯಯನದ ಪ್ರಕಾರ NREGA ಯೋಜನೆಯನ್ನು ಮರುನಾಮಕರಣ ಮಾಡಲಾಯಿತು. NREGA ಗ್ರಾಮೀಣ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಅತ್ಯಂತ ಪ್ರಾಯೋಗಿಕ ವಿಧಾನವಾಗಿ, ವಾಸ್ತವವಾಗಿ, ಯೋಜನೆ ಖಾತರಿಯ ವೇತನ ಉದ್ಯೋಗ ಒದಗಿಸುವ ಮೂಲಕ ಗ್ರಾಮೀಣ ಬಡ ಆರ್ಥಿಕ ಭದ್ರತೆ ಖಾತ್ರಿಗೊಳಿಸುತ್ತದೆ. NREGA ಮಹಿಳೆಯರಿಗೆ ಉದ್ಯೋಗವನ್ನು ಮಾದರಿಯಲ್ಲಿ ಧನಾತ್ಮಕ ಪರಿಣಾಮ ಹೊಂದಿದೆ. ಅಧಿಕೃತ ದಶಮಾಂಶ ಬಳಸಿಕೊಂಡು ಈ ಕಾಗದದ ಮಾನದಂಡಗಳನ್ನು ಭಾರತದ NREGA ಯೋಜನೆಯ ಮಾಪನದ ಮನೆಯ ಪ್ರತಿ ಉದ್ಯೋಗದ ದಿನಗಳ ಸರಾಸರಿ ಸಂಖ್ಯೆ ಹಾಗೂ ಅಡಿಯಲ್ಲ ಉದ್ಯೋಗದ 100 ದಿನಗಳ ಸರಾಸರಿ ಸಂಖ್ಯೆ ಹಾಗೂ ಅಡಿಯಲ್ಲಿ ಉದ್ಯೋಗದ 100 ದಿನಗಳ ಮುಗಿದ ಮನೆಗಳಲ್ಲಿ ಖಾಸಗಿ ಶೇಕಡವಾರು ಮೊದಲ ಎರಡು ಮಾನದಂಡಗಳನ್ನು ಅಡ್ಡಲಾಗಿ ಒಟ್ಟು ಲಭ್ಯವಿರುವ ನಿಧಿಗಳ ವಿರುದ್ಧ ಖರ್ಚು ಶೇಕಡವಾರು ತೀವ್ರವಾಗಿ ಏರಿದೆ. ಅಂತಿಮವಾಗಿ ಇದು NREGA ಉತ್ತಮ ಸಾಧನೆ ಮಾಡಿಲ್ಲ ಎಂಬ ತೀರ್ಮಾನವನ್ನು ಒಪ್ಪಿಕೊಳ್ಳುವುದು ಕಷ್ಟ ಇದು 80.92 ಲಕ್ಷ ಕುಟುಂಬಗಳು ಮಾತ್ರ ಅಧ್ಯಯನದ ಅವಧಿಯಲ್ಲಿ ಕೆಲಸ ಪಡೆಯಲು ಸಮರ್ಥರಾದರು ಆದರೆ ರಾಜ್ಯದಲ್ಲಿ 158, 63 ಲಕ್ಷ ಕುಟುಂಬಗಳು ಉದ್ಯೋಗ ಕಾರ್ಡ್ ಒದಗಿಸಿದೆ ಎಂದು ಕಂಡು ಬಂದಿದೆ. ಇದು ಉದ್ಯೋಗ ಕಾರ್ಡ್ಗಳಲ್ಲಿ 51,01% ಕುಟುಂಬಗಳು ಈ ಅವಧಿಯಲ್ಲಿ ಈ ಯೋಜನೆಯಲ್ಲಿ ಕೆಲಸ ಯಾವುದೇ ಅವಕಾಶವನ್ನು ಹೊಂದಿರಲಿಲ್ಲ. ಇಡೀ ಅವಧಿಯಲ್ಲಿ ಅಸ್ಸಾಂ ಅದರ ಕಾರ್ಯಕ್ಷಮತೆಯ ಭಾಗಗಳಲ್ಲಿ ಒಂದಾಗಿದೆ. ಉದ್ಯೋಗ ಕಾರ್ಡ್ ಹೊಂದಿರುವವರು ಕೇವಲ 3.7% ಗೆ 100 ದಿನಗಳ ಉದ್ಯೋಗ ಒದಗಿಸಬಹುದು. ಕಾಗದದ NREGA ಕಾರ್ಯಕ್ಷಮತೆಯನ್ನು ಸುಧಾರಿಸಲು ನೀತಿ ಸಲಹೆಗಳ ಸಂಖ್ಯೆ ಮಾಡುತ್ತದೆ.

ಅಧ್ಯಾಯ-3. ಸಂಶೋಧನಾ ವಿಧಾನ
`ಅಧ್ಯಯನ ಶಾಸ್ತ್ರವೊಂದು ವಿಜ್ಞಾನ ಎನ್ನಿಸಿಕೊಳ್ಳಬೇಕಾದರೆ ಅದು ವೈಜ್ಞಾನಿಕ ಪದ್ಧತಿಯನ್ನು ಅಥವಾ ವಿಧಾನವನ್ನು ಅನುಸರಿಸಬೇಕಾಗುವುದು.' ಎ.ಡಬ್ಲ್ಯೂ ಗಿಗಲೇನ್ ತಿಳಿಸಿರುವಂತೆ ವಿಜ್ಞಾನವೆಂಬುದು ಸಂಶೋಧನೆಯ ಒಂದು ವಿಧಾನವಾಗಿರುತ್ತದೆ. ಸಮಸ್ತೆ ಅನುಭವದ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅನುಸರಿಸುವ ವಿಧಾನವನ್ನು ವಿಜ್ಞಾನವೆಂದು ಗೂಡೆ ಮತ್ತು ಹ್ಯಾಟ್ ರವರು ಅಭಿಪ್ರಾಯ ಪಟ್ಟಿದ್ದಾರೆ. ವಿಜ್ಞಾನದ ಪರಮ ಗುರಿ ಸತ್ಯಾನ್ವೇಷಣೆಗೆ ಅಥವಾ ಜ್ಞಾನ ಸಂಗ್ರಹಣೆಯಾಗಿದ್ದರೂ ಅದನ್ನು ಸಾದಿಸಲು ನಂಬಲರ್ಹವಾದ ಹಾಗೂ ಕ್ರಮಬದ್ಧವಾದ ಅಥವಾ ವ್ಯವಸ್ಥೆಯ ವಿಧಾನವೊಂದನ್ನು ಅನುಸರಿಸುವುದು ಅನಿವಾರ್ಯ. ಈ ವಿಧಾನವನ್ನು ವೈಜ್ಞಾನಿಕ ಪದ್ಧತಿ ಅಥವಾ ವಿಧಾನ ಎನ್ನಲಾಗಿದೆ. ಅಧ್ಯಯನ ಶಾಸ್ತ್ರವೊಂದರ ವಿಶ್ವಾಸಾರ್ಹತೆಯ ಅದು ಎಷ್ಟರ ಮಟ್ಟಿಗೆ ವೈಜ್ಞಾನಿಕ ವಿಧಾನದ ಬಳಕೆಗೆ ಪೂರಕವಾಗಿದೆಯೆಂಬುದನ್ನು ಅವಲಂಭಿಸಿರುತ್ತದೆ ಎಂದರೆ ತಪ್ಪಲ್ಲ. ಅಂತೆಯೇ ಈ ಸಂಶೋಧನೆಯಲ್ಲಿ ಒಂದು ವಿಧಾನವನ್ನು ಅನುಸರಿಸಿಯೇ ಅಧ್ಯಯನ ಮಾಡಲಾಗಿದೆ ಅಂತಹ ವಿಧಾನವನ್ನು ಯಾವ ತೆರನಾದುದು ಎಂಬುದರ ಬಗ್ಗೆ ಹೇಳುವುದೇ ಈ ಅಧ್ಯಯನದ ಉದ್ದೇಶವಾಗಿದೆ.
ಹಿಂದೆ ಹಾಗೂ ಇಂದು ಪ್ರಸ್ತುತ ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅದರಲ್ಲಿ ಮುಖ್ಯವಾಗಿ ಇಂದು ಜಗತ್ತಿನ ಅನೇಕ ಹಿಂದುಳಿದ ದೇಶಗಳಲ್ಲಿ ಹಾಗೂ ಭಾರತವನ್ನೊಳಗೊಂಡಂತೆ ಅಭಿವೃದ್ಧಿಯ ಪಥದಲ್ಲಿರುವ ಹಲವಾರು ದೇಶಗಳಲ್ಲಿ ಜನರು ಮಳೆ ಗಾಳಿ ಚಳಿ ಬಿಸಿಲು ಎನ್ನದೆ ದಿನದ ಬಹುಕಾಲ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆಲಸದಲ್ಲಿ ತೊಡಗಿರುವ ಜನರ ಸಾಮಾಜಿಕ-ಆರ್ಥಿಕವಾಗಿ ಸ್ಥಿತಿಗತಿ ಉತ್ತಮವಾಗಿದೆಯೇ ಈ ಅಧ್ಯಯನದ ಪ್ರಮುಖವಾದ ಪರಿಶೋಧನೆಯಾಗಿದೆ.

ಅಧ್ಯಯನದ ಗುರಿ:
ಯಾವುದೇ ಒಂದು ಸಂಶೋಧನೆಯು ಒಂದು ಗೊತ್ತು ಗುರಿಯಿಲ್ಲದೇ ನಡೆಯಲಾರದು. ಯಾವುದೇ ಒಂದು ಸಂಶೋಧನೆಯ ಹಿಂದೆ ಒಂದು ನಿಶ್ಚಿತ ಗುರಿ ಇರಬೇಕಾದದ್ದು ಅನಿವಾರ್ಯ ಅಂತೆಯೇ ಈ ಅಧ್ಯಯನ ನಿರ್ದಿಷ್ಟ ಗುರಿಯನ್ನು ಹೊಂದಿದೆ.
ಪ್ರಸ್ತುತ ಅಧ್ಯಯನದ ಗುರಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೋಲಾರ ಜಿಲ್ಲೆಯ ಕೊಂಡರಾಜನ ಹಳ್ಳಿಯ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯುವ ಅಧ್ಯಯನವೇ ಈ ಸಂಶೋಧನೆಯ ಪ್ರಮುಖ ಗುರಿಯಾಗಿದೆ.

ಅಧ್ಯಯನದ ಧ್ಯೇಯೋದ್ದೇಶಗಳು:
ಯಾವುದೇ ಒಂದು ಕೆಲಸ ಯಶಸ್ವಿಯಾಗಬೇಕಾದ ಕಾರ್ಯಕ್ಕೆ ನಿರ್ದಿಷ್ಟವಾದ ಉದ್ದೇಶಗಳಾದಾರಿತ ಯೋಜನೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ಸಂಶೋಧಕನು ಕೂಡ ತನ್ನ ಸಂಶೋಧನೆಗೆ ಸಂಬಂಧಿಸಿದಂತೆ ಉದ್ದೇಶಗಳನ್ನು ಇಟ್ಟುಕೊಂಡಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಸಫಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು.
ಫಲಾನುಭವಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡುವುದು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಅದರ ಪರಿಣಾಮವನ್ನು ತಿಳಿಯುವುದು.
ಫಲಾನುಭವಿಗಳ ಜೀವನ ಮಟ್ಟವನ್ನು ಅಧ್ಯಯನ ಮಾಡುವುದು.

ಅಧ್ಯಯನಕ್ಕೆ ಪ್ರೇರಣೆ:
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಕೋಲಾರ ಜಿಲ್ಲೆಯ ಕೊಂಡರಾಜನ ಹಳ್ಳಿಯ ಗ್ರಾಮೀಣ ಪಂಚಾಯಿತಿಯಡಿಯಲ್ಲಿರುವ ಜನರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಅಧ್ಯಯನವನ್ನು ಮಾಡಲು ಉದ್ದೇಶಿಸಲಾಗಿದ್ದು, ಈ ಅಧ್ಯಯನದಿಂದ ಈ ಯೋಜನೆಯ ಫಲಾನುಭವಿಗಳ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ತಿಳಿಯಬೇಕೆಂದು ಈ ಅಧ್ಯಯನಕ್ಕೆ ಪ್ರೇರಕವಾಯಿತು.

ಸಂಶೋಧನಾ ವಿನ್ಯಾಸ:
ಸಂಶೋಧನ ವಿಜ್ಞಾನ ಎಂಬುದು ಸಂಶೋಧನಾ ಕಾರ್ಯದಲ್ಲಿ ಬಹು ಮುಖ್ಯವಾದ ಒಂದು ಹಂತವಾಗಿದ್ದು ಸಂಶೋಧಕನು ತನ್ನ ಸಂಶೋಧನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಅವಲೋಕಿಸಿ ತಯಾರಿಸಿದ ಯೋಜನೆಯನ್ನು ಸಂಶೋಧನಾ ವಿನ್ಯಾಸ ಎಂದು ಹೇಳಬಹುದು. ಸಂಶೋಧನೆಯ ಉದ್ದೇಶವನ್ನು ಪೂರೈಸುವುದಕ್ಕೋಸ್ಕರ ಸಂಶೋಧಕನು ತನ್ನ ಸಂಶೋಧನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಆಲೋಚನೆ ಮಾಡಿ ತಯಾರಿಸಿದ ಯೋಜನೆಯನ್ನು ಸಂಶೋಧನಾ ವಿನ್ಯಾಸ ಎಂದು ಕರೆದಿದ್ದಾನೆ.
ಸಂಶೋಧಕನು ಪ್ರಾಕ್ ಕಲ್ಪನೆಯನ್ನು ರಚಿಸಿದ ಮೇಲೆ ಕೆಲವೊಂದು ತಯಾರಿಕೆಗಳನ್ನು ಮಾಡಿಕೊಳ್ಳುತ್ತಾನೆ. ಸಂಶೋಧಕನು ತನ್ನ ಸಂಶೋಧನೆಗಾಗಿ ಆಯ್ಕೆ ಮಾಡಲಾಗಿರುವ ಕ್ಷೇತ್ರ ಮತ್ತು ಆ ಕ್ಷೇತ್ರದಿಂದ ಆರಿಸಲ್ಪಡಬೇಕಾದ ನಮೂನೆ ಅಥವಾ ಮಾದರಿ, ಮಾಹಿತಿ ಸಂಗ್ರಹಣೆಗಾಗಿ ಬಳಸಲ್ಪಡುವ ಉಪಕರಣಗಳು ಸಂಶೋಧನೆಗಾಗಿ ತಗಲುವ ವೆಚ್ಚ ಇವೇ ಮೊದಲಾದ ವಿಷಯಗಳ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣವನ್ನು ಹೊಂದಿ ಸಂಶೋಧನಾ ಕಾರ್ಯವನ್ನು ಪ್ರಾರಂಭಿಸಲು ಮಾಡಿಕೊಳ್ಳುವ ಯೋಜನೆಯೇ ಸಂಶೋಧನಾ ವಿನ್ಯಾಸವಾಗಿದೆ. ಸಂಶೋಧನಾ ವಿನ್ಯಾಸ ಎಂಬ ಪದವು ಪೂರ್ವ ಯೋಜನೆ, ರಚನೆ, ತಂತ್ರ ಅಥವಾ ಸಂಶೋಧನಾ ನೀಲಿ ನಕ್ಷೆ ಎಂಬ ಅರ್ಥಗಳನ್ನು ಕೊಡುತ್ತದೆ. ಸಂಶೋಧನೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ ಏನು, ಎಲ್ಲಿ, ಯಾವಾಗ, ಹೇಗೆ, ಎಷ್ಟರ ಮಟ್ಟಿಗೆ, ಯಾವ ಸಾಧನದ ಮೂಲಕ ಎಂಬುವೇ ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಸಂಶೋಧನಾ ವಿನ್ಯಾಸ ನೀಡಬಲ್ಲದು.
ಮಿಲ್ಲರ್ ಪ್ರಕಾರ ಸಂಶೋಧನೆಯ ಅಧ್ಯಯನವನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಸಂಶೋಧನಾ ಪ್ರಕ್ರಿಯೆಯು ಒಳಗೊಂಡಿರುವ ಯೋಜಿತ ಕ್ರಮಾನುಗತಿಯನ್ನು ವಿನ್ಯಾಸ ಪೂರ್ಣ ಸಂಶೋಧನೆ ಎನ್ನುವರು.
ಕೆ.ರವೀಂದ್ರ ಪ್ರಕಾರ ಸಂಶೋಧನೆಯು ಪ್ರಶ್ನೆಗಳಿಗೆ ಮತ್ತು ನಿಯಂತ್ರಿತ ಮಾರ್ಪಾಡು ಅಥವಾ ವ್ಯತ್ಯಾಸಗಳಿಗೆ ಸೂಕ್ತ ಉತ್ತರವನ್ನು ಪಡೆಯುವುದಕ್ಕಾಗಿ ಮಾಡಿಕೊಂಡಿರುವ ಯೋಜನೆ ಅಥವಾ ತಂತ್ರವಾಗಿದೆ.
ಸಂಶೋಧನಾ ವಿನ್ಯಾಸದ ಪ್ರಕಾರಗಳಿಗೆ ಸಂಬಂಧಿಸಿದಂತೆ ಸಿ.ಆರ್.ಕೊಠಾರಿ ಯವರು ಮೂರು ಪ್ರಕಾರಗಳನ್ನು ಮುಂದಿಟ್ಟಿದ್ದಾರೆ.
ಪರಿಶೋಧನಾತ್ಮಕ ಸಂಶೋಧನಾ ವಿನ್ಯಾಸ
ವಿವರಣಾತ್ಮಕ ಸಂಶೋಧನಾ ವಿನ್ಯಾಸ
ಪ್ರಯೋಗಾತ್ಮಕ ಸಂಶೋಧನಾ ವಿನ್ಯಾಸ

ಪರಿಶೋಧನಾತ್ಮಕ ಸಂಶೋಧನಾ ವಿನ್ಯಾಸ
ಯಾವುದೇ ಒಂದು ವಸ್ತುವಿನ ಜೊತೆ ಪರಸ್ಪರ ಸಂಬಂಧ ಇಟ್ಟುಕೊಳ್ಳುವುದು ಮತ್ತು ಇಲ್ಲಿ ಸಂಶೋಧಕನಿಗೆ ಸಂಶೋಧನಾ ವಿಷಯ ಕ್ಷೇತ್ರ ಹೊಸದಾಗಿರುವುದರಿಂದ ಅದರ ಬಗ್ಗೆ ಹೊಸದಾಗಿ ಸಂಶೋಧನೆಯನ್ನು ಮಾಡಿ ಅಧ್ಯಯನದ ಫಲಾಫಲಗಳನ್ನು ಕಂಡು ಹಿಡಿಯುವುದಕ್ಕೆ ಪರಿಶೋಧನಾತ್ಮಕ ವಿಧಾನ ಎನ್ನುತ್ತಾರೆ. ಇದಕ್ಕೆ ಸಂಬಂಧಿತವಾದಂತಹ ಕಾರ್ಯನಿರತ ಪ್ರಾಕ್ ಕಲ್ಪನೆಗಳನ್ನು ಸ್ಥಾಪಿಸುವುದು ವಿಶಿಷ್ಟವಾದ ಒಳನೋಟಗಳನ್ನು ಪಡೆಯುವ ಬಗ್ಗೆ ವಿಶೇಷ ಒತ್ತು ನೀಡಲಾಗಿರುತ್ತದೆ. ಇಂತಹ ಅಧ್ಯಯನದ ಕೇಂದ್ರ ಬಿಂದುವಾಗಿರುವ ಸಮಸ್ಯೆಯ ಭಿನ್ನ ಮುಖಗಳ ಪರಿಚಯ ನೀಡುವ ಅವಕಾಶ ಕೊಡುವಂತಹದಾಗಿರಬೇಕು. ಸಂಶೋಧನಾ ಕಾರ್ಯ ನಡೆಸುತ್ತಾ ಲಭ್ಯವಾಗಬಹುದಾದ ಹೊಸ ಹೊಸ ಮಾಹಿತಿಗಳನ್ನು ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗುವಂತೆ ಸಂಶೋಧನಾ ಕ್ರಮದಲ್ಲಿ ಸೂಕ್ತವಾದ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಂಶೋಧನಾ ವಿನ್ಯಾಸದಲ್ಲಿಯೇ ಅಂತಹ ಅಂತರ್ ನಿರ್ಮಿತ ವ್ಯವಸ್ಥೆ ಮಾಡಿರಬೇಕಾಗುವುದು. ಇದನ್ನು ಸಾಹಿತ್ಯ ಸಮೀಕ್ಷೆ ಅನುಭವ ಒಳನೋಟ ಪ್ರಚೋದಕ ವಿಶ್ಲೇಷಣೆಗಳ ಮೂಲಕ ನಡೆಸಲಾಗುವುದು.
ಒಟ್ಟಿನಲ್ಲಿ ಸಮಗ್ರ ಶೋಧನೆಯ ಅರ್ಥವೇನೆಂದರೆ ಒಂದು ಅಗೋಚರವಾದ ಸಂಗತಿಯ ಬಗ್ಗೆ ಅಮೂಲಾಗ್ರವಾಗಿ ಶೋಧನೆಯನ್ನು ನಡೆಸಿ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳನ್ನು ಅಧ್ಯಯನ ಮಾಡಿ ಸತ್ಯಾನ್ವೇಷಣೆ ಮಾಡುವುದು ಇದೇ ಅದರ ಗುರಿಯೂ ಸಹಾ ಆಗಿದೆ ಎನ್ನಬಹುದು.
ವಿವರಣಾತ್ಮಕ ಸಂಶೋಧನಾ ವಿನ್ಯಾಸ: ವಿವರಣಾತ್ಮಕ ಸಂಶೋಧನೆಗಳೆಂದರೆ ಒಂದು ನಿರ್ದಿಷ್ಟ ವ್ಯಕ್ತಿ ಅಥವಾ ಒಂದು ಸಮೂಹದ ಲಕ್ಷಣಗಳನ್ನು ವಿವರಿಸುವಂತಹವುಗಳು ಸ್ವಭಾವ ನಿರೂಪ ಸಂಶೋಧನಾಧ್ಯಯನಗಳು ಯಾವುದಾದರೂ ಘಟನೆ ಅಥವಾ ಪ್ರಕರಣ ಆವರ್ತಾಂಕಗಳನ್ನು ನಿರ್ಧಾರ ಪಡಿಸಲು ಅಥವಾ ಇನ್ನೊಂದು ಪ್ರಕರಣ ಅಥವಾ ಘಟನೆಯೊಂದಿಗೆ ಅವರ ಸಂಬಂಧವನ್ನು ಗೊತ್ತುಪಡಿಸುವಲ್ಲಿ ಬಳಕೆಯಲ್ಲಿದೆ. ಒಬ್ಬ ವ್ಯಕ್ತಿ ಒಂದು ಸಮೂಹ ಅಥವಾ ಒಂದು ಸಂದರ್ಭಕ್ಕೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ನಿರ್ದಿಷ್ಟ ಭವಿಷ್ಯ ಸೂಚಕಗಳ ಬಗ್ಗೆ ನಡೆಸಬಹುದಾದಂತಹ ಅಧ್ಯಯನಗಳು ವಿವರಣಾತ್ಮಕ ಸಂಶೋಧನಾಧ್ಯಯಗಳಾಗಿವೆ.

ವರ್ಣನಾತ್ಮಕ ಸಂಶೋಧನಾ ನಕ್ಷೆಗಳಲ್ಲಿ ಬಹಳವಾಗಿ ಗುಣಾತ್ಮಕ ಕ್ರಮ ತತ್ವಗಳನ್ನು ಅಳವಡಿಸಲಾಗುತ್ತದೆ. ಇದರಿಂದ ವರ್ಣನಾತ್ಮಕ ಅಂಕಿ ಅಂಶಗಳನ್ನು ದೊರಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಇಂಥ ಸಂಶೋಧನಾ ನಕ್ಷೆಗಳಲ್ಲಿ ಜನರು ಸ್ವತಃ ಬರೆದ ಅಥವಾ ಮಾತನಾಡಿದ ದಾಖಲೆಗಳ ಆಧಾರದ ಮೇಲಿಂದ ಸಂಶೋಧನೆಯನ್ನು ಸೃಷ್ಠಿಸಲಾಗುತ್ತದೆ.

ಪ್ರಯೋಗಾತ್ಮಕ ಸಂಶೋಧನಾ ವಿನ್ಯಾಸ: ಪ್ರಯೋಗಾತ್ಮಕ ಸ್ವರೂಪದ ಸಂಶೋಧನಾಧ್ಯಯನಗಳಿಗೆ ಸಂಬಂಧಿಸಿದ ವಿನ್ಯಾಸ ಇದಾಗಿದೆ. ಇಂತಹ ಸ್ವರೂಪದ ಸಂಶೋಧನಾಧ್ಯಯಗಳಲ್ಲಿ ಸಂಶೋಧನೆ ಪರೀಕ್ಷೆಗೆ ಒಳಪಡಿಸುವುದು ಇಂತಹ ಅಧ್ಯಯನಗಳಲ್ಲಿ ಪೂರ್ವಗ್ರಹಗಳ ಪ್ರಭಾವವನ್ನು ಬಹಳಷ್ಟು ತಗ್ಗಿಸುವುದು ಅಧ್ಯಯನದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಂತಹ ಕಾರಣಿಯತೆಯ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳುವ ಅನುಕೂಲಕರವಾದಂತಹ ಕ್ರಮಗಳ ಅಗತ್ಯವಿದೆ. ಸಾಮಾನ್ಯವಾಗಿ ಪ್ರಯೋಗಗಳೇ ಇಂತಹ ಅಗತ್ಯತೆಗಳನ್ನು ಪೂರೈಕೆ ಮಾಡಬಲ್ಲವು. ಆದ್ದರಿಂದ ಅಧ್ಯಯನಗಳಿಗೆ ಸಂಬಂಧಿಸಿದ ಸಂಶೋಧನಾ ವಿನ್ಯಾಸವೆಂದರೆ ಅದು ವಾಸ್ತವಿಕವಾಗಿ ಪ್ರಯೋಗಗಳ ವಿನ್ಯಾಸವೇ ಆಗಿರುತ್ತದೆ.
ಸಂಶೋಧಕನು ಈ ಮೇಲಿನ ವಿಧಾನಗಳನ್ನು ಅರಿತ ನಂತರ ತನ್ನ ಅಧ್ಯಯನಕ್ಕೆ ಪರಿಶೋಧನಾತ್ಮಕ ಸಂಶೋಧನ ಅಧ್ಯಯನವನ್ನು ಆರಿಸಿಕೊಂಡಿರುತ್ತಾನೆ. ಈ ವಿನ್ಯಾಸದಲ್ಲಿ ಒಂದು ಸಂಗತಿಯ ಬಗ್ಗೆ ಅಮೂಲಾಗ್ರವಾಗಿ ಶೋಧನೆಯನ್ನು ನಡೆಸಿ ಸೂಕ್ಷ್ಮ ಸಂಗತಿಗಳನ್ನು ಅಧ್ಯಯನ ನಡೆಸಿ ಸತ್ಯಾನ್ವೇಷಣೆ ಮಾಡಬಹುದಾಗಿದೆ. ಇದಲ್ಲದೇ ಈ ವಿನ್ಯಾಸದಲ್ಲಿ ವಾಸ್ತಾವಾಂಶವನ್ನು ಶೋಧಿಸಿ ನಿಜಾಂಶಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಂಶೋಧಕನು ಈ ಮಾದರಿಯ ವಿನ್ಯಾಸವನ್ನು ಆರಿಸಿಕೊಂಡಿರುತ್ತಾನೆ.

ಮಾದರಿ ತಂತ್ರಗಳು:
ಸಂಶೋಧನಾ ಕ್ಷೇತ್ರವು ತುಂಬ ವಿಶಾಲವಾದದ್ದು ಅದು ಇಡೀ ವಿಶ್ವ ಅಥವಾ ಸಮಾಜವನ್ನೇ ಒಳಗೊಂಡಿರಬಹುದು. ಇದರಿಂದ ವಿಶಾಲ ಕ್ಷೇತ್ರದ ಸಮಗ್ರ ಅಧ್ಯಯನವು ಕಷ್ಟ ಸಾಧ್ಯವಾದುದು ಅದರ ಪ್ರತಿಯೊಂದು ಘಟಕದ ಅಧ್ಯಯನ ಮಾಡುವುದು ಧೀರ್ಘ ಕಾಲವನ್ನು ತೆಗೆದುಕೊಳ್ಳುವುದೇ ಅಲ್ಲದೇ ಅಪಾರವಾದ ಹಣವೂ ವ್ಯಯವಾಗುತ್ತದೆ. ಇದರಿಂದಾಗಿ ಶೀಘ್ರವಾದ ಫಲಿತಾಂಶಗಳನ್ನು ಪಡೆಯುವ ದೃಷ್ಟಿಯಿಂದ ಇಡೀ ಜನಾಂಗವನ್ನು ಅಧ್ಯಯನ ಮಾಡುವುದರ ಬದಲು ಅದರ ಪ್ರಾತಿನಿಧಿಕ ಮಾದರಿಯನ್ನು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಮಾದರಿ ವಿಧಾನವು ಇಂದು ಹೆಚ್ಚು ವ್ಯಾಪಕವಾಗಿದೆ.
ಮಾದರಿ ಎಂದರೆ ನಮೂನೆ ಅಥವಾ ಘಟಕ ಎಂಬ ಅರ್ಥಗಳಿವೆ ಕಠಿಣವಾದ ಕೆಲಸವನ್ನು ಸರಳವಾಗಿ ಸಾಧಿಸುವ ವಿಧಾನಕ್ಕೆ ನಮೂನೆ ಎಂದು ಕರೆಯುವರು.
ಗೂಡ್ಸೆ ಮತ್ತು ಹ್ಯಾಟ್ರವರ ಪ್ರಕಾರ ಮಾದರಿಯು ವಿಶಾಲ ಕ್ಷೇತ್ರದ ಪ್ರಾತಿನಿಧಿಕ ಘಟಕ ಎಂದು ವ್ಯಾಖ್ಯಾನಿಸಿದ್ದಾರೆ.
ಕಾಲ್ಟಿನ್ ರವರ ಪ್ರಕಾರ ಮಾದರಿಯನ್ನು ಆಯ್ಕೆ ಮಾಡಿದ ಸಮಗ್ರ ಗುಂಪಿನ ವಿಭಜಿಸಿದ ಭಾಗ.
ನಾನ್ಲಿನ್ ರವರ ಪ್ರಕಾರ ಮಾದರಿಯು ಇಡೀ ಜನಾಂಗದ ಒಂದು ಪ್ರಾತಿನಿಧಿಕ ಉಪ ಘಟಕ.
ಮಾದರಿ ಆಯ್ಕೆ ಮಾಡುವಲ್ಲಿ ನಿರ್ಧಿಷ್ಟವಾದ ಮತ್ತು ಉತ್ತಮವೆಂದು ಹೇಳಿದ ಯಾವ ಪದ್ಧತಿಗಳೂ ಇಲ್ಲವಾದರೂ ಆಯಾ ಜನ ಸಮೂಹಗಳಿಗೆ ಮತ್ತು ವಿಷಯಗಳಿಗೆ ಅನುಗುಣವಾಗಿ ಮಾಹಿತಿಗಳ ಆಧಾರದ ಮೇಲೆ ನಮೂನೆಯನ್ನು ಮಾಡಬಹುದು.
ನಮೂನೆಯ ವಿಧಗಳು: ಅವುಗಳೆಂದರೆ;
ಸಂಭವನೀಯ ವಿಧಾನ
ಅಸಂಭವನೀಯ ವಿಧಾನ
ಸಂಭವನೀಯ ವಿಧಾನ:
ಡೆಸ್ಕಾರ್ಟಸ್ ಹೇಳಿರುವಂತೆ ಸತ್ಯಾಂಶವನ್ನು ನಿರ್ಧರಿಸುವ ಪರಿಸ್ಥಿತಿಯಿಲ್ಲದಿದ್ದಾಗ ಅತೀ ಹೆಚ್ಚಿನ ಸಂಭವನೀಯವನ್ನು ಅವಲಂಭಿಸಬೇಕು ಎಂದಿದ್ದಾರೆ.
 ಸಾಮಾನ್ಯ ಸಂಶೋಧಕನು ಅಧ್ಯಯನ ವಸ್ತುವಿನ ಬಗ್ಗೆ ನಿಖರ ಮಾಹಿತಿಯಿಲ್ಲದಿದ್ದಾಗ ಸಂಭವನೀಯತೆ ಅಥವಾ ಊಹೆಯನ್ನುದರಿಸುವುದು ಅನಿವಾರ್ಯ. ಈ ವಿಧಾನದಲ್ಲಿ ಇಡೀ ಜನಾಂಗವನ್ನು ಅಧ್ಯಯನ ಮಾಡದೇ ಅದರ ಮಾದರಿಗಳನ್ನು ಅಧ್ಯಯನ ಮಾಡುವುದರಿಂದ ಮಾದರಿಯ ಮಾಹಿತಿ ಆಧಾರದ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಮಾದರಿಯ ಫಲಿತಾಂಶ ಹೀಗಿರುವುದರಿಂದ ಒಟ್ಟು ಕಾರ್ಮಿಕರ ಫಲಿತಾಂಶ ಇಂತಿದೆಯೆಂದು ಊಹಿಸಲಾಗುವುದು.

ಅಸಂಭವನೀಯ ವಿಧಾನ:
ನಿರ್ದಿಷ್ಟ ನಮೂನೆ ಅಥವಾ ನಿಖರವಾದ ನಮೂನೆ ಎಂತಲೂ ಕರೆಯುತ್ತಾರೆ. ಉದ್ದೇಶಿತ ನ್ಯಾಯ ನಿರ್ಧರಿತ, ಯುಕ್ತಾ-ಯುಕ್ತಾ ನಿರ್ಧರಿಸಬಲ್ಲ ಪ್ರಾತಿನಿದ್ಯದಿಂದ ಕೂಡಿದ ಒಂದು ಸರಿಯಾದ ಅಸಂಭವನೀಯತೆಯ ಪದ್ಧತಿಯಲ್ಲಿ ಸಂಶೋಧಕನು ತನ್ನ ಸ್ವಯಂ ಪ್ರತಿಭೆಯಿಂದ ಆಯ್ಕೆ ಮಡಿಕೊಳ್ಳುವುದಾಗಿದೆ. ಇಲ್ಲಿ ಸಂಶೋಧಕನದ್ದೇ ಅಂತಿಮ ತೀರ್ಮಾನವಾಗಿರುತ್ತದೆ. ಅಧ್ಯಯನಕ್ಕಾಗಿ ಆಯ್ಕೆ ಮಾಡಿರುವ ಒಂದು ಸಂಶೋಧನಾ ಕ್ಷೇತ್ರದ ಪ್ರತಿಯೊಂದು ಬಿಡಿ ಭಾಗಕ್ಕೂ ಅಥವಾ ಘಟಕಕ್ಕೂ ಆಯ್ಕೆ ಮಾಡಲ್ಪಟ್ಟು ನಮೂನೆಯಲ್ಲಿ ಸೇರಿಕೊಳ್ಳಲು ಸಮಾನ ಅವಕಾಶಗಳಿವೆ.

ಸಂಭವನೀಯ ಮಾದರಿಯ ಪ್ರಕಾರಗಳು:
ಯಾದೃಚ್ಛಿಕ ಮಾದರಿ, ಸರಳ ಯಾದೃಚ್ಛಿಕ ಮಾದರಿ, ವಿಭಾಗಿತ ಯಾದೃಚ್ಛಿಕ ಮಾದರಿ, ವ್ಯವಸ್ಥಿತ ಮಾದರಿ, ಬಹು ಹಂತ ಮಾದರಿ, ಬಹು ಮಜಲು ಮಾದರಿ, ಗುಚ್ಛ ಮಾದರಿ, ಪಾಲು ಮಾದರಿ.
ಯಾದೃಚ್ಛಿಕ ಮಾದರಿ:
ಯಾದೃಚ್ಛಿಕ ಮಾದರಿಯು ಸಾಮಾಜಿಕ ಸಂಶೋಧಕನಾ ವಿಧಾನಗಳಲ್ಲಿ ಸಾಮಾನ್ಯವಾದುದು ಮತ್ತು ವ್ಯಾಪಕವಾದುದು ಇದು ಮೂಲತಃ ಮಾದರಿ ವಿಧಾನ, ಇದರಲ್ಲಿ ಎಲ್ಲ ಘಟಕಗಳು ಮತ್ತು ಮೂಲಾಂಶಗಳಿಗೂ ಆಯ್ಕೆಯಾಗುವ ಅವಕಾಶಗಳಿರುತ್ತವೆ. ಇಲ್ಲಿ ಸಂಶೋಧಕನ ವೈಯುಕ್ತಿಕ ಆಯ್ಕೆಗೆ ಅವಕಾಶವಿಲ್ಲ ಆಯ್ಕೆಯು ಅವಕಾಶಗಳನ್ನು ಆದರಿಸಿದೆ.
ಸರಳ ಯಾದೃಚ್ಛಿಕ ಮಾದರಿ:
ಸರಳ ಯಾದೃಚ್ಛಿಕ ಮಾದರಿ ಎಲ್ಲಾ ಮಾದರಿ ವಿಧಾನಗಳ ಮೂಲ ವಿಧಾನ, ಇತರೆ ಎಲ್ಲಾ ಮಾದರಿ ವಿಧಾನಗಳು ಈ ವಿಧಾನದ ಬೇರೆ ರೂಪ ಅಷ್ಟೆ. ಸರಳ ಯಾದೃಚ್ಛಿಕ ಮಾದರಿ ವಿಧಾನದ ಅರಿವು ಇತರೆ ಮಾದರಿ ವಿಧಾನಗಳನ್ನರಿಯಲು ಅವಶ್ಯಕ. ಇದು ಎಲ್ಲ ಮೂಲಾಂಶಗಳಿಗೂ ಮಾದರಿ ಆಯ್ಕೆಯಲ್ಲಿ ಸಮಾನಾವಕಾಶವನ್ನು ಕಲ್ಪಿಸುವುದೇ ಅಲ್ಲದೇ ಹೆಚ್ಚಿನ ಸಂಖ್ಯೆಯ ಸಂಯೋಜನೆಗಳನ್ನು ರೂಪಿಸಬಹುದು. ಸರಳ ಯಾದೃಚ್ಛಿಕ ಮಾದರಿ ಆಯ್ಕೆಯನ್ನು ಅನೇಕ ರೀತಿಯಾಗಿ ಮಾಡಬಹುದು.

ಸಂಯೋಜನಾ ವಿಧಾನ:
ನೀಡಿರುವ ಘಟಕಗಳನ್ನು ವಿವಿಧ ಸಂಯೋಜನೆಗಳಾಗಿ ರೂಪಿಸಿ ಆಯ್ಕೆ ಮಾಡಬಹುದು. ಇದನ್ನು ವಿಶಾಲ ಕ್ಷೇತ್ರಕ್ಕೆ ಅನ್ವಯಿಸುವುದು ಕಷ್ಟ.
ಲಾಟರಿ ವಿಧಾನ: ಈ ವಿಧಾನದಲ್ಲಿ ಜನಾಂಗ ಅಥವಾ ಸಮಷ್ಟಿಯ ಪ್ರತಿಯೊಂದು ಸಂಖ್ಯೆಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೊಡಲಾಗುತ್ತದೆ. ಪ್ರತಿಯೊಂದು ಸಂಖ್ಯೆಯನ್ನು ಪ್ರತ್ಯೇಕ ಚೀಟಿಯಲ್ಲಿ ಬರೆಯಲಾಗುತ್ತದೆ. ಚೀಟಿಗಳ ಆಕಾರ ಬಣ್ಣ ಮತ್ತಿತರ ಲಕ್ಷಣಗಳು ಒಂದೇ ರೀತಿಯಾಗಿರಬೇಕು. ಚೀಟಿಗಳನ್ನು ಒಂದು ಡಬ್ಬದಲ್ಲಾಕಿ ಕಲಕಿ ತೆಗೆಯಬೇಕು. ಹೀಗೆ ತೆಗೆದ ಚೀಟಿಗಳು ಒಂದು ಘಟಕವನ್ನು ಪ್ರತಿನಿಧಿಸುತ್ತದೆ.
ವಿಭಾಗಿತ ಯಾದೃಚ್ಛಿಕ ಮಾದರಿ: ಇದು ಸರಳ ಯಾದೃಚ್ಛಿಕ ಮಾದರಿ ವಿಧಾನಗಳ ಕೆಲವು ಲೋಪಗಳ ಪರಿಹಾರ ವಿಧಾನ. ಇದೊಂದು ಉದ್ದೇಶ ಪೂರ್ವಕ ಹಾಗೂ ಲೋಪಗಳ ಪರಿಹಾರಿಕ ವಿಧಾನ. ಇದೊಂದು ಉದ್ದೇಶ ಪೂರ್ವಕ ಹಾಗೂ ಯಾದೃಚ್ಛಿಕ ಮಾದರಿ ವಿಧಾನಗಳ ಮಿಶ್ರಣ. ಈ ವಿಧಾನದಲ್ಲಿ ಮೊದಲಿಗೆ ಅಧ್ಯಯನ ಕ್ಷೇತ್ರ ಅಥವಾ ಜನಾಂಗ ಅಥವಾ ಮೂಲ ಗುಂಪನ್ನು ಕೆಲವು ಲಕ್ಷಣಗಳ ಆಧಾರದ ಮೇಲೆ ವಿವಿಧ ವರ್ಗ ಅಥವಾ ಸರಳವಾಗಿ ವಿಭಜಿಸಲಾಗುವುದು. ಈ ರೀತಿ ವಿಭಜಿಸಿದ ಪ್ರತಿಯೊಂದು ವಿಭಾಗದಿಂದಲೂ ಯಾದೃಚ್ಛಿಕ ವಿಧಾನದಿಂದ ಕೆಲವು ಮಾದರಿಗಳನ್ನು ಆಯ್ಕೆ ಮಾಡುವ ವಿಧಾನಕ್ಕೆ ವಿಭಾಗಿತ ಯಾದೃಚ್ಛಿಕ ಮಾದರಿಯೆಂದು ಹೆಸರು.
ವ್ಯವಸ್ಥಿತ ಮಾದರಿ: ವ್ಯವಸ್ಥಿತ ಮಾದರಿಯನ್ನು ಕ್ರಮಬದ್ಧ ಮಾದರಿ ಅಥವಾ ನಿಯಮಿತ ಅಂತರ್ ಮಾದರಿ ಎಂದು ಕರೆಯುವರು. ಇದು ಸರಳ ಯಾದೃಚ್ಛಿಕ ಮಾದರಿಯ ಇನ್ನೊಂದು ರೂಪ. ಈ ವಿಧಾನದಲ್ಲಿ ಜನಾಂಗ ಘಟಕಗಳನ್ನು ವರ್ಣಮಾಲೆಯ ಕ್ರಮ ಅಥವಾ ಕ್ರಮಸಂಖ್ಯಾನುಸಾರ ಪಟ್ಟಿ ಮಾಡಿ ಯಾದೃಚ್ಛಿಕ ಮಾದರಿ ವಿಧಾನದಂತೆ ಆಯ್ಕೆ ಮಾಡಲಾಗುವುದು.
ಬಹು ಹಂತ ಮಾದರಿ: ಎರಡು ಹಂತಗಳಲ್ಲಿ ಮಾಡಲಾಗುವುದು ಮೊದಲನೆಯ ಹಂತವಾಗಿ ವಸ್ತು ವಿಷಯದ ಬಗೆಗಿನ ಪ್ರಮುಖ ಮಾಹಿತಿಯನ್ನು ಮೂಲ ಮಾದರಿಯಿಂದ ಸಂಗ್ರಹಿಸಿ ಎರಡನೇ ಹಂತದಲ್ಲಿ ಹೆಚ್ಚುವರಿ ಮಾಹಿತಿಯನ್ನು ಮೂಲ ಮಾದರಿಯಿಂದ ಆಯ್ಕೆಯಾದ ಉಪ ಮಾದರಿಯಿಂದಲೂ ಸಂಗ್ರಹಿಸುವ ಕ್ರಮಕ್ಕೆ ಬಹುಮಜಲು ಮಾದರಿ ಎನ್ನುವರು.
ಗುಚ್ಛ ಮಾದರಿ: ಇದೇ ಜನಾಂಗ ಅಥವಾ ವಿಶ್ವದ ಪ್ರತಿಯೊಂದು ಘಟಕ ಅಥವಾ ವ್ಯಕ್ತಿಯನ್ನು ಅಧ್ಯಯನ ಮಾಡುವುದು ದುಬಾರಿಯಾಗುವುದು ಮತ್ತು ಅಪಾರ ಕಾಲ ಹಿಡಿಯುವುದು. ಅಧ್ಯಯನ ಕ್ಷೇತ್ರವು ವಿಶಾಲವಾದುದರಿಂದ ಅಧ್ಯಯನ ಘಟಕಗಳು ವಿವಿಧ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸುವುದು ಕಷ್ಟ ಆದ್ದರಿಂದ ಪ್ರತಿಯೊಂದು ಘಟಕ ಅಥವಾ ವ್ಯಕ್ತಿ ಅಥವಾ ಅಂಶವನ್ನು ಅಧ್ಯಯನ ಮಾಡುವ ಬದಲು ಕೆಲವು ಆಯ್ದ ಗುಚ್ಛಗಳಿಂದ ಮಾಹಿತಿ ಸಂಗ್ರಹಿಸುವ ಕ್ರಮಕ್ಕೆ ಗುಚ್ಛ ಮಾದರಿ ಎಂದು ಹೆಸರು.
ಪಾಲು ಮಾದರಿ: ಈ ಮಾದರಿಯಲ್ಲಿ ಮಾದರಿಗಳನ್ನು ಸಂಶೋಧಕರ ಸ್ವಯಂ ನಿರ್ಣಯದ ಆಧಾರದ ಮೇಲೆ ಆಯ್ಕೆ ಮಡಲಾಗುವುದು.
ಪ್ರಸ್ತುತ ಸಂಶೋಧಕರು ಸರಳ ಯಾದೃಚ್ಛಿಕ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದು ಈ ಮಾದರಿಯಲ್ಲಿ ಎಲ್ಲಾ ಮೂಲಾಂಶಗಳಿಗೂ ಅನ್ವಯಿಸುವುದರಿಂದ ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ. ಸಂಶೋಧಕನು ಈ ವಿಧಾನದ ಆಧಾರದ ಮೇಲೆ ಫಲಾನುಭವಿಗಳ ಆರ್ಥಿಕ ಮತ್ತು ಸಾಮಾಜಿಕ ಮನೋ ಪ್ರವೃತ್ತಿಗಳನ್ನು ಗುರ್ತಿಸಿ ಒಂದು ಅಧ್ಯಯನ ಮಾಡುವ ದೃಷ್ಟಿಯಿಂದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯಡಿಯಲ್ಲಿ ಕೆಲಸ ಮಾಡುವ ಫಲಾನುಭವಿಗಳ 50 ಮಂದಿಯನ್ನು ಗುರ್ತಿಸಲು ತೀರ್ಮಾನಿಸಿದ್ದಾರೆ.
ಅದರಂತೆ ಈ ಕೆಳಗೆ ತಿಳಿಸಿದಂತೆ ಕೋಲಾರ ಜಿಲ್ಲೆಯ ಕೊಂಡರಾಜನ ಹಳ್ಳಿ ಗ್ರಾಮ ಪಂಚಾಯಿತಿಯಡಿಯಲ್ಲಿರುವ ಹಳ್ಳಿಗಳಲ್ಲಿ 50 ಮಂದಿಯನ್ನು ಆರಿಸಿಕೊಳ್ಳಲು ತೀರ್ಮಾನಿಸಲಾಗಿದೆ.

ಕ್ರ.ಸಂ.    ಹಳ್ಳಿಯ ಹೆಸರು    ಜನಸಂಖ್ಯೆ
1.    ಕೊಂಡರಾಜನ ಹಳ್ಳಿ    5
2.    ಅಮ್ಮೇರ ಹಳ್ಳಿ    5
3.    ಕಾರ್ತಿಪುರ    5
4.    ಸಂಗೊಂಡಳ್ಳಿ    5
5.    ತೇರಳ್ಳಿ    5
6.    ಪಾವರಾಜನ ಹಳ್ಳಿ    5
7.    ಶಿವಗಂಗೆ    5
8.    ಕೊಪ್ಪಳ್ಳಿ    5
9.    ಕಂಚೇಗೌಡನಹಳ್ಳಿ    5
10.    ಬೆಟ್ಟದ ಹೊಸಹಳ್ಳಿ    5
ಒಟ್ಟು 50

ಮಾಹಿತಿ ಸಂಗ್ರಹಣೆಯ ವಿಧಾನಗಳು:
ಸಾಮಾಜಿಕ ಸಂಶೋಧಕನು ತನ್ನ ಸಂಶೋಧನಾ ವಿನ್ಯಾಸವನ್ನು ರಚಿಸಿಕೊಂಡ ಮೇಲೆ ತನಗೆ ಸೂಕ್ತವಾದ ಮಾಹಿತಿ ಸಂಗ್ರಹಣಾ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಸಂಶೋಧನಾ ಕ್ಷೇತ್ರದಲ್ಲಿ ಪ್ರತಿವರ್ತಿಗಳಿಂದ ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುವ ವಿಧಾನಗಳಿಂದರೆ;
ಸಂದರ್ಶನ:
ಬ್ರೌನ್ ರವರ ಪ್ರಕಾರ ಸಂದರ್ಶನ ಎಂದರೆ ಅಂಕಿ ಅಂಶಗಳನ್ನು ಕಲೆ ಹಾಕುವುದಕ್ಕೆ ಹೊರತಾಗಿ ಒಬ್ಬ ಸಂದರ್ಶಕ ಮತ್ತು ಸಂದರ್ಶನಕ್ಕೆ ಒಳಪಡುವ ವ್ಯಕ್ತಿ ಇವರಿಬ್ಬರ ನಡುವಿನ ಮುಖಾಮುಖಿ ಸಂಭಾಷಣೆಯೇ ಸಂದರ್ಶನ.
ಸಂದರ್ಶನವು ಸಾಮಾಜಿಕ ಸಂಶೋಧನೆಯ ಮಾಹಿತಿ ಸಂಗ್ರಹಣೆಯಲ್ಲಿ ವ್ಯಾಪಕವಾಗ ಬಳಸಲ್ಪಡುವ ಒಂದು ಸಂಶೋಧನಾ ವಿಧಾನ. ಸಂಶೋಧಕನು ನಿರ್ದಿಷ್ಟ ವಿಷಯದ ಪರಿಣಿತಿಯಲ್ಲಿ ಪರಿಚಯವಿಲ್ಲದೇ ಮಾಹಿತಿ ಸಂಗ್ರಹಿಸುವ ಅತ್ಯುತ್ತಮ ರೀತಿಯ ಮುಖಾಮುಖಿ ಮಾತುಕತೆಯಾಗಿದೆ. ಈ ವಿಧಾನದಿಂದ ಮಾನವನ ಅತಿ ಸೂಕ್ಷ್ಮವಾದ ವೈಯುಕ್ತಿಕವಾದ ವಿಷಯಗಳ ಬಗ್ಗೆ ಸತ್ಯವು ಸ್ಪಷ್ಟವೂ ಆದ ಮಾಹಿತಿಯನ್ನು ಸಂಗ್ರಹಿಸಬಹುದು.
ಅವಲೋಕನ:
ಎಂದರೆ ಪಿ.ವಿ.ಯಂಗ್ ಪ್ರಕಾರ ಸ್ವ ಪ್ರೇರಣಾ ಘಟನೆಗಳು ಘಟಿಸಿದಾಗ ವ್ಯವಸ್ಥಿತವಾಗಿ ಮತ್ತು ಉದ್ದೇಶ ಪೂರ್ವಕವಾಗಿ ಕಣ್ಣಿನಿಂದ ಮಾಡುವ ಅಧ್ಯಯನ. ಸಿ.ವಿ. ಮೋಹರ್ ಪ್ರಕಾರ ಅವಲೋಕನವು ವೈಜ್ಞಾನಿಕ ಅನ್ವೇಷಣೆಯ ವಿಧಾನ ಇದರಲ್ಲಿ ಬಾಯಿ ಮತ್ತು ಕಿವಿಗಿಂತ ಕಣ್ಣಿನ ಬಳಕೆ ಹೆಚ್ಚು ಎಂದಿದ್ದಾರೆ.
ಒಟ್ಟಾರೆಯಾಗಿ ಅವಲೋಕನವೆಂದರೆ ಯಾವುದೇ ಒಂದು ವಸ್ತುವನ್ನು ವಿಮರ್ಶಾತ್ಮಕವಾಗಿ ಪರಿಶೀಲನಾ ಭಾವನೆಯಿಂದ ಸೂಕ್ಷ್ಮವಾಗಿ ಗಮನಿಸುವುದು ಇದು ವ್ಯವಸ್ಥಿತ ಹಾಗೂ ಉದ್ದೇಶ ಪೂರ್ವಕ ವೀಕ್ಷಣೆಯನ್ನು ಅವಲೋಕನ ಎನ್ನುವರು.
ಅವಲೋಕನದಲ್ಲಿ ಎರಡು ಬಗೆಗಳನ್ನು ನೋಡಬಹುದಾಗಿದ್ದು ಅವುಗಳ ವಿವರ ಇಂತಿದೆ.
ಸಹಭಾಗಿ ಅವಲೋಕನ:
ಸಮೂಹದೊಂದಿಗೆ ಅವಲೋಕನಕಾರನು ಮಿಳಿತಗೊಂಡು ಅವರ ನಡುವೆ ಇದ್ದು ನೇರವಾಗಿ ಅವಲೋಕಿಸುವ ವಿಧಾನವೇ ಸಹಭಾಗಿ ಅವಲೋಕನ. ಗೂಡೆ ಮತ್ತು ಹ್ಯಾಟ್ ರವರು ಸಂಶೋಧಕನು ತಾನು ಅಧ್ಯಯನ ಗುಂಪಿನ ಒಬ್ಬ ಸದಸ್ಯನೆಂದು ತೋರ್ಪಡಿಸಿಕೊಂಡು ಅವಲೋಕಿಸುವುದಕ್ಕೆ ಸಹಭಾಗಿ ಅವಲೋಕನ ಎಂದಿದ್ದಾರೆ.

ಅಸಹಭಾಗಿ ಅವಲೋಕನ:
ಇದು ಸಹಜವಾಗಿ ಅವಲೋಕನಕಕ್ಕೆ ವಿರುದ್ಧವಾಗಿದೆ. ಅವಲೋಕನಕಾರನು ಅಧ್ಯಯನ ಗುಂಪಿನ ಸಹಭಾಗಿಯಾಗದೇ ಅವರ ಚಟುವಟಿಕೆ ಮತ್ತು ಘಟನೆಗಳನ್ನು ಪರೋಕ್ಷವಾಗಿ ವೀಕ್ಷಿಸುವುದಕ್ಕೆ ಅಸಹಬಾಗಿ ಅವಲೋಕನ ಎನ್ನುತ್ತಾರೆ.
ಗೃಹಭೇಟಿ:
ಮಾಹಿತಿ ಸಂಗ್ರಹಣೆಗೆ ನಮೂನೆಯಲ್ಲಿ ಆಯ್ಕೆ ಮಾಡಿದ ವ್ಯಕ್ತಿಗಳ ಗೃಹಗಳಿಗೆ ಭೇಟಿ ನೀಡಿ ಮನೆಯ ಉಳಿದ ಸದಸ್ಯರುಗಳಿಂದ ಮಾಹಿತಿಯನ್ನು ಪಡೆಯುವುದಕ್ಕೆ ಗೃಹಭೇಟಿ ಎನ್ನುವರು.
ಈ ಮೇಲಿನ ಮೂರು ವಿಧಾನಗಳಲ್ಲಿ ಪ್ರಸ್ತುತ ಅಧ್ಯಯನಕ್ಕೆ ಸಂದರ್ಶನ ವಿಧಾನವನ್ನು ಕಾಯ್ದುಕೊಳ್ಳಲಾಗಿದೆ.

ಮಾಹಿತಿ ಸಂಗ್ರಹಣೆಯ ಸಾಧನಗಳು:
ಯಾವುದೇ ವಿಷಯದ ಬಗ್ಗೆ ಕೂಲಂಕುಷವಾಗಿ ತಿಳಿಯಲು ಆಯ್ಕೆ ಮಾಡಿದ ವಿಷಯದ ಬಗ್ಗೆ ದೊರೆಯುವಂತಹ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಬೇಕಾದದ್ದು ಸಂಶೋಧಕನ ಮೊದಲ ಧ್ಯೇಯವಾಗಿರುತ್ತದೆ. ಸಾಮಾಜಿಕ ಸಂಶೋಧಕನು ಹೆಚ್ಚು ಹೆಚ್ಚು ಪ್ರತ್ಯಕ್ಷ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದರೆ ಅದು ಹೆಚ್ಚು ಸಮಂಜಸವೂ ಹಾಗೂ ನಂಬಲಾರ್ಹವು ಆಗಿರುತ್ತದೆ. ಮಾಹಿತಿ ಸಂಗ್ರಹಣೆ ಸಾಧನಗಳಲ್ಲಿ ಮುಖ್ಯವಾಗಿ 2 ವಿಧಗಳನ್ನು ನೋಡಬಹುದು.
ಪ್ರಾಥಮಿಕ ಮೂಲಗಳು
ಮಾಧ್ಯಮಿಕ ಮೂಲಗಳು
ಪ್ರಾಥಮಿಕ ಮೂಲಗಳಲ್ಲಿ
 ಪ್ರಾಥಮಿಕ ಮೂಲಗಳಲ್ಲಿ ಪ್ರತಿವರ್ತಿಯಾದ ಸಂಶೋಧಕನು ನೇರವಾಗಿ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಲ್ಲಿ 4 ವಿಧಗಳಿವೆ.
1. ಅವಲೋಕನ: ಒಟ್ಟಾರೆಯಾಗಿ ಅವಲೋಕನವೆಂದರೆ ಯಾವುದೇ ಒಂದು ವಸ್ತುವನ್ನು ವಿಮರ್ಶಾತ್ಮಕವಾಗಿ ಪರಿಶೀಲನಾ ಭಾವನೆಯಿಂದ ಸೂಕ್ಷ್ಮವಾಗಿ ಗಮನಿಸುವುದು ಇದು ವ್ಯವಸ್ಥಿತ ಹಾಗೂ ಉದ್ದೇಶ ಪೂರ್ವಕ ವೀಕ್ಷಣೆಯನ್ನು ಅವಲೋಕನ ಎನ್ನುವರು. ಇದರಲ್ಲಿ 2 ವಿಧಗಳನ್ನು ನೋಡಬಹುದು. 1. ಸಹಭಾಗಿತ್ವ 2. ಅಸಹಭಾಗಿತ್ವ ಅವಲೋಕನ.
2. ಪ್ರಶ್ನಾವಳಿ:ಅಧ್ಯಯನ ವಿಷಯದ ಬಗ್ಗೆ ಪ್ರತಿವರ್ತಿಗಳಿಂದ ಮಾಹಿತಿ ಪಡೆಯಲೋಸುಗ ತಯಾರಿಸಿದ ಪ್ರಶ್ನೆಗಳ ಪಟ್ಟಿಯನ್ನೇ ಪ್ರಶ್ನಾವಳಿ ಎನ್ನುವರು. ಈ ಪ್ರಶ್ನಾವಳಿ ವಿಧಾನವನ್ನು ಕೆಲವು ಸಂದರ್ಭಗಳಲ್ಲಿ ಉಫಯೋಗಿಸಲಾಗುತ್ತದೆ. ಅಧ್ಯಯನದ ವಿಷಯ ವ್ಯಾಪ್ತಿ ಮತ್ತು ಸಂಶೋಧಿತರ ಸಂಖ್ಯೆ ವಿಶಾಲವಾಗಿದ್ದಾಗ ನೇರ ಅವಲೋಕನ ಸಾಧ್ಯವಾಗದೇ ಹೋದಾಗ ಪ್ರಶ್ನಾವಳಿ ವಿಧವನ್ನು ಅಳವಡಿಸುವರು. ಗೂಡೆ ಮತ್ತು ಹ್ಯಾಟ್ರವರು ಸ್ವಂತ ಪ್ರತಿವರ್ತಿಯೇ ಪ್ರಶ್ನೆಗಳ ಪಟ್ಟಿಯಲ್ಲಿ ಉತ್ತರಗಳನ್ನು ನಮೂದಿಸುವ ಮೂಲಕ ತನ್ನ ಉತ್ತರಗಳನ್ನು ವ್ಯಕ್ತಪಡಿಸುವ ಸಾಧನ ಪ್ರಶ್ನಾವಳಿಯಾಗಿದೆ ಎಂದಿದ್ದಾರೆ.
3. ಅನುಸೂಚಿ: ಅನುಸೂಚಿಯು ಒಂದು ರೀತಿಯ ಪ್ರಶ್ನಾವಳಿ ಇದ್ದ ಹಾಗೆ ಇವೆರಡಕ್ಕಿರುವ ವ್ಯತ್ಯಾಸವೆಂದರೆ ಪ್ರಶ್ನೆಗಳಿಗೆ ಪ್ರತಿವರ್ತಿಗಳೇ ನೇರ ಉತ್ತರಿಸುತ್ತಾರೆ. ಆದರೆ ಅನುಸೂಚಿಯಲ್ಲಿನ ಪ್ರಶ್ನೆಗಳ ಉತ್ತರವನ್ನು ಸಂಶೋಧಕನು ದಾಖಲಿಸಿಕೊಳ್ಳುತ್ತಾನೆ. ಈ ವಿಧಾನದಲ್ಲಿ ಸಂಶೋಧಕನು ಪ್ರತಿವಾದಿಗಳನ್ನು ನೇರ ಭೇಟಿ ಮಾಡಿ ಪ್ರಶ್ನೆಗಳನ್ನು ಕೇಳಿ ಅದರಿಂದ ಬಂದ ಉತ್ತರವನ್ನು ಅನುಸೂಚಿಯಲ್ಲಿ ದಾಖಲಿಸಿ ಕೊಳ್ಳುತ್ತಾನೆ. ಅನಕ್ಷರಸ್ತರಿಗೂ ಸಹಾ ಈ ವಿಧಾನವನ್ನು ಅಳವಡಿಸಬಹುದು. ಇದನ್ನು ಪ್ರಶ್ನಾವಳಿಯಂತೆ ವಿಶಾಲ ಕ್ಷೇತ್ರಕ್ಕೆ ಅನ್ವಯಿಸಲಾಗುವುದಿಲ್ಲ.
4. ಸಂದರ್ಶನ: ಸಂದರ್ಶನ ವಿಧಾನವು ಮಾಹಿತಿ ಸಂಗ್ರಹಣೆಯ ಒಂದು ಪ್ರಾಥಮಿಕ ಮೂಲ. ಇದರಲ್ಲಿ ಸಂಶೋಧಕನು ಪ್ರತಿವರ್ತಿಗಳನ್ನು ನೇರವಾಗಿ ಭೇಟಿ ಮಾಡಿ ಸಂದರ್ಶಿಸಿ ಅವರಿಂದ ಅಧ್ಯಯನದ ವಿಷಯಕ್ಕೆ ಸಂಬಂಧಿಸಿದ ಉತ್ತರಗಳನ್ನು ಪಡೆಯುತ್ತಾರೆ. ಸಂದರ್ಶನದಲ್ಲಿ ಸ್ಥಳದಲ್ಲೇ ಸ್ವಯಂ ಪ್ರೇರಿತ ಪ್ರಶ್ನೆಗಳನ್ನು ಕೇಳಲಾಗುವುದು. ಈ ವಿಧಾನದಿಂದ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಪಡೆಯಬಹುದು.

ಮಾಧ್ಯಮಿಕ ಮೂಲಗಳು:
ಮಾಹಿತಿ ಸಂಗ್ರಹಣೆಯ ಮೂಲಗಳಲ್ಲಿ ಪ್ರಮುಖವಾದದ್ದು ಇದನ್ನು ದಾಖಲೆಗಳೆಂದು ಕರೆಯುವರು. ಪರೋಕ್ಷವಾಗಿ ಅಂದರೆ ಸಂಶೋಧಕನು ನೇರ ಸಹಭಾಗಿತ್ವವಿಲ್ಲದೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಗ್ಗೆ ದಾಖಲೆಗಳ ಮೂಲಕ ಮಾಹಿತಿಯನ್ನು ಪಡೆಯುವುದಕ್ಕೆ ಮಾಧ್ಯಮಿಕ ಮಾಹಿತಿ ಮೂಲಗಳೆಂದು ಕರೆಯುವರು. ಮಾಧ್ಯಮಿಕ ಮಾಹಿತಿ ಮೂಲಗಳೆಂದರೆ;
ವೈಯುಕ್ತಿಕ ದಾಖಲೆಗಳು: ವ್ಯಕ್ತಿಯ ನಡತೆ, ನಂಬಿಕೆ, ಅಭಿಪ್ರಾಯ ಆದರ್ಶಗಳು, ಭಾವನೆಗಳ ಬಗ್ಗೆ ಅವನೇ ಬರೆದಿರುವ ಬರವಣಿಗೆ ದಾಖಲೆಗಳನ್ನು ವೈಯುಕ್ತಿಕ ದಾಖಲೆಗಳೆನ್ನುವರು. ಅವುಗಳೆಂದರೆ, 1. ಜೀವನ ಚರಿತ್ರೆ 2. ದಿನಚರಿ 3. ಪತ್ರಗಳು 4. ಸ್ಮರಣಿಗಳು.

ಸಾರ್ವಜನಿಕ ದಾಖಲೆಗಳು: ಸಾಮಾಜಿಕ ಸಂಶೋಧನೆಯಲ್ಲಿ ವೈಯುಕ್ತಿಕ ದಾಖಲೆಗಳ ಹಾಗೆ ಸಾರ್ವಜನಿಕ ದಾಖಲೆಗಳು ಸಹಾ ಉಪಯುಕ್ತವಾಗಿವೆ. ಸರ್ಕಾರ ಅಥವಾ ಸರ್ಕಾರೇತರ ಮೂಲಗಳಿಂದ ನಿರ್ದಿಷ್ಟ ಉದ್ದೇಶಕ್ಕಾಗಿ ತಯಾರಿಸಲ್ಪಟ್ಟಿರುತ್ತದೆ.
ಅವುಗಳೆಂದರೆ; 1. ಕಡತಗಳು 2. ವರದಿಗಳು 3. ವಾರ್ತಾ ಪತ್ರಿಕೆಗಳು 4. ನಿಯತ ಕಾಲಿಕೆಗಳು 5. ಪ್ರಕಟಿತ ದಾಖಲೆಗಳು 6. ಜನಗಣತಿ ವರದಿಗಳು ಇವುಗಳಿಂದ ಮಾಹಿತಿಯನ್ನು ಪಡೆಯಲಾಗುತ್ತದೆ.
ಪ್ರಸ್ತುತ ಸಂಶೋಧನೆಗೆ ಸಂಶೋಧಕನು ಅನುಸೂಚಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಕಾರಣವೆಂದರೆ, ಪ್ರಸ್ತುತ ಅಧ್ಯಯನವು ಕಾರ್ಮಿಕರಿಗೆ ಸಂಬಂಧಿಸಿದ್ದರಿಂದ ಕಾರ್ಮಿಕರಲ್ಲಿ ಅನಕ್ಷರಸ್ತರು ಸಹಾ ಇರುತ್ತಾರೆ. ಆದಕಾರಣ ಪ್ರಶ್ನೆಗಳನ್ನು ಕೇಳಿ ಅವರಿಂದ ಬಂದ ಉತ್ತರವನ್ನು ದಾಖಲಿಸಿಕೊಳ್ಳುವ ಸಲುವಾಗಿ ಈ ವಿಧವನ್ನು ಅನುಸರಿಸಲಾಗಿದೆ.

ಮಾಹಿತಿ ಸಂಗ್ರಹಣೆಯ ವಿಶ್ಲೇಷಣೆ: ಸೆಲ್ಟಿಜ್ ರವರ ಪ್ರಕಾರ ವಿಶ್ಲೇಷಣೆ ನಿರ್ಣಯಗಳ ರಚನೆಗೆ ಅಥವಾ ಪ್ರಾಕ್ ಕಲ್ಪನೆಯ ಪರೀಕ್ಷೆಗೆ ಅನುಕೂಲವಾಗುವ ಮಾಹಿತಿ ಲಭ್ಯತೆಯ ವಿನ್ಯಾಸದ ಕ್ರಿಯೆಯೇ ಮಾಹಿತಿ ವಿಶ್ಲೇಷಣೆ. ಮಾಹಿತಿ ವಿಶ್ಲೇಷಣೆಯಲ್ಲಿ ಎರಡು ಬಗೆಗಳಿವೆ. 1. ಗುಣಾತ್ಮಕ ವಿಶ್ಲೇಷಣೆ 2. ಪರಿಮಾಣಾತ್ಮಕ ಮಾಹಿತಿ ವಿಶ್ಲೇಷಣೆ.
ಒಂದು ಸಂಶೋಧನೆಯಲ್ಲಿ ಅಧ್ಯಾಯನದ ವಿಧಾನ ಎಷ್ಟು ಮುಖ್ಯವೋ ಅದೇ ರೀತಿಯಾಗಿ ಮಾಹಿತಿ ವರ್ಗೀಕರಣ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶ್ಲೇಷಣೆ ಎಂಬುದಕ್ಕೆ ವಿಭಜನೆ ಅಥವಾ ವಿಂಗಡಿಸುವಿಕೆ ಎಂಬ ಅರ್ಥವಿದೆ. ಸಂಶೋಧಕನು ಸಂಶೋಧಕನ ವಿಷಯವನ್ನನುಸರಿಸಿ ತನಗೆ ದೊರೆತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಅವುಗಳನ್ನು ಕ್ರಮಬದ್ಧವಾಗಿ ವಿಂಗಡಿಸಿ ಅನುಕೂಲ ಮತ್ತು ಅನಾನುಕೂಲಗಳನ್ನು ಪರಾಮರ್ಶಿಸಿ ಅಂತಿಮ ವರದಿಯನ್ನು ತಯಾರಿಸಲು ಈ ವಿಶ್ಲೇಷಣೆ ಅನುವು ಮಾಡಿಕೊಡುತ್ತದೆ. ಈ ಮಾಹಿತಿ ವಿಶ್ಲೇಷಣೆಯಲ್ಲಿ ಕೆಲವು ಹಂತಗಳನ್ನು ನೋಡಬಹುದು. ಅವುಗಳೆಂದರೆ;
ಪರಿಷ್ಕರಣೆ:
ಮಾಹಿತಿ ಸಂಗ್ರಹಿಸಿದನ್ನು ಪರಿಪೂರ್ಣತೆ ದೃಡತೆ ಮತ್ತು ಕ್ರಮಬದ್ಧತೆಯಲ್ಲಿ ಕಾಯ್ದುಕೊಂಡು ಬದಲಾಗುವುದು. ಮಾಹಿತಿ ವಿಶ್ಲೇಷಿಸಿದಾಗ ಸಂಶೋಧಕನು ಪ್ರತಿವರ್ತಿಗಳ ಪ್ರತಿಕ್ರಿಯೆಗಳು ಮತ್ತು ಮಾಹಿತಿಯನ್ನು ಪೂರ್ಣವಾಗಿ ಪರಿಶೀಲಿಸುವ ಒಂದು ಕ್ರಮವೇ ಪರಿಷ್ಕರಣೆ ಎನ್ನಬಹುದು.
ಸಾಂಕೇತಿಕರಣ: ಇದು ಎರಡನೇ ಹಂತವಾಗಿದ್ದು ಪ್ರಶ್ನಾವಳಿಯ ಗುಣಾತ್ಮಕ ಮಾಹಿತಿಯನ್ನು ಸಂಖ್ಯಾರೂಪಕ್ಕೆ ಪರಿವರ್ತಿಸುವುದಾಗಿದೆ ಮಾಹಿತಿಯನ್ನು ವರ್ಗೀಕರಿಸುವ ತಾಂತ್ರಿಕ ಪ್ರಕ್ರಿಯೆ ಸಾಂಕೇತಿಕರಣ.

ಪಟ್ಟಿ ಮಾಡುವಿಕೆ: ಪಟ್ಟಿ ಮಾಡುವಿಕೆಯು ಮಾಹಿತಿಯನ್ನು ಸಂಖ್ಯಾತ್ಮಕ ವಿಶ್ಲೇಷಣೆ ಮಾಡುವ ಕಾರ್ಯದ ತಾಂತ್ರಿಕ ಪ್ರಕ್ರಿಯೆ ಸಂಶೋಧನಾ ಫಲಿತಾಂಶಗಳನ್ನು ಸಂಖ್ಯಾ ರೂಪದ ಪಟ್ಟಿಗಳನ್ನಾಗಿಸುವ ಕ್ರಿಯೆ, ಪಟ್ಟಿ ಮಾಡುವಲ್ಲಿನ ಮುಖ್ಯ ಕಾರ್ಯವೆಂದರೆ ವಿವಿಧ ವರ್ಗ ಅಥವಾ ಘಟಕಗಳಲ್ಲಿನ ಸಂಖ್ಯೆಯನ್ನು ನಿರ್ಧರಿಸುವುದಾಗಿದೆ. ಸಾಂಕೇತಿಸಲ್ಪಟ್ಟ ಮಾಹಿತಿಯನ್ನು ಪಟ್ಟಿಯ ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ.
ಪ್ರಾಕ್ ಕಲ್ಪನೆ ಪರೀಕ್ಷೆಯ ಹಂತ: ಮೇಲಿನ ಮೂರು ಕಾರ್ಯಗಳು ಮುಗಿದ ನಂತರ ಪ್ರಾಕ್ ಕಲ್ಪನೆಯನ್ನು ಪುನರ್ ಪರಿಶೀಲಿಸಲಾಗುತ್ತದೆ. ಪ್ರಾಕ್ ಕಲ್ಪನೆ ಮಾಹಿತಿಯಾದಾರಿತ ನಿರ್ಣಯಗಳಿಗೆ ಪೂರಕವಾಗಿದ್ದರೆ ಪ್ರಾಕ್ ಕಲ್ಪನೆಗಳನ್ನು ಉಳಿಸಿಕೊಳ್ಳಲಾಗುತ್ತದೆ. ಇಲ್ಲದಿದ್ದರೆ ತಿರಸ್ಕರಿಸಲಾಗುತ್ತದೆ. ಪ್ರಾಕ್ ಕಲ್ಪನೆಯಿಲ್ಲದೆ ಸಂಶೋಧನೆ ನಡೆಸಿದ್ದರೆ ಈ ಹಂತದಲ್ಲಿ ಪ್ರಾಕ್ ಕಲ್ಪನೆಯನ್ನು ರಚಿಸಬಹುದು.

ಅಧ್ಯಯನದ ಮಿತಿಗಳು:
ಪ್ರತಿಯೊಂದು ಸಾಮಾಜಿಕ ಸಂಶೋಧನೆಯ ತನ್ನದೇ ಆದ ಇತಿಮಿತಿಗಳನ್ನು ಹೊಂದಿರುತ್ತದೆ. ಈ ರೀತಿಯ ಇತಿಮಿತಿಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಕೆಲವು ವೇಳೆ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿರುವುದು ಸಹಜವಾದುದಾಗಿದೆ.
ಸಂಶೋಧನ ಅಧ್ಯಯನಕ್ಕೆ ಕಡಿಮೆ ಕಾಲಾವಕಾಶವಿರುವುದರಿಂದ ಸಂಶೋಧಕನು ಅನೇಕ ಒತ್ತಡಗಳಿಗೆ ಒಳಗಾಗುವ ಸಂಭವವಿದೆ.
ಸಂಶೋಧಕನು ವಿದ್ಯಾರ್ಥಿ ದಿಸೆಯಲ್ಲಿರುವುದರಿಂದ ಹೆಚ್ಚಿನ ವಿಷಯದ ಸಂಗ್ರಹಣೆ ಅನುಭವದ ಕೊರತೆ ಇದೆ.
ಸಂಶೋಧಕ ಆಯ್ಕೆ ಮಾಡಿದ ಅಧ್ಯಯನ ಹೊಸ ವಿಷಯವಾಗಿದ್ದು ಮಾಹಿತಿ ಕಲೆ ಹಾಕುವುದು ತಡವಾಗಬಹುದು. ಇಲ್ಲವೇ ಕೆಲವು ಮಾಹಿತಿ ಸಿಗದೇ ಇರಬಹುದು.
ಸಂಶೋಧಕ ಆಯ್ಕೆ ಮಾಡಿದ ಅಧ್ಯಯನ ಕ್ಷೇತ್ರದ ಜನರು ಸಹಕರಿಸದಿರಬಹುದು.
 ಒಟ್ಟಾರೆಯಾಗಿ ಪ್ರಶಿಕ್ಷಣಾರ್ಥಿಯು ಕೆಲವು ವಿಷಯಗಳನ್ನು ಗೌಪ್ಯವಾಗಿ ಇರಿಸಬೇಕಾದ ಪರಿಸ್ಥಿತಿಯನ್ನು ಸಹಾ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಸಂಶೋಧನೆಯಲ್ಲೂ ಅನುಕೂಲ ಮತ್ತು ಅನಾನುಕೂಲಗಳು ಇರುವುದು ಸಹಜವಾಗಿದೆ. ಇವುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನೊಂದು ಬಿಟ್ಟಿರಲಾರದೆಂದು ಹೇಳಬಹುದು. ಪ್ರಶಿಕ್ಷಣಾರ್ಥಿಯು ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ ಅಧ್ಯಯನಕ್ಕೆ ಸಂಬಂಧಿಸಿದಂತವುಗಳನ್ನು ನೀಡಬೇಕಾಗುತ್ತದೆ.
 ಉದಾಹರಣೆಗೆ ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಮತ್ತು ಸಂಗ್ರಹಣೆಯನ್ನು ಒಂದೇ ಪ್ರದೇಶದಲ್ಲಿ ಮಾಡಲಾಗುವುದರಿಂದ ಅದು ಅದೇ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಹುದು. ಇದನ್ನರಿತು ಒಂದಕ್ಕಿಂತ ಹೆಚ್ಚಿಗೆ ಅಧ್ಯಯನ ನಡೆಸಿ ಪ್ರದೇಶವಾರು ಇರುವ ಮಾಹಿತಿಯನ್ನು ಸಂಗ್ರಹಿಸುವುದು ಒಳಿತಾಗಿದೆ.

ಅಧ್ಯಾಯ-4 ಮಾಹಿತಿ ವಿಶ್ಲೇಷಣೆ ಮತ್ತು ದತ್ತಾಂಶಗಳ ವರ್ಗೀಕರಣ
ಪ್ರಸ್ತುತ ಅಧ್ಯಯನದಲ್ಲಿ (ಮಾಹಿತಿ) ದತ್ತಾಂಶಗಳನ್ನು ಮತ್ತು ಅಧ್ಯಯನ ಸಮಯದಲ್ಲಿ ಅವಲೋಕಿಸಿದಂತಹ ಮಾಹಿತಿಗಳನ್ನು ಪಟ್ಟಿಗಳ ಮೂಲಕ ಸಂಶೋಧಕರು ವಿವರಿಸಿದ್ದಾರೆ. ಒಂದು ಸಂಶೋಧನೆಯಲ್ಲಿ ಪ್ರಸ್ತಾವನೆ ಅಧ್ಯಯನದ ವಿಧಾನ ಎಷ್ಟು ಮುಖ್ಯವೊ ಅದೇ ರೀತಿಯಾಗಿ ಮಾಹಿತಿ ವರ್ಗೀಕರಣ ಮತ್ತು ದತ್ತಾಂಶ ವಿಶ್ಲೇಷಣೆಯು ಸದಾ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.
 ವಿಶ್ಲೇಷಣೆ ಎಂಬುದಕ್ಕೆ ವಿಭಜನೆ ಅಥವಾ ವಿಂಗಡಿಸುವಿಕೆ ಎಂಬ ಅರ್ಥವಿದೆ. ಸಂಶೋಧಕನು ಸಂಶೋಧನ ವಿಷಯವನ್ನನುಸರಿಸಿ ತನಗೆ ದೊರೆತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಾ ಬರುವನು. ಈ ಕ್ರೂಢಿಕೃತವಾದ ಎಲ್ಲಾ ಅಂಶಗಳನ್ನು ಸರಿಯಾಗಿ ಕ್ರಮಬದ್ಧವಾದ ಮತ್ತು ಕಾರ್ಯಕಾರಣಗಳ ಪರಸ್ಪರ ಸಂಬಂಧವನ್ನು ವಿಂಗಡಿಸುವುದು ವಿಶ್ಲೇಷಣೆಯಾಗಿದೆ.
 ಅಂಕಿ ಅಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮತ್ತು ಈ ರೀತಿಯ ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಸರಿಯಾಗಿ ಅರ್ಥೈಸುವುದು ಸಂಶೋಧನೆಯಲ್ಲಿ ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ. ಆದುದರಿಂದ ಅಂಕಿ-ಅಂಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಯಬಹುದಾಗಿದೆ.
 ಈ ಅಧ್ಯಯನದಿಂದ ಪಡೆದಂತಹ ದತ್ತಾಂಶಗಳನ್ನು ಪಟ್ಟಿಗಳ ಮೂಲಕ ಕ್ರಮಾನುಕ್ರಮವಾಗಿ ವಿಶ್ಲೇಷಣೆಗೊಳಿಸಲಾಗಿದೆ.

ಪಟ್ಟಿ ಸಂಖ್ಯೆ -1: ಪ್ರತಿವಾದಿಗಳ ಲಿಂಗವನ್ನು ಸೂಚಿಸುತ್ತದೆ
ಆಕ್ಸ್ಫರ್ಡ್ ಶಬ್ದಕೋಶದ ಪ್ರಕಾರ ಮನುಷ್ಯರನ್ನು ವ್ಯಾಕರಣ ಬದ್ದವಾಗಿ ವರ್ಗೀಕರಿಸಲು ಲಿಂಗವನ್ನು ಪರಿಗಣಿಸಲಾಗುವುದು. ಅದೇ ರೀತಿ ಡಾ.ಎಂ.ಪಿ. ವಸಂತ ಕುಮಾರ್ ರವರ ಪ್ರಕಾರ ಲಿಂಗ ಎಂದರೆ ಬೃಹತ್ ಶಬ್ದ ಇದನ್ನು ಮಾನವನ ದೈಹಿಕ ರಚನೆ ಮತ್ತು ಜೈವಿಕ ಗುಣ ಬದಲಾವಣೆಯಿಂದ ತಿಳಿಯಬಹುದು ಎಂದಿದ್ದಾರೆ.
 ಪ್ರಸ್ತುತ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವೆರಡು ಬದುಕೆಂಬ ಬಂಡಿಗೆ ಗಾಲಿಗಳಾಗಿ ಸಂಸಾರವನ್ನು ನೀಗಿಸುತ್ತವೆ. ಈ ಸಂಶೋಧನೆಯಲ್ಲಿ ರಾಷ್ಟ್ರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಎಷ್ಟು ಸ್ತ್ರೀಯರು ಹಾಗೂ ಎಷ್ಟು ಪುರುಷರು ತೊಡಗಿದ್ದಾರೆ ಎಂಬುದನ್ನು ತಿಳಿಯಲಾಗಿದೆ. ಶೇಕಡ 78% ರಷ್ಟು ಪ್ರತಿವಾದಿಗಳು ಪುರುಷರು ಹಾಗೂ ಶೇಕಡ 22% ರಷ್ಟು ಪ್ರತಿವಾದಿಗಳು ಮಹಿಳೆಯರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಂಡು ಬರುತ್ತದೆ.
 ಪುರುಷರ ಪ್ರತಿವಾದಿಗಳ ಪ್ರಮಾಣವು ಶೇ. 78% ರಷ್ಟು ಇರುವುದಕ್ಕೆ ಕಾರಣವೆಂದರೆ ಕೆಲಸಗಳಲ್ಲಿ ಪುರುಷರೇ ಹೆಚ್ಚಿನದಾಗಿ ಅವಶ್ಯಕತೆಯಿರುವುದರಿಂದ ಪುರುಷರ ಪ್ರಮಾಣ ಅಧಿಕವಾಗಿದ್ದು ಶೇಕಡಾ 22% ರಷ್ಟು ಮಹಿಳಾ ಪ್ರತಿವಾದಿಗಳು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಕೆಲಸ ಮಾಡುವುದರಿಂದ ಇವರ ಪ್ರಮಾಣ ಪುರುಷರಿಗಿಂತ ಕಡಿಮೆಯಿದೆ.

ಪಟ್ಟಿ ಸಂಖ್ಯೆ -2: ಪ್ರತಿವಾದಿಗಳ ವಯಸ್ಸನ್ನು ಸೂಚಿಸುತ್ತದೆ.
ವೆಬ್ಸ್ಟರ್ ನಿಘಂಟು ಪ್ರಕಾರ ವಯಸ್ಸು ಎಂದರೆ ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗಿನ ಕಾಲಾವಕಾಶದ ಕಾನೂನು ಬದ್ಧ ಹಕ್ಕುಗಳನ್ನು ಸಂಪೂರ್ಣವಾಗಿ ಪಡೆಯುವ ಸಮಯಕ್ಕೆ ವಯಸ್ಸು ಎನ್ನುತ್ತಾರೆ. ವಯಸ್ಸು ಎಂಬ ಪದಗಳ ಬಗ್ಗೆ ಕಾಲ ಶಾಸ್ತ್ರಜ್ಞರು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ; ಬಾಲ್ಯ, ಹರೆಯ, ಯುವಜನರ, ವೃದ್ಧಾಪ್ಯ ಎಂದು ವಿಭಾಗಿಸಿದ್ದಾರೆ.
ಈ ಸಂಶೋಧನೆಯಲ್ಲಿ ವಯಸ್ಸಿನ ಬಗ್ಗೆ ತಿಳಿಯುವುದರಿಂದ ಸರ್ಕಾರದ ನಿಯಮಾವಳಿಗಳಂತೆ ನಿಗದಿಪಡಿಸಿರುವ ವಯಸ್ಸಿನವರು ಕೆಲಸ ಮಾಡುತ್ತಿದ್ದಾರೆಯೇ ಅಥವಾ ಹಿರಿಯ ಜೀವಿಗಳು ಹೆಚ್ಚಾಗಿ ಈ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಈ ವಯಸ್ಸನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಪಟ್ಟಿ ಸಂಖ್ಯೆ-2ರಂತೆ ಪ್ರತಿವಾದಿಗಳಲ್ಲಿ ಶೇ.12% ರಷ್ಟು ಪ್ರತಿವಾದಿಗಳು 20-30 ವಯಸ್ಸಿನವರು, ಶೇ.40% ರಷ್ಟು ಪ್ರತಿವಾದಿಗಳು 30-40 ವಯಸ್ಸಿನವರು, ಶೇ.48% ಪ್ರತಿವಾದಿಗಳು 41-50 ವಯಸ್ಸಿನವರು ಈ ಯೋಜನೆಯಡಿಯಲ್ಲಿ ಕೆಲಸದಲ್ಲಿ ದುಡಿಯುತ್ತಿದ್ದಾರೆ ಎಂದು ಈ ವಲಯದಲ್ಲಿ ಕಂಡು ಬಂದಿದೆ.

ಪಟ್ಟಿ ಸಂಖ್ಯೆ-೩: ಪ್ರತಿವಾದಿಗಳ ವಿದ್ಯಾಭ್ಯಾಸದ ಮಟ್ಟವನ್ನು ಸೂಚಿಸುತ್ತದೆ.
 ನಹೀ ಜ್ಞಾನೇನ ಸದೃಶ್ಯಂ ಅಂದರೆ ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ ಎನ್ನುತ್ತಾರೆ. ಅಂತಹ ಜ್ಞಾನವನ್ನು ನೀಡುವುದೇ ಶಿಕ್ಷಣ. ಸಾಮಾನ್ಯವಾಗಿ ಮಾನವನ ಅಂತರಂಗದ ಭಾವನೆಗಳನ್ನು ಬುದ್ಧಿಶಕ್ತಿಯ ಮೂಲಕ ಹೊರಗೆ ಸೆಳೆದು ಅವನನ್ನು ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವುದೇ ಶಿಕ್ಷಣ ಅಥವಾ ವಿದ್ಯಾಭ್ಯಾಸ.
ಅರಿಸ್ಟಾಟಲ್ ಪ್ರಕಾರ ಶಿಕ್ಷಣವೆಂದರೆ ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸಿನ ನಿರ್ಮಾಣವೇ ಶಿಕ್ಷಣ.
ಡರ್ಖೀಮ್ ರವರ ಪ್ರಕಾರ ಶಿಕ್ಷಣವು ಯುವ ಪೀಳಿಗೆಯನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆ. ಇದು ಅವರ ನಿರೀಕ್ಷಣೆ ಹಾಗೂ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಸತತ ಪ್ರಯತ್ನಕ್ಕೆ ಶಿಕ್ಷಣ ಎನ್ನುತ್ತಾರೆ.
ಈ ಸಂಶೋಧನೆಯಲ್ಲಿ ಶಿಕ್ಷಣ ಮಟ್ಟವನ್ನು ತಿಳಿಯುವುದರಿಂದ ಜನರ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ತಿಳಿಯಲು ಸಹಾಯವಾಗುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನವನ್ನು ಪರಿವರ್ತಿಸುವುದರಿಂದ ವಿವಿಧ ರೀತಿಯ ಶಿಕ್ಷಣ ಪಡೆದ ವ್ಯಕ್ತಿಗಳ ಜೀವನ ಯಾವ ರೀತಿ ಇದೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಶಿಕ್ಷಣ ಪಡೆದವರ ಮತ್ತು ಶಿಕ್ಷಣ ಪಡೆಯದವರ ನಡುವಿನ ವ್ಯತ್ಯಾಸವನ್ನು ಅರಿಯಬಹುದಾಗಿದೆ.
ಪಟ್ಟಿ ಸಂಖ್ಯೆ-4 ರಲ್ಲಿರುವಂತೆ ಶೇ.56% ರಷ್ಟು ಅನಕ್ಷರಸ್ಥರು ಶೇ.26% ರಷ್ಟು ಪ್ರಾಥಮಿಕ ಶೇ.18% ಪ್ರೌಢ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಅನಕ್ಷರಸ್ತರ ಪ್ರಮಾಣವು ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಯಾವುದೇ ಶಿಕ್ಷಣದ ಅವಶ್ಯಕತೆ ಇಲ್ಲದ್ದರಿಂದ ಕೇವಲ ದೈಹಿಕ ಶ್ರಮವನ್ನು ಹೆಚ್ಚಾಗಿ ಬಯಸುವುದರಿಂದ ಬಹಳಷ್ಟು ಅನಕ್ಷರಸ್ತರು ಈ ವಲಯದಲ್ಲಿ ಕಂಡು ಬರುತ್ತಾರೆ.

ಪಟ್ಟಿ ಸಂಖ್ಯೆ-5: ಪ್ರತಿವಾದಿಗಳ ಕುಟುಂಬದ ವಿಧವನ್ನು ಸೂಚಿಸುತ್ತದೆ.
 ಬ್ರೌನ್ ರವರ ಪ್ರಕಾರ ಅವಿಭಕ್ತ ಕುಟುಂಬ ಎಂದರೆ ಒಂದು ಅಥವಾ ಎರಡು ತಲೆಮಾರಿಗೆ ಸೇರಿದವರೆಲ್ಲಾ ಒಂದೇ ಕುಟುಂಬದಲ್ಲಿ ಪ್ರತ್ಯೇಕ ಸಾಂಸಾರಿಕ ಜೀವನ ನಡೆಸುವುದಾಗಿದೆ. ಆಗ್ಬರ್ನ್ ಮತ್ತು ನಿಮ್ ಕಾಪ್ ರವರ ಪ್ರಕಾರ ಕುಟುಂಬವೆಂದರೆ ಹೆಚ್ಚು ಕಡಿಮೆ ಸಂಘಟಿತವಾಗಿ ಗಂಡ ಮತ್ತು ಹೆಂಡತಿ ಜೊತೆಗೆ ಮಕ್ಕಳು ಅಥವಾ ಗಂಡ ಮತ್ತು ಹೆಂಡತಿಯರಿಬ್ಬರೂ ವಿವಾಹದ ಮುಖಾಂತರ ಒಂದುಗೂಡಿರುವ ಸ್ಥಿತಿಗೆ ಕುಟುಂಬ ಎಂದು ಕರೆಯುತ್ತಾರೆ.
ಪಟ್ಟಿ ಸಂಖ್ಯೆ-5 ರಲ್ಲಿ ಸೂಚಿಸಿರುವಂತೆ ಪ್ರಸ್ತುತ ಅಧ್ಯಯನದಲ್ಲಿ ಶೇ.98% ಪ್ರತಿವಾದಿಗಳು ವಿಭಕ್ತ ಕುಟುಂಬದವರಾಗಿದ್ದು, ಶೇ.2% ರಷ್ಟು ಪ್ರತಿವಾದಿಗಳು ಅವಿಭಕ್ತ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಆದ್ದರಿಂದ ಅವಿಭಕ್ತ ಪ್ರಮಾಣವು ಕಡಿಮೆಯಿದೆ.

ಪಟ್ಟಿ ಸಂಖ್ಯೆ-6: ಪ್ರತಿವಾದಿಗಳ ವೈವಾಹಿಕ ಸ್ಥಿತಿಯನ್ನು ಸೂಚಿಸುತ್ತದೆ.
ಆರ್. ಹೆಚ್ ಲೋವಿಯವರ ಪ್ರಕಾರ ಸಮಾಜದ ಅಂಗೀಕಾರ ಪಡೆದ ಸಂಗಾತಿಗಳ ಶಾಶ್ವತವಾದ ಸಂಯೋಗವೇ ವಿವಾಹ. ವಿವಾಹ ಒಂದು ಪ್ರಮುಖವಾದ ಹಾಗೂ ಸಾರ್ವತ್ರಿಕ ಸ್ವರೂಪದ ಸಾಮಾಜಿಕ ಸಂಸ್ಥೆ ಮಾನವನ ಲೈಂಗಿಕ ಜೀವನವನ್ನು ಹಾಗೂ ಲೈಂಗಿಕ ಸಂಬಂಧಗಳನ್ನು ನಿಯಂತ್ರಿಸುವುದಕ್ಕಾಗಿ ಸಮಾಜದಿಂದ ಸ್ಥಾಪಿತವಾದ ಸಂಸ್ಥೆಯಾಗಿದೆ. ಮೌಲಿನಾಸ್ಕಿ ರವರ ಪ್ರಕಾರ ವಿವಾಹವು ಸ್ತ್ರಿ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನು ದೃಢೀಕರಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶ ಪೂರ್ವಕವಾಗಿ ಏರ್ಪಡಿಸಿಕೊಂಡ ಒಪ್ಪಂದವಾಗಿದೆ.
 ಸಮಾಜದಲ್ಲಿ ಸತಿ-ಪತಿಗಳಿಗೆ ನಡೆಸಬೇಕಾದ ವಯಸ್ಸಿನಲ್ಲಿರುವ ಕಾರ್ಮಿಕರು ಯಾವ ರೀತಿಯ ಜೀವನವನ್ನು ನಡೆಸುತ್ತಿದಾರೆ ಎಂಬುದನ್ನು ತಿಳಿಯಲು ಹಾಗೂ ಈ ಜೋಡಿಗಳ ಸ್ಥಿತಿಗತಿ ಮತ್ತು ಸ್ಥಾನಮಾನವನ್ನು ತಿಳಿಯಲು ಸಹಾಯಕವಾಗಿದೆ.
 ಪಟ್ಟಿ ಸಂಖ್ಯೆ-6 ರಲ್ಲಿ ಸೂಚಿಸಿರುವಂತೆ ಶೇ.98% ಪ್ರತಿವಾದಿಗಳು ವಿವಾಹಿತರಾಗಿದ್ದು ಹಾಗೇ ಶೇ.02% ರಷ್ಟು ಪ್ರತಿವಾದಿಗಳು ಅವಿವಾಹಿತರಾಗಿದ್ದಾರೆ ಎಂದು ಕಂಡು ಬಂದಿದೆ.

ಪಟ್ಟಿ ಸಂಖ್ಯೆ-7: ಪ್ರತಿವಾದಿಗಳ ಧರ್ಮವನ್ನು ಸೂಚಿಸುತ್ತದೆ.
ಧರ್ಮ ಎಂಬ ಪದವು ದೃ ಎಂಬ ದಾತುವಿನಿಂದ ಬಂದಿದೆ. ದೃ ಎಂದರೆ ಧರಿಸುವುದು ಎನ್ನುವ ಅರ್ಥವಿದೆ. ಧರ್ಮ ಎಂಬ ಪದವು ವಿಶಾಲವಾದ ಅರ್ಥ ಹೊಂದಿದ್ದು, ಧರ್ಮ ಎಂದರೆ ಆಗ್ಬರ್ನ್ ಮತ್ತು ನಿಂಕಾಫ್ ರವರ ಪ್ರಕಾರ ಮಾನವನು ಅತಿ ಲೋಕಿಕ ಅಥವಾ ಅದ್ಬುತ ಶಕ್ತಿಗಳ ವಿಷಯವಾಗಿ ಹೊಂದಿರುವ ಮನೋಭಾವವೇ ಧರ್ಮ.
ಸಂಶೋಧನೆಯಲ್ಲಿ ಧರ್ಮವನ್ನು ತಿಳಿಯುವುದರಿಂದ ಈ ಪ್ರದೇಶದ ಜನರ ಧಾರ್ಮಿಕ ಜೀವನವನ್ನು ತಿಳಿಯಬಹುದು. ಧಾರ್ಮಿಕ ಜೀವನವು ಜನರ ಸ್ಥಾನಮಾನವನ್ನು ನಿರ್ಧರಿಸುವ ಒಂದು ಅಂಗವಾಗಿದೆ. ಒಂದೊಂದು ಧರ್ಮದ ಜನರು ಒಂದೊಂದು ರೀತಿಯ ಜೀವನದ ವಿಧಾನವನ್ನು ಅನುಸರಿಸುವುದರಿಂದ ಜನರ ಒಟ್ಟಾರೆ ಜೀವನದ ಬಗ್ಗೆ ತಿಳಿಯಲು ಅನುಕೂಲವಾಗಿದೆ.
 ಪಟ್ಟಿ ಸಂಖ್ಯೆ-7 ರಲ್ಲಿ ತಿಳಿಸಿರುವಂತೆ ಹಿಂದೂ ಧರ್ಮದವರು ಶೇ.94% ರಷ್ಟು ಇದ್ದು, ಮುಸ್ಲಿಂ ಧರ್ಮದವರು ಶೇ.06% ರಷ್ಟು ಇದ್ದಾರೆ.

ಪಟ್ಟಿ ಸಂಖ್ಯೆ-8: ಪ್ರತಿವಾದಿಗಳ ಮಾತೃ ಭಾಷೆಯನ್ನು ಸೂಚಿಸುತ್ತದೆ.
ಭಾಷೆ ಎಂಬ ಪದವು ಸಂಸ್ಕೃತದ ಭಾಷಾ ಎಂಬುದರ ತದ್ಭವವಾಗಿದೆ. ಭಾಷೆ ಎಂಬುದು ಮಾನವನಿಗೆ ಹುಟ್ಟಿನಿಂದ ಬಂದದಲ್ಲ. ಒಂದು ಸಮುದಾಯದ ಸಂಪರ್ಕದಿಂದ ಪ್ರಯತ್ನ ಪೂರ್ವಕವಾಗಿ ನಿರಂತರ ಕಲಿಯುವಂತಹದ್ದು. ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಯಾದೃಚ್ಛಿಕ ಧ್ವನಿ ಸಂಕೇತನಗಳ ವ್ಯವಸ್ಥೆಯೇ ಭಾಷೆ ಎಂಬುದಾಗಿ ಭಾಷಾ ಶಾಸ್ತ್ರಜ್ಞರಾದ ಸ್ಪುಟರ್್ ವಾಂಟ್ ಬ್ಲಾಕ್ ಮತ್ತು ಟ್ರೀಗರ್ ರವರು ಹೇಳಿದ್ದಾರೆ.
 ಕನ್ನಡ ಸಾಹಿತ್ಯದ ಚರಿತ್ರೆಯ ಪ್ರಕಾರ ಮಗುವು ತನಗೆ ದೈವದತ್ತವಾಗಿರುವ ಭಾಷೆಯನ್ನು ಕಲಿಯುವ ಅಳವುದಿಂದ ತನ್ನ ಪರಿಸರದಲ್ಲಿ ಬಳಕೆಯಲ್ಲಿರುವಂತಹ ಭಾಷೆಯನ್ನು ಆರೈಸುತ್ತದೆ ಮತ್ತು ಅನುಕರಿಸುತ್ತದೆ. ಈ ಭಾಷೆಯು ಮಾತೃ ಭಾಷೆ ತಾಯ್ನಾಡಿನ ಮೊದಲ ಭಾಷೆಯೆಂದು ಕರೆಯಲ್ಪಡುತ್ತದೆ.
 ಈ ಸಂಶೋಧನೆಯಲ್ಲಿ ಜನರ ಮಾತೃ ಭಾಷೆಯನ್ನು ತಿಳಿಯುವುದರಿಂದ ಜನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನಲೆಯನ್ನು ತಿಳಿಯಬಹುದಾಗಿದೆ.
 ಪ್ರಸ್ತುತ ಸಂಶೋಧನೆಯಲ್ಲಿ ಭೇದ-ಭಾವವಿಲ್ಲದಂತೆಯೇ ದುಡಿಯುತ್ತಿರುವ ಕಟ್ಟಡ ಕಾರ್ಮಿಕರಲ್ಲಿ ಯಾವ ಭಾಷೆಯವರು ಹೆಚ್ಚಿನವರಾಗಿ ಈ ವೃತ್ತಿಯಲ್ಲಿ ತೊಡಗಿದ್ದಾರೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.
ಪಟ್ಟಿ ಸಂಖ್ಯೆ-8 ರಲ್ಲಿ ಸೂಚಿಸುವಂತೆ ಶೇ.70% ಮಂದಿ ಕನ್ನಡ ಮಾತೃ ಭಾಷೆಯವರಾಗಿದ್ದು ಶೇ.30% ಮಂದಿ ತೆಲುಗು ಭಾಷೆಯನ್ನು ಮಾತನಾಡುವವರು ಇದ್ದಾರೆ.

ಪಟ್ಟಿ ಸಂಖ್ಯೆ-9: ಪ್ರತಿವಾದಿಗಳ ವಾರ್ಷಿಕ ಆದಾಯದ ಮಟ್ಟವನ್ನು ಸೂಚಿಸುತ್ತದೆ.
ಶೇಕಡ 56% ರಷ್ಟು ಪ್ರತಿವಾದಿಗಳು ವಾರ್ಷಿಕ ಆದಾಯ ತಿಳಿಸಿದ್ದಾರೆ ಹಾಗೂ 44% ರಷ್ಟು ಪ್ರತಿವಾದಿಗಳು ವಾರ್ಷಿಕ ಆದಾಯ ತಿಳಿಸಿದ್ದಾರೆ. ಪ್ರಸ್ತುತ ಈ ಸಂಶೋಧನೆಯಿಂದ ತಿಳಿದು ಬಂದ ಅಂಶವೆಂದರೆ ಶೇ.56% ರಷ್ಟು ಪ್ರತಿವಾದಿಗಳು ವಾರ್ಷಿಕ ಆದಾಯವನ್ನು ಹೆಚ್ಚಾಗಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-10: ಪ್ರತಿವಾದಿಗಳು ಹೊಂದಿರುವ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ವಸತಿ ಎಂದರೆ ಸೂರು ಎಂಬರ್ಥ ಬರುತ್ತದೆ. ಮಾನವನಿಗೆ ಮೂಲಭೂತ ಸೌಕರ್ಯಗಳಾದ ಅಹಾರ, ಬಟ್ಟೆ, ವಸತಿ ಇವುಗಳಲ್ಲಿ ವಸತಿ ಸೌಕರ್ಯವು ಬಹಳ ಪ್ರಮುಖವಾದ ಅಂಶವಾಗಿವೆ. ಇತ್ತೀಚಿನ ದಿನಗಳಲ್ಲಿ ಮಾನವ ಈ ವಸತಿಯನ್ನು ಸ್ವಂತ ಮಾಡಿಕೊಳ್ಳುವುದು ದುಸ್ತರವಾಗಿ ಕಾಣತೊಡಗಿದೆ.
 ಈ ಪ್ರದೇಶದಲ್ಲಿ ದುಡಿಯುತ್ತಿರುವ ಫಲಾನುಭವಿಗಳು 50 ಮಂದಿಗಳು ಸಹಾ ಶೇ.100% ರಷ್ಟು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಈ ಮೇಲಿನ ಪಟ್ಟಿಯಲ್ಲಿ ತಿಳಿಯಲಾಗಿದೆ.

ಪಟ್ಟಿ ಸಂಖ್ಯೆ-11: ಪ್ರತಿವಾದಿಗಳು ಯಾವ ರೀತಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಈ ಪ್ರದೇಶದಲ್ಲಿ ದುಡಿಯುತ್ತಿರುವ ಫಲಾನುಭವಿಗಳು ಶೇ.50% ರಷ್ಟು ಕಚ್ಛಾ ಮನೆಯಲ್ಲಿ ವಾಸವಾಗಿದ್ದು ಹಾಗೇ ಶೇ.44% ರಷ್ಟು ಫಲಾನುಭವಿಗಳು ಭಾಗಶಃ ಪಕ್ಕಾ ಮನೆಯನ್ನು ಹೊಂದಿದ್ದಾರೆ ಹಾಗೂ ಬಡತನದ ಬೇಗೆಯನ್ನು ತೀರಿಸಿಕೊಳ್ಳುವ ಸಲುವಾಗಿ ದಿನದ ಕೂಳಿಗಾಗಿ ಈ ಕೆಲಸದಲ್ಲಿ ನಿರತರಾಗಿರುವುದು ಈ ಸಂಶೋಧನೆಯಿಂದ ಕಂಡು ಬಂದಿದೆ.

ಪಟ್ಟಿ ಸಂಖ್ಯೆ-12: ಪ್ರತಿವಾದಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯನ್ನು ಸೂಚಿಸುತ್ತದೆ.
ಶೇ.14% ರಷ್ಟು ಜನರು ಮನೆಯಲ್ಲಿ ಶೌಚಾಲಯ ವ್ಯವಸ್ಥೆಯನ್ನು ಹೊಂದಿದ್ದಾರೆ ಹಾಗೇ ಶೇ.86% ರಷ್ಟು ಜನರು ಮನೆಯಲ್ಲಿ ಶೌಚಾಲಯವನ್ನು ಹೊಂದಿಲ್ಲ ಎಂಬುದನ್ನು ಈ ಸದರಿ ಸಂಶೋಧನೆಯಲ್ಲಿ ತಿಳಿದುಕೊಳ್ಳಲಾಗಿದೆ.

ಪಟ್ಟಿ ಸಂಖ್ಯೆ-13: ಪ್ರತಿವಾದಿಗಳ ಹಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವಿದೆಯೇ ಎಂಬುದನ್ನು ಸೂಚಿಸುತ್ತದೆ.
 ಈ ಮೇಲಿನ ಪಟ್ಟಿಯಲ್ಲಿ ತಿಳಿಸಿರುವಂತೆ ಶೇ.28% ರಷ್ಟು ಹಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ ಹಾಗೇ ಶೇ.72% ರಷ್ಟು ಈ ಹಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ

ಪಟ್ಟಿ ಸಂಖ್ಯೆ-14: ಪ್ರತಿವಾದಿಗಳ ಮನೆಯಲ್ಲಿ ಉಪಕರಣಗಳ ಬಗ್ಗೆ ಸೂಚಿಸುತ್ತದೆ.
ಶೇ.44% ರಷ್ಟು ಪ್ರತಿವಾದಿಗಳು ಮನೆಯಲ್ಲಿ ಉಪಕರಣಗಳನ್ನು ಹೊಂದಿದ್ದಾರೆ ಹಾಗೂ ಶೇ.56% ರಷ್ಟು ಮಂದಿ ಸಾಮಾನ್ಯ ಮನೆಯಲ್ಲಿ ಉಪಕರಣಗಳನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಶೇ.56% ರಷ್ಟು ಮಂದಿ ಮನೆಯಲ್ಲಿ ಜೀವನ ನಡೆಸಲು ಸಾಮಾನ್ಯ ಉಪಕರಣಗಳನ್ನು ಹೊಂದಿದ್ದಾರೆ.

ಪಟ್ಟಿ ಸಂಖ್ಯೆ-15: ಪ್ರತಿವಾದಿಗಳು ಈ ಯೋಜನೆಯಿಂದ ಜೀವನ ನಿರ್ವಹಿಸಲು ಸಾಧ್ಯವೇ ಎಂಬುದನ್ನು ಸೂಚಿಸುತ್ತದೆ.
ಶೇ.56% ರಷ್ಟು ಪ್ರತಿವಾದಿಗಳು ಈ ಯೋಜನೆಯಿಂದ ಜೀವನ ನಿರ್ವಹಿಸಲು ಸಾಧ್ಯ ಎಂದು ತಿಳಿಸಿದ್ದಾರೆ ಹಾಗೇ ಶೇ.42% ರಷ್ಟು ಪ್ರತಿವಾದಿಗಳು ಈ ಯೋಜನೆಯಿಂದ ಜೀವನ ನಿರ್ವಹಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ ಹಾಗೂ ಶೇ.56% ರಷ್ಟು ಪ್ರತಿವಾದಿಗಳು ಹೆಚ್ಚಾಗಿ ಜೀವನ ನಿರ್ವಹಿಸಲು ಸಾಧ್ಯವೆಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-16: ಪ್ರತಿವಾದಿಗಳು ಜೀವನೋಪಾಯಕ್ಕಾಗಿ ಬೇರೆ ಚಟುವಟಿಕೆಗಳನ್ನು ರೂಪಿಸಿದ್ದಾರೆಯೇ ಎಂದು ಸೂಚಿಸುತ್ತದೆ.
ಶೇ.72% ರಷ್ಟು ಪ್ರತಿವಾದಿಗಳು ಜೀವನೋಪಾಯಕ್ಕಾಗಿ ಬೇರೆ ಚಟುವಟಿಕೆಗಳನ್ನು ಹೊಂದಿದ್ದಾರೆ ಹಾಗೂ ಶೇ.28% ರಷ್ಟು ಪ್ರತಿವಾದಿಗಳು ಬೇರೆ ರೀತಿಯ ಜೀವನೋಪಾಯಕ್ಕಾಗಿ ಬೇರೆ ಚಟುವಟಿಕೆಗಳನ್ನು ಹೊಂದಿಲ್ಲ ಎಂದು ತಿಳಿಯಲಾಗಿದೆ ಹಾಗೆಯೇ ಶೇ.72% ರಷ್ಟು ಪ್ರತಿವಾದಿಗಳು ಜೀವನೋಪಾಯಕ್ಕಾಗಿ ಬೇರೆ ಚಟುವಟಿಕೆಗಳನ್ನು ಹೆಚ್ಚಾಗಿ ಹೊಂದಿದ್ದಾರೆ.

ಪಟ್ಟಿ ಸಂಖ್ಯೆ-19: ಪ್ರತಿವಾದಿಗಳ ವಾರ್ಷಿಕ ವೆಚ್ಚದ ಬಹು ಭಾಗದ ಖರ್ಚನ್ನು ಸೂಚಿಸುತ್ತದೆ.
ಶೇ.56% ರಷ್ಟು ಪ್ರತಿವಾದಿಗಳು ಆಹಾರ ಮತ್ತು ವಸತಿಯನ್ನು ಹೊರತುಪಡಿಸಿ ವಾರ್ಷಿಕ ಬಹು ಭಾಗವನ್ನು ಮಕ್ಕಳ ಶಿಕ್ಷಣಕ್ಕಾಗಿ ವಾರ್ಷಿಕ ವೆಚ್ಚದ ಬಹು ಭಾಗವನ್ನು ವಿನಿಯೋಗಿಸುತ್ತಾರೆ ಹಾಗೂ ಶೇ.44% ರಷ್ಟು ಪ್ರತಿವಾದಿಗಳು ವಾರ್ಷಿಕ ಬಹು ಭಾಗವನ್ನು ಹಬ್ಬ-ಹರಿದಿನಕ್ಕಾಗಿ ವಿನಿಯೋಗಿಸುತ್ತಾರೆ ಎಂದು ತಿಳಿಯಲಾಗಿದೆ ಹಾಗೆಯೇ ಈ ಪಟ್ಟಿಯಲ್ಲಿ ತಿಳಿಯುವುದೇನೆಂದರೆ ಶೇ.56% ರಷ್ಟು ಪ್ರತಿವಾದಿಗಳು ವಾರ್ಷಿಕ ವೆಚ್ಚದ ಬಹು ಭಾಗದ ಖರ್ಚನ್ನು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಾರೆ.

ಪಟ್ಟಿ ಸಂಖ್ಯೆ-20: ಪ್ರತಿವಾದಿಗಳಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜನರಿಗೆ ತಿಳಿದಿದೆಯೇ ಎಂಬುದನ್ನು ಸೂಚಿಸುತ್ತದೆ.
ಈ ಮೇಲಿನ ಪಟ್ಟಿಯಲ್ಲಿ ಹಾಗೂ ನಕ್ಷೆಯಲ್ಲಿ ತಿಳಿಸಿರುವಂತೆ ಶೇ.100% ರಷ್ಟು ಪ್ರತಿವಾದಿಗಳು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜನರು ತಿಳುವಳಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ಈ ಯೋಜನೆಯ ಬಗ್ಗೆ ಎಲ್ಲರೂ ತಿಳುವಳಿಕೆಯನ್ನು ಪಡೆದಿದ್ದಾರೆ ಎಂದು ತಿಳಿಯಬಹುದು.

ಪಟ್ಟಿ ಸಂಖ್ಯೆ-21: ಪ್ರತಿವಾದಿಗಳಿಗೆ ಈ ಯೋಜನೆ ಯಾವ ವರ್ಷದಲ್ಲಿ ಬಂದಿದೆ ಎಂಬುದನ್ನು ಸೂಚಿಸುತ್ತದೆ.
ಶೇ.30% ರಷ್ಟು ಪ್ರತಿವಾದಿಗಳು ಈ ಯೋಜನೆಯು ಈ ವರ್ಷದಲ್ಲಿ ಬಂದಿದೆ ಹಾಗೂ ಶೇ.70% ರಷ್ಟು ಪ್ರತಿವಾದಿಗಳು ಈ ಯೋಜನೆಯು ಈ ವರ್ಷದಲ್ಲಿ ಬಂದಿದೆ ಎಂದು ಹೆಚ್ಚಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ತಿಳಿಯಬಹುದು.

ಪಟ್ಟಿ ಸಂಖ್ಯೆ-22: ಪ್ರತಿವಾದಿಗಳು ಈ ಯೋಜನೆಯಡಿಯಲ್ಲಿ ಹೆಣ್ಣು ಮತ್ತು ಗಂಡು ತಾರತಮ್ಯವಿದೆಯಾ ಎಂಬುದನ್ನು ಸೂಚಿಸುತ್ತದೆ.
 ಶೇ.30% ರಷ್ಟು ಪ್ರತಿವಾದಿಗಳು ಈ ಯೋಜನೆಯಲ್ಲಿ ಹೆಣ್ಣು ಮತ್ತು ಗಂಡು ತಾರತಮ್ಯ ಇಲ್ಲಿ ಹಾಗೇ ಶೇ.52% ರಷ್ಟು ಪ್ರತಿವಾದಿಗಳು ಈ ಯೋಜನೆಯಲ್ಲಿ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ಇದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಶೇ. ಶೇ.52% ರಷ್ಟು ಹೆಚ್ಚಾಗಿ ಈ ಯೋಜನೆಯಲ್ಲಿ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ಇದೆ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-23: ಪ್ರತಿವಾದಿಗಳು ಈ ಯೋಜನೆಯಡಿಯಲ್ಲಿ ದೊರೆಯುತ್ತಿರುವ ಕೂಲಿಯನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು ಈ ಯೋಜನೆಯಲ್ಲಿ ದೊರೆಯುತ್ತಿರುವ ಕೂಲಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮೊತ್ತದಲ್ಲಿ ಶೇ.100% ರಷ್ಟು ಪ್ರತಿವಾದಿಗಳು ಈ ಯೋಜನೆಯಲ್ಲಿ ದೊರೆಯುತ್ತಿರುವ ಕೂಲಿಯ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದಾರೆ ಎಂದು ತಿಳಿಯಬಹುದು.

ಪಟ್ಟಿ ಸಂಖ್ಯೆ-24: ಪ್ರತಿವಾದಿಗಳು ಎಷ್ಟು ದಿನಗಳಿಗೆ ಒಮ್ಮೆ ಕೂಲಿ ದೊರೆಯುತ್ತದೆ ಎಂಬುದನ್ನು ಸೂಚಿಸುತ್ತದೆ.
ಶೇ.46% ರಷ್ಟು ಪ್ರತಿವಾದಿಗಳು ಈ ಹೇಳಿಕೆಯ ಪ್ರಕಾರ ಕೆಲಸ ನೀಡುತ್ತಾರೆ ಹಾಗೇ ಶೇ.54% ರಷ್ಟು ಪ್ರತಿವಾದಿಗಳು ಈ ಹೇಳಿಕೆಯ ಪ್ರಕಾರ ದಿನಗಳಿಗೊಮ್ಮೆ ಕೂಲಿ ದೊರೆಯುತ್ತದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಶೇ.54% ರಷ್ಟು ಹೆಚ್ಚಾಗಿ ಪ್ರತಿವಾದಿಗಳು ಈ ಹೇಳಿಕೆಯ ಪ್ರಕಾರ ದಿನಗಳಿಗೊಮ್ಮೆ ಕೂಲಿಯನ್ನು ಮಾಡಬಹುದು ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-25: ಪ್ರತಿವಾದಿಗಳಿಗೆ ಕೂಲಿಯನ್ನು ಯಾರು ಕೊಡುತ್ತಾರೆ ಎಂಬುದನ್ನು ಸೂಚಿಸುತ್ತದೆ.
 ಶೇ.60% ರಷ್ಟು ಪ್ರತಿವಾದಿಗಳು ಕೂಲಿಯನ್ನು ಕಾರ್ಯಕರ್ತರು ನೀಡುತ್ತಾರೆ ಹಾಗೇ ಶೇ.40% ರಷ್ಟು ಪ್ರತಿವಾದಿಗಳು ಸದಸ್ಯರು ಕೂಲಿಯನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ. ಆದ್ದರಿಂದ ಹೆಚ್ಚಾಗಿ ಶೇ.60% ರಷ್ಟು ಪ್ರತಿವಾದಿಗಳು ಕಾರ್ಯಕರ್ತರು ಕೂಲಿಯನ್ನು ನೀಡುತ್ತಾರೆಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-26: ಪ್ರತಿವಾದಿಗಳಿಗೆ ಕೂಲಿ ಹಣವು ಎಷ್ಟು ದಿನಗಳಿಗೆ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು ಸರಿಯಾದ ರೀತಿಯಲ್ಲಿ ಕೂಲಿ ಹಣವು 7 ದಿನಕ್ಕೆ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-27: ಪ್ರತಿವಾದಿಗಳು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ Job Card ಹೊಂದಿದ್ದೀರಾ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಯೋಜನೆಯಡಿಯಲ್ಲಿ Job Card ನ್ನು ಹೊಂದಿದ್ದಾರೆ ಎಂದು ತಿಳಿಯಲಾಗಿದೆ.

ಪಟ್ಟಿ ಸಂಖ್ಯೆ-28: ಪ್ರತಿವಾದಿಗಳು Job Card ನ್ನು ಹೊಂದಿದ ನಂತರ 100 ದಿನಗಳ ಕೆಲಸವನ್ನು ಪಡೆದಿದ್ದೀರಾ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು Job Card ನ್ನು ಹೊಂದಿದ ನಂತರ 100 ದಿನಗಳ ಕೆಲಸವನ್ನು ಪಡೆದಿದ್ದಾರೆ ಎಂದು ತಿಳಿಯಲಾಗಿದೆ.

ಪಟ್ಟಿ ಸಂಖ್ಯೆ-29: ಪ್ರತಿವಾದಿಗಳು NREGA ಯೋಜನೆಯ ಬಗ್ಗೆ ನಮ್ಮ ಗ್ರಾಮಸ್ಥರಿಗೆ ಪಂಚಾಯಿತಿಯವರು ನೀಡಿದ್ದಾರೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-30: ಪ್ರತಿವಾದಿಗಳಲ್ಲಿ ಈ ಯೋಜನೆಯಡಿಯಲ್ಲಿ ಮಕ್ಕಳು ಕೆಲಸ ಮಾಡಬಹುದೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳ ಹೇಳಿಕೆ ಏನೆಂದರೆ NREGA ಯಡಿಯಲ್ಲಿ ಮಕ್ಕಳಿಗೆ ಕೆಲಸ ಮಾಡಿಸುವುದಿಲ್ಲ ಎಂದು ಪ್ರತಿವಾದಿಗಳು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-31: ಪ್ರತಿವಾದಿಗಳಿಗೆ NREGA ಯೋಜನೆಯಡಿಯಲ್ಲಿ ಕೆಲಸ ಪಡೆಯಲು Job Card ಬಗ್ಗೆ ಜನರಲ್ಲಿ ಜಾಗೃತಿಯನ್ನು ಪಂಚಾಯಿತಿಯವರು ಮೂಡಿಸಿದ್ದಾರೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಯೋಜನೆಯಡಿಯಲ್ಲಿ ಕೆಲಸ ಪಡೆಯಲು Job Card ಮಾಡಿಸುವುದರ ಬಗ್ಗೆ ಪಂಚಾಯಿತಿಯವರು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆಯೇ ಎಂದು ತಿಳಿಯಲಾಗಿದೆ.

ಪಟ್ಟಿ ಸಂಖ್ಯೆ-32: ಪ್ರತಿವಾದಿಗಳಿಗೆ NREGA ಯೋಜನೆಯಡಿಯ ಬಗ್ಗೆ ಯಾವ ವರ್ಷದಲ್ಲಿ ಜಾಗೃತಿ ಮೂಡಿಸಿದರು ಎಂಬುದನ್ನು ಸೂಚಿಸುತ್ತದೆ.
ಶೇ.60% ರಷ್ಟು ಪ್ರತಿವಾದಿಗಳು NREGA ಯೋಜನೆಯ ಬಗ್ಗೆ 2005ರಲ್ಲಿ ಜಾಗೃತಿ ಮೂಡಿಸಿದರೆಂದು ತಿಳಿಸಿದರೆ ಉಳಿದ ಹಾಗೇ ಶೇ.40% ರಷ್ಟು ಪ್ರತಿವಾದಿಗಳು NREGA ಯೋಜನೆಯ ಬಗ್ಗೆ 2008ರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದ್ದರಿಂದ ಹೆಚ್ಚಾಗಿ ಶೇ.60% ರಷ್ಟು ಪ್ರತಿವಾದಿಗಳು ಆ ಹೇಳಿಕೆಯಂತೆ ಜಾಗೃತಿಯನ್ನು ಮೂಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-33: ಪ್ರತಿವಾದಿಗಳು ಈ ಯೋಜನೆಯಲ್ಲಿ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಖಾತೆ ತೆರೆಯುವುದು ಕಡ್ಡಾಯವೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಯೋಜನೆಯಲ್ಲಿ ಕೆಲಸ ಮಾಡಬೇಕಾದರೆ ಕಡ್ಡಾಯವಾಗಿ ಬ್ಯಾಂಕ್/ ಅಂಚೆ ಕಛೇರಿಯಲ್ಲಿ ಖಚಿತವಾಗಿ ಖಾತೆಯನ್ನು ತೆರೆಯಬೇಕು ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-34: ಪ್ರತಿವಾದಿಗಳು ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಖಾತೆಯನ್ನು ಹೊಂದಿದ್ದೀರಾ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಯೋಜನೆಯಡಿಯಲ್ಲಿ ಕೂಲಿಯನ್ನು ಪಡೆಯಬೇಕಾದರೆ ಖಚಿತವಾಗಿ ಪ್ರತಿವಾದಿಗಳು ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಖಾತೆಯನ್ನು ಹೊಂದಿರಬೇಕು ಎಂದು ಎಲ್ಲರೂ ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-35: ಪ್ರತಿವಾದಿಗಳು NREGA ಅಡಿಯಲ್ಲಿ ಕೆಲಸ ಮಾಡಲು ಕೌಶಲ್ಯದ ಅವಶ್ಯಕತೆ ಇದೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಅಡಿಯಲ್ಲಿ ಕೆಲಸ ಮಾಡಲು ಕೌಶಲ್ಯದ ಅವಶ್ಯಕತೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-36: ಪ್ರತಿವಾದಿಗಳು ಉದ್ಯೋಗ ಚೀಟಿ ಪಡೆದ ಎಷ್ಟು ದಿನಗಳ ನಂತರ ಕೆಲಸ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಶೇ.36% ರಷ್ಟು ಪ್ರತಿವಾದಿಗಳು ಉದ್ಯೋಗ ಚೀಟಿ ನೀಡಿದ ನಂತರ ಈ ಮೇಲಿನ ಹೇಳಿಕೆಯ ದಿನಗಳಲ್ಲಿ ಕೆಲಸ ದೊರೆಯುತ್ತದೆ ಹಾಗೇ ಶೇ.64% ರಷ್ಟು ಪ್ರತಿವಾದಿಗಳು ಉದ್ಯೋಗ ಚೀಟಿ ನೀಡಿದ ನಂತರ ಈ ಹೇಳಿಕೆಯಂತೆ ದಿನಗಳಲ್ಲಿ ಕೆಲಸ ದೊರೆಯುತ್ತದೆ ಎಂದು ಕಂಡು ಬಂದಿದೆ ಹೆಚ್ಚಾಗಿ ಶೇ.64% ರಷ್ಟು ಪ್ರತಿವಾದಿಗಳು ಉದ್ಯೋಗ ಚೀಟಿ ಪಡೆದ ನಂತರ ಈ ಹೇಳಿಕೆಯ ಪ್ರಕಾರ ದಿನಗಳಲ್ಲಿ ಕೆಲಸ ದೊರೆಯುತ್ತದೆ ಎಂಬುದನ್ನು ತಿಳಿಯಲಾಗಿದೆ.

ಪಟ್ಟಿ ಸಂಖ್ಯೆ-37: ಪ್ರತಿವಾದಿಗಳು ಈ ಯೋಜನೆಯಲ್ಲಿ ಸಮಾನವಾಗಿ ಶ್ರೀ ಸಾಮಾನ್ಯರಿಗೆ ತಲುಪಿದೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು NREGA ಯೋಜನೆಯಲ್ಲಿ ಸಮಾನವಾಗಿ ಶ್ರೀ ಸಾಮಾನ್ಯರಿಗೆ ತಲುಪುತಿದೆ ಎಂದು ಈ ಮೇಲಿನ ಪಟ್ಟಿಯಲ್ಲಿ ತಿಳಿಯಬಹುದಾಗಿದೆ.

ಪಟ್ಟಿ ಸಂಖ್ಯೆ-38: ಪ್ರತಿವಾದಿಗಳಲ್ಲಿ ಉದ್ಯೋಗ ನೀಡುವಲ್ಲಿ ಪಂಚಾಯಿತಿಯವರು ಜಾತಿ, ಧರ್ಮ, ಭೇದ-ಭಾವ ಮಾಡಿದ್ದಾರೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.28% ರಷ್ಟು ಪ್ರತಿವಾದಿಗಳು ಉದ್ಯೋಗ ನೀಡುವಲ್ಲಿ ಪಂಚಾಯಿತಿಯವರು ಜಾತಿ, ಧರ್ಮ ಎಂಬ ಭೇದ-ಭಾವ ಮಾಡುತ್ತಾರೆ ಹಾಗೇ ಶೇ.72% ರಷ್ಟು ಪ್ರತಿವಾದಿಗಳು ಉದ್ಯೋಗ ನೀಡುವಲ್ಲಿ ಪಂಚಾಯಿತಿಯವರು ಜಾತಿ, ಧರ್ಮ ಎಂಬ ಭೇದ-ಭಾವ ಮಾಡುವುದಿಲ್ಲ ಎಂದು ತಿಳಿಯಬಹುದಾಗಿದೆ ಹಾಗೆಯೇ ಶೇ.72% ರಷ್ಟು ಪ್ರತಿವಾದಿಗಳು ಹೆಚ್ಚಾಗಿ ಹೇಳಿಕೆಯನ್ನು ನೀಡಿದ್ದಾರೆ. ಜಾತಿ, ಧರ್ಮ ಎಂದು ಗ್ರಾಮ ಪಂಚಾಯಿತಿಯವರು ಭೇದ-ಭಾವ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-39: ಪ್ರತಿವಾದಿಗಳು ಈ ಹಳ್ಳಿಯಲ್ಲಿ NREGA ಯೋಜನೆಯ ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಿ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.30% ರಷ್ಟು ಪ್ರತಿವಾದಿಗಳು NREGA ಯೋಜನೆಯಡಿಯಲ್ಲಿ ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಿದ್ದಾರೆ ಹಾಗೇ ಶೇ. ಶೇ.70% ರಷ್ಟು ಪ್ರತಿವಾದಿಗಳು ಕೆಲಸಗಳಿಗೆ ಯಂತ್ರಗಳನ್ನು ಬಳಸುವುದಿಲ್ಲ ಎಂದು ತಿಳಿಯಲಾಗಿದೆ ಹಾಗೂ ಹೆಚ್ಚಾಗಿ ಶೇ. ಶೇ.70% ರಷ್ಟು ಪ್ರತಿವಾದಿಗಳು NREGA ಯೋಜನೆಯಲ್ಲಿ ಯಂತ್ರಗಳನ್ನು ಬಳಸುವುದಿಲ್ಲ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-40: ಪ್ರತಿವಾದಿಗಳಿಗೆ ಹಳ್ಳಿಯಲ್ಲಿ ಕೆಲಸದ ಅವಶ್ಯವಿರುವವರಿಗೆಲ್ಲಾ NREGA ಅಡಿಯಲ್ಲಿ ಕೆಲಸ ದೊರೆತಿದೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ್ರತಿವಾದಿಗಳು ಹಳ್ಳಿಯಲ್ಲಿ ಕೆಲಸದ ಅವಶ್ಯವಿರುವವರಿಗೆಲ್ಲಾ NREGA ಅಡಿಯಲ್ಲಿ ಕೆಲಸ ದೊರೆಯುತ್ತದೆ ಎಂದು ತಿಳಿಸಿದ್ದಾರೆ.

ಪಟ್ಟಿ ಸಂಖ್ಯೆ-41: ಪ್ರತಿವಾದಿಗಳಿಗೆ NREGA ಅಡಿಯಲ್ಲಿ ಕೈಗೊಂಡ ಕೆಲಸಗಳು ಜನರಿಗೆ ಅನುಕೂಲವಾಗುತ್ತಿದೆಯೇ ಎಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳಿಗೆ NREGA ಅಡಿಯಲ್ಲಿ ಕೈಗೊಂಡ ಕೆಲಸಗಳು ಜನರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಯಲಾಗಿದೆ.

ಪಟ್ಟಿ ಸಂಖ್ಯೆ-42: ಪ್ರತಿವಾದಿಗಳು NREGA ಬಗ್ಗೆ ಅವರ ಅಭಿಪ್ರಾಯ ಏನೆಂಬುದನ್ನು ಸೂಚಿಸುತ್ತದೆ.
ಶೇ.100% ರಷ್ಟು ಪ್ರತಿವಾದಿಗಳು ರಾಜ್ಯದ ಹಲವೆಡೆ NREGA ಅಡಿಯಲ್ಲಿ ಕೈಗೊಂಡ ಕೆಲಸಗಳು ಸ್ವ ಹಿತಾಸಕ್ತಿಯಿಂದ ಹೊಂದಿದೆ ಎಂದರೆ ಪ್ರತಿವಾದಿಗಳು ಜೀವನ ಉತ್ತಮಗೊಳಿಸಲು ಎಂದು ತಿಳಿಸಿದ್ದಾರೆ.

ಅಧ್ಯಾಯ-5. ಉಪಸಂಹಾರ ಮತ್ತು ಸಲಹೆಗಳು
ಉಪಸಂಹಾರ:
ಯಾವುದೇ ಒಂದು ಅಧ್ಯಯನ ಪ್ರಾರಂಭವಾಗಬೇಕಾದರೆ ಅದಕ್ಕೆ ಪ್ರಸ್ತಾವನೆ ಎಷ್ಟು ಪ್ರಾಮುಖ್ಯವೋ ಹಾಗೆಯೇ ಆ ಅಧ್ಯಯನ ಪೂರ್ಣವಾಗಲು ಅದಕ್ಕೆ ಉಪಸಂಹಾರ ಅಷ್ಟೇ ಪ್ರಾಮುಖ್ಯವಾದುದಾಗಿದೆ.
NREGA ಯೋಜನೆಯಡಿಯಲ್ಲಿ ಕೆಲಸವನ್ನು ಮಾಡುವುದರಿಂದ ಆರೋಗ್ಯದ ಸಮಸ್ಯೆಯನ್ನು ಹಾಗೂ ಜೀವನ ಸಾಗಿಸಲು ತೊಂದರೆಗಳನ್ನು ಎದುರಿಸುತ್ತಿರುವುದು ಸಹಾ ಕಂಡು ಬಂದಿದೆ.
NREGA ಯೋಜನೆಯಡಿಯಲ್ಲಿ ಫಲಾನುಭವಿಗಳ ತೊಂದರೆಗಳು ಇವರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳ ಮಟ್ಟವನ್ನು ಅಳೆಯಲು ಬೇಕಾದ ಮಾಹಿತಿಗಳನ್ನು ಒಟ್ಟು 50 ಕೆಲಸಗಾರರಿಂದ ಸಂದರ್ಶನ ಅನುಸೂಚಿಯ ಮೂಲಕ ಪಡೆಯಲಗಿದೆ.
NREGA ಯೋಜನೆಯಿಂದ ವಯಸ್ಕ ನಿರುದ್ಯೋಗಿಗಳಿಗೆ ವರದಾನವಾಗಿದೆ.
ಗ್ರಾಮಗಳಿಂದ ನಗರಕ್ಕೆ ವಲಸೆ ಹೋಗುವುದನ್ನು ಕೊಂಚ ತಡೆಗಟ್ಟಲಾಗಿದೆ.
ಈ ಯೋಜನೆಯ ಜನರ ಜೀವನ ಮಟ್ಟ ಉತ್ತಮ ಪಡಿಸಲು ಉತ್ತಮವಾಗಿದೆ.
ಜನರಿಗೆ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿಲ್ಲದಿರುವುದು ಸಂದರ್ಶನದಲ್ಲಿ ತಿಳಿದು ಬಂದಿದೆ.
 ಈ ಯೋಜನೆಯು ಸರ್ಕಾರದ ಮಹತ್ವವಾದ ಕಾರ್ಯಕ್ರಮವಾಗಿದ್ದು ಅತಿಕಾಲಿಕ ನಿರುದ್ಯೋಗ ಹಾಗೂ ದೀರ್ಘಕಾಲಿಕ ನಿರುದ್ಯೋಗವನ್ನು ಹೋಗಲಾಡಿಸಲು ಈ ಯೋಜನೆ ಸಹಾಯಕವಾಗಿದೆ. ಸ್ತ್ರೀ-ಪುರುಷ ಸಮಾನತೆ, ಮಹಿಳಾ ಸಬಲೀಕರಣಕ್ಕೆ ಇದು ಸಹಾಯಕವಾಗಿದೆ. ಈ ಯೋಜನೆಯಡಿಯಲ್ಲಿ ಕೆಲಸಕ್ಕೆ ಬಂದ ಜನರಲ್ಲಿ ಸಹಬಾಳ್ವೆ, ಸೋದರತ್ವ, ಸಹಕಾರ ಭಾವನೆಗಳನ್ನು ಬೆಳೆಸಬಹುದು ಹಾಗೂ ಜೀವನ ಸುಧಾರಿಸಲು ಆರ್ಥಿಕವಾಗಿ ಬದಲಾವಣೆಗಳನ್ನು ತರಬಹುದಾಗಿದೆ.

ಸಲಹೆಗಳು:
ಸಂಶೋಧಕನು NREGA ಯೋಜನೆಯಡಿಯ ಕೆಲಸಗಾರರ ಬಗ್ಗೆ ಅವಲೋಕಿಸಿದಾಗ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಬೇಕು ಎಂದು ಈ ಕೆಳಗಿನ ಅಂಶಗಳನ್ನು ಗುರ್ತಿಸಿದ್ದಾರೆ ಅವುಗಳೆಂದರೆ;
NREGA ಯೋಜನೆಯ ಜನರ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದನ್ನು ಅಧ್ಯಯನ ಮಾಡಿ ಕ್ರಮಗಳನ್ನು ಕೈಗೊಳ್ಳುವುದು.
NREGA ಯೋಜನೆಯಲ್ಲಿ ಹಾಜರಾತಿಯ ನಿರ್ವಹಣೆಯನ್ನು ಪರೀಕ್ಷಿಸುವುದು ಹಾಗೂ ಹಾಜರಾತಿ ಪರೀಕ್ಷೆಗಾಗಿ ಸೂಕ್ತ ಕ್ರಮ ಕೈಗೊಳ್ಳುವುದು.
NREGA ಯೋಜನೆಯಲ್ಲಿನ ಕಾಮಗಾರಿಗಳನ್ನು ಮೌಲ್ಯಮಾಪನ ಮಾಡುವುದು ಕಾಮಗಾರಿಯ ಸ್ಥಳದಲ್ಲಾಗುವ ಅವ್ಯವಹಾರವನ್ನು ತಡೆಯಲು ಸೂಕ್ತ ಅಧಿಕಾರಿಗಳ ನೇಮಕ ಮಾಡುವುದು.
ಈ NREGA ಯೋಜನೆಯ ಬೇರೆ ಬೇರೆ ಜಿಲ್ಲೆ ರಾಜ್ಯಗಳಲ್ಲಿ ಇದರ ಅನುಷ್ಠಾನ, ಪ್ರಗತಿ, ಕಾರ್ಯ ವೈಖರಿಯ ಬಗ್ಗೆ ಅಧ್ಯಯನ ಮಾಡುವುದು.
ಈ NREGA ಯೋಜನೆಯ ಸೂತ್ರಗಳಾದ ಜನರಿಗೆ 365 ದಿನಗಳಲ್ಲಿ 100 ದಿನಗಳ ಉದ್ಯೋಗ ನೀಡಿಕೆಯಿಂದ ಪಟ್ಟಣಗಳ ವಲಸೆಯನ್ನು ತಡೆಗಟ್ಟುವುದು.
ಈ NREGA ಯೋಜನೆಯಲ್ಲಾಗುವ ಭ್ರಷ್ಟತೆಯನ್ನು ತಡೆಯಲು ದೋಷಗಳನ್ನು ಕಂಡುಹಿಡಿದು ನಿವಾರಿಸಲು ಸೂಕ್ತ ಅಧಿಕಾರಿ ಮತ್ತು ಸಮಿತಿಗಳನ್ನು ನೇಮಿಸುವುದು.

ಆಧಾರ ಗ್ರಂಥಗಳು:
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ-ಕೆ. ಭೈರಪ್ಪ
ಭಾರತದ ಆರ್ಥಿಕ ಅಭಿವೃದ್ಧಿ-ಹೆಚ್.ಆರ್.ಕೆ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ (ಓದುವ ಸಾಮಗ್ರಿ)
Dreze (2007)-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಶೋಧನೆ.
ಶಂಕರ್ ಮತ್ತು ಷಾ (2008)-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಶೋಧನೆ.
ಮೆಹೆತ್ರಾ (2008)-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಶೋಧನೆ.
ಖೇರಾ (2008)-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಶೋಧನೆ.
ಅಮೂರ್ತ (2005)-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಶೋಧನೆ.
ಆಕ್ಟ್ (2005)-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಶೋಧನೆ.
ಇಂದಿರಾ-ಸಾಮಾಜಿಕ ಸಂಶೋಧನಾ ವಿಧಾನಗಳು, ವಿದ್ಯಾಸಾಗರ್ ಮುದ್ರಣ ಮತ್ತು ಪ್ರಕಟಣಾಲಯ, ಮೈಸೂರು.
ಚ.ನ.ಶಂಕರರಾವ್-ಸಾಮಾಜಿಕ ಸಂಶೋಧನೆಯ ಕೈಪಿಡಿ (1997), ಜೈ ಭಾರತ ಪ್ರಕಾಶನ, ಮಂಗಳೂರು.
ಭೈರಪ್ಪ. ಕೆ (1985)-ಸಾಮಾಜಿಕ ಸಂಶೋಧನಾ ವಿಧಾನಗಳು ಭಾಗ-1, ವಿದ್ಯಾನಿಧಿ ಪ್ರಕಾಶನ, ಗದಗ.

ಪ್ರಶ್ನಾವಳಿ:-
ವೈಯಕ್ತಿಕ ವಿವರ:
ಹೆಸರು:
ವಯಸ್ಸು: ಎ. 20-30 ಬಿ. 31-40 ಸಿ. 41-50
ಲಿಂಗ: ಹೆಣ್ಣು ಬಿ. ಗಂಡು
ಶಿಕ್ಷಣ: ಎ.ಅನಕ್ಷರಸ್ಥ ಬಿ. ಪ್ರಾಥಮಿಕ ಶಾಲೆ ಸಿ.ಪ್ರೌಢ ಶಾಲೆ
ವೈವಾಹಿಕ: ಎ. ವಿವಾಹಿತ ಬಿ. ಅವಿವಾಹಿತ
ಕುಟುಂಬದ ವಿಧ: ಎ. ವಿಭಕ್ತ ಬಿ. ಅವಿಭಕ್ತ
ಧರ್ಮ: ಎ. ಹಿಂದೂಬಿ. ಮುಸ್ಲಿಂ
ಮಾತೃ ಭಾಷೆ: ಎ. ಕನ್ನಡಬಿ. ತೆಲುಗು
ವಾರ್ಷಿಕ ಆದಾಯ: ಎ. 10,000 ಬಿ. 11,000

ಕೌಟುಂಬಿಕ ಹಿನ್ನಲೆ
ಕ್ರ.ಸ    ಹೆಸರು    ವಯಸ್ಸು    ಸಂಬಂಧ    ಲಿಂಗ    ವೃತ್ತಿ    ಆದಾಯ    ಇತರೆ
ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೀರಾ? ಎ. ಹೌದು () ಬಿ. ಇಲ್ಲ ()
ಯಾವ ರೀತಿಯ ಮನೆಯಲ್ಲಿ ವಾಸಿಸುತ್ತಿದ್ದಿರಾ? ಎ. ಕಚ್ಚಾ () ಬಿ. ಭಾಗಶಃ ಪಕ್ಕಾ () ಸಿ. ಪಕ್ಕಾ ( )
ನಿಮ್ಮ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇದೆಯೇ? ಎ. ಹೌದು () ಬಿ. ಇಲ್ಲ ()
ನಿಮ್ಮ ಹಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವಿದೆಯೇ? ಎ. ಹೌದು () ಬಿ. ಇಲ್ಲ ()
ನಿಮ್ಮ ಮನೆಯಲ್ಲಿ ಈ ಉಪಕರಣಗಳಿವೆಯೇ? ಎ. ದೂರದರ್ಶನ ಬಿ. ರೇಡಿಯೋ ಸಿ. ಮೋಟರ್ ಸೈಕಲ್ ಡಿ. ಮೊಬೈಲ್ / ದೂರವಾಣಿ ಇ. ಗ್ಯಾಸ್/ಸಿಲಿಂಡರ್
ನೀವು ಗಳಿಸುವ ಆದಾಯದಿಂದ ಜೀವನ ನಿರ್ವಹಿಸಲು ಸಾಧ್ಯವೇ? ಎ. ಹೌದು () ಬಿ. ಇಲ್ಲ ()
ಇಲ್ಲವಾದರೆ ಜೀವನೋಪಾಯಕ್ಕಾಗಿ ಬೇರೆ ಯಾವುದಾದರೂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಾ? ಎ. ಹೌದು () ಬಿ. ಇಲ್ಲ ()
ನೀವು ಆಚರಿಸುವ ಹಬ್ಬಗಳಿಗೆ ಖರ್ಚು ಮಾಡುವ ಕನಿಷ್ಟ ಹಣವೆಷ್ಟು? ಎ. 3,000() ಬಿ. 4,000()
ನಿಮ್ಮ ಆಹಾರ ಮತ್ತು ವಸತಿ ಹೊರತುಪಡಿಸಿ ವಾರ್ಷಿಕ ವೆಚ್ಚದ ಬಹು ಭಾಗವನ್ನು ಈ ಕೆಳಗಿನ ಯಾವುದಾದರೂ ವಿನಿಯೋಗಿಸಿದ್ದಿರಾ? ಎ. ಶಿಕ್ಷಣ() ಬಿ. ಹಬ್ಬ-ಹರಿದಿನ() ಸಿ. ಆರೋಗ್ಯ() ಡಿ. ಇತರೆ ()
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ನಿಮಗೆ ಗೊತ್ತಿದ್ದೆಯಾ? ಎ. ಹೌದು () ಬಿ. ಇಲ್ಲ ()
ಎಷ್ಟು ವರ್ಷದಿಂದ ಈ ಯೋಜನೆ ಜಾರಿಯಲ್ಲಿದೆ? ಎ. 2005() ಬಿ. 2008()
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಣ್ಣು ಮತ್ತು ಗಂಡು ಎಂದು ಕೂಲಿ ತಾರತಮ್ಯವಿದೆಯೇ? ಎ. ಹೌದು () ಬಿ. ಇಲ್ಲ ()
ಪ್ರಸ್ತುತ ನಿಮಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದೊರೆಯುತ್ತಿರುವ ಕೂಲಿ ಎಷ್ಟು? ಎ. 174() ಬಿ. 164()
ಎಷ್ಟು ದಿನಗಳಿಗೆ ಒಮ್ಮೆ ಕೂಲಿ ದೊರೆಯುತ್ತದೆ? ಎ. 3 ದಿನ() ಬಿ. 2 ದಿನ()
ಕೂಲಿಯನ್ನು ಯಾರು ಕೊಡುತ್ತಾರೆ? ಎ. ಕಾರ್ಯಕರ್ತರು() ಬಿ. ಸದಸ್ಯರು()
ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಖಾತೆ ಹೊಂದಿದ್ದೀರಾ? ಎ. ಹೌದು () ಬಿ. ಇಲ್ಲ ()
ಎಷ್ಟು ದಿನಗಳಿಗೆ ಒಮ್ಮೆ ಕೂಲಿ ಹಣ ಜಮಾ ಆಗುತ್ತದೆ? ಎ. 7() ಬಿ. 6()
ನೀವು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಠಛ ಅಚಿಡಿಜ) ಹೊಂದಿದ್ದೀರಾ? ಎ. ಹೌದು () ಬಿ. ಇಲ್ಲ ()
Job Card ಹೊಂದಿದಂದಿನಿಂದ ನೀವು ಪ್ರತೀವರ್ಷ 100 ದಿನಗಳ ಕೆಲಸ ಪಡೆದಿದ್ದೀರಾ? ಎ. ಹೌದು () ಬಿ. ಇಲ್ಲ ()
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ನಿಮ್ಮ ಗ್ರಾಮಸ್ಥರಿಗೆ ಮಾಹಿತಿಯನ್ನು ಪಂಚಾಯಿತಿಯವರು ನೀಡಿದ್ದಾರೆಯೇ? ಎ. ಹೌದು () ಬಿ. ಇಲ್ಲ ()
ಈ ಯೋಜನೆಯಡಿಯಲ್ಲಿ ಮಕ್ಕಳು ಕೆಲಸ ಮಾಡಬಹುದೇ? ಎ. ಹೌದು () ಬಿ. ಇಲ್ಲ ()
ಒNREGA ಯೋಜನೆಯಡಿಯಲ್ಲಿ ಕೆಲಸ ಪಡೆಯಲು ಜಾಬ್ಕಾರ್ಡ್ ಮೂಡಿಸುವುದರ ಬಗ್ಗೆ ಜನರಲ್ಲಿ ಜಾಗೃತಿಯನ್ನು ಪಂಚಾಯಿತಿಯವರು ಮೂಡಿಸಿದ್ದಾರೆಯೇ? ಎ. ಹೌದು () ಬಿ. ಇಲ್ಲ ()
ಒNREGA ಯೋಜನೆಯ ಬಗ್ಗೆ ಯಾವ ವರ್ಷದಲ್ಲಿ ಜಾಗೃತಿ ಮೂಡಿಸಿದರು? ಎ. 2005() ಬಿ. 2008()
ಈ ಯೋಜನೆಯಲ್ಲಿ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಖಾತೆ ತೆರೆಯುವುದು ಕಡ್ಡಾಯವೇ? ಎ. ಹೌದು () ಬಿ. ಇಲ್ಲ ()
ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಖಾತೆ ಹೊಂದಿದ್ದೀರಾ? ಎ. ಹೌದು () ಬಿ. ಇಲ್ಲ ()
ಒNREGA ಅಡಿಯಲ್ಲಿ ಕೆಲಸ ಮಾಡಲು ಕೌಶಲ್ಯದ ಅವಶ್ಯಕತೆ ಇದೆಯೇ? ಎ. ಹೌದು () ಬಿ. ಇಲ್ಲ ()
ಉದ್ಯೋಗ ಚೀಟಿ ಪಡೆದ ಎಷ್ಟು ದಿನಗಳ ನಂತರ ಕೆಲಸ ಸಿಗುತ್ತದೆ? ಎ. 6() ಬಿ. 15()
ಈ ಯೋಜನೆಯಲ್ಲಿ ಸಮಾನವಾಗಿ ಶ್ರೀಸಮಾನ್ಯರಿಗೆ ತಲುಪಿದೆಯೇ? ಎ. ಹೌದು () ಬಿ. ಇಲ್ಲ ()
 ಉದ್ಯೋಗ ನೀಡುವಲ್ಲಿ ಪಂಚಾಯಿತಿಯವರು ಜಾತಿ, ಧರ್ಮ ಎಂಬ ಭೇದ-ಭಾವ ಮಾಡಿದ್ದಾರೆಯೇ? ಎ. ಹೌದು () ಬಿ. ಇಲ್ಲ ()
ನಿಮ್ಮ ಹಳ್ಳಿಯಲ್ಲಿ ಒNREGA ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಿ ಕೆಲಸ ಮಾಡಿದ ನಿದರ್ಶನಗಳಿವೆಯೇ? ಎ. ಹೌದು () ಬಿ. ಇಲ್ಲ ()
ನಿಮ್ಮ ಹಳ್ಳಿಯಲ್ಲಿ ಕೆಲಸದ ಅವಶ್ಯವಿರುವವರಿಗೆಲ್ಲಾ ಒNREGA ಅಡಿಯಲ್ಲಿ ಕೆಲಸ ದೊರೆತಿದೆಯೇ? ಎ. ಹೌದು () ಬಿ. ಇಲ್ಲ ()
ಒNREGA ಅಡಿಯಲ್ಲಿ ಕೈಗೊಂಡ ಕೆಲಸಗಳು ಜನರಿಗೆ ಅನುಕೂಲವಾಗುತ್ತಿದೆಯೇ? ಎ. ಹೌದು () ಬಿ. ಇಲ್ಲ ()
ರಾಜ್ಯದ ಹಲವೆಡೆ ಒNREGA ಅಡಿಯಲ್ಲಿ ಕೈಗೊಂಡ ಕೆಲಸಗಳು ಸ್ವಹಿತಾಸಕ್ತಿಯನ್ನು ಹೊಂದಿವೆ ಎಂಬುದು ಕೇಳಲ್ಪಡುತ್ತಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎ. ಜೀವನ ಉತ್ತಮಗೊಳಿಸಲು() ಬಿ. ಸಮಸ್ಯೆ ನಿವಾರಿಸಲು()
 

No comments:

Post a Comment